ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಗಣರಾಜ್ಯೋತ್ಸವದ ಆಚರಣೆ

ಬೀದರ್ :ಜ.27: ನಗರದಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ್ ಅಕಾಡೆಮಿಯು ದಿನಾಂಕ 26 ಜನವರಿ ರಂದು77ನೇ ಗಣರಾಜ್ಯೋತ್ಸವವನ್ನು ಅತಿ ಸಂಭ್ರಮದಿಂದ ಆಚರಿಸಲಾಯಿತು. ಅಕ್ಯಾಡಮಿಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕ್ಕನ್ಪುರೆ ಅವರು ಭಾರತಾಂಬೆ ಮತ್ತು ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣವನ್ನು ನೆರವೇರಿಸಿ ಕೊಟ್ಟರು. ನಂತರ ಮಕ್ಕಳಿಂದ ಆಕರ್ಷಕ ಪಥ ಸಂಚಲನವು ನಡೆಯಿತು. ಈ ಪಥ ಸಂಚಲನಕ್ಕೆ ಅನುಮತಿಯನ್ನು ಮುಖ್ಯ ಅತಿಥಿಗಳಾದ ಜಿಪಿ ಕ್ಯಾಪ್ಟನ್ ವಿ ಎನ್ ಎಲ್ ರೆಡ್ಡಿ, ಭಾರತೀಯ ವಾಯುಪಡೆಯ ಒಬ್ಬ ಗಣ್ಯಅಧಿಕಾರಿ ಮತ್ತು ಪ್ರಸ್ತುತ ಬೀದರನ ಎನ್‍ಸಿಸಿಯ 3 ಕೆ ಎ ಆರ್ ಏರ್ ಸ್ಕ್ವಡ್ರ (ಟಿ ) ನ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಖ್ಯಾತ ಅಧಿಕಾರಿ, ಅನುಭವಿ ಏರೋನಾಟಿಕಲ್ ಇಂಜಿನಿಯರ್, ಯುಕೆಡೆಟ್ ಗಳಿಗೆ ಮಾರ್ಗದರ್ಶನ ಮತ್ತು ಅತ್ಯುತ್ತಮ ನಾಯಕರು.ಶಾಲಾ ನಾಯಕ, ಉಪನಾಯಕ, ಶಾಲಾ ಬ್ಯಾಂಡ್ ತಂಡದೊಂದಿಗೆ ನಾಲ್ಕು ತಂಡಗಳಾದ ಕರಿಯಪ್ಪ, ತಿಮ್ಮಯ್ಯ, ಮಾನೆ ಕ್ಷಾ, ಸುಂದರ್ ಜಿ ತಂಡಗಳ ನಾಯಕ ಹಾಗೂ ಉಪನಾಯಕರು ತಂಡಗಳನ್ನು ಮುನ್ನಡೆಸಿ ಅಚ್ಚು ಕಟ್ಟಾಗಿ ಪಥಸಂಚನದಲ್ಲಿ ಹೆಜ್ಜೆ ಹಾಕುತ್ತಾ ಶಿಸ್ತಿನ ಸಿಪಾಯಿಗಳಂತೆ ಮುನ್ನುಗ್ಗಿದರು. ಒಟ್ಟು 250ಕ್ಕೂ ಹೆಚ್ಚು ಮಕ್ಕಳು ಪಥ ಸಂಚನದಲ್ಲಿ ಭಾಗವಹಿಸಿದರು. ಮೊಟ್ಟಮೊದಲ ಬಾರಿಗೆ ಶಾಲೆಯ ಬ್ಯಾಂಡ್ ಸೊಗಸಾದ ತಾಳ ಮತ್ತು ಶಿಸ್ತಿನ ನಡೆಯಲಿ ಎಲ್ಲಾ ಕಂಟಿನ್ನ ಜೆಂಟಗಳನ್ನು ಮುನ್ನಡೆಸುತ್ತಾ ದೇಶಭಕ್ತಿಯ ಆತ್ಮವನ್ನು ಹೋತಿ ಸಂಚಲನದಲ್ಲಿ ಭಾಗವಹಿಸಿ ಆಕರ್ಷಣೆ ತಂದಿತು.ನಿಶ್ಚಿತ ಶಿಸ್ತಿನೊಂದಿಗೆ ಹೆಜ್ಜೆ ಹಾಕುತ್ತಾ ನಮ್ಮಧೈರ್ಯಶಾಲಿಎನ್ಸಿಸಿ ತಂಡವು ಶೌರ್ಯ ಮತ್ತು ನಿಷ್ಠೆಯ ಪ್ರತಿಕವಾಗಿ ತಂಡವನ್ನು ಮುನ್ನಡೆಸುತ್ತಿದ್ದರು. ನಂತರ ಕೆಂಪು ಬಣ್ಣದ ಸಮವಸ್ತ್ರವನ್ನು ಧರಿಸಿ ಕರಿಯಪ್ಪ ತಂಡದ ನಾಯಕ ಉಪನಾಯಕ ತಮ್ಮ ತಂಡವನ್ನು ಮುನ್ನಡೆಸಿದರು. ಹಾಗೇ ನೀಲಿ ಬಣ್ಣದ ಸಮಸ್ತ್ರವನ್ನು ಧರಿಸಿ ತಿಮ್ಮಯ್ಯ ತಂಡದ ನಾಯಕ ಮತ್ತು ಉಪನಾಯಕ ತಮ್ಮ ತಂಡವನ್ನು ಮುನ್ನಡೆಸಿದರು.ಹಾಗೆ ಹಸಿರು ಬಣ್ಣದಸಮವಸ್ತ್ರವನ್ನು ಧರಿಸಿ ಮಾನೆಕ್ಷಾ ತಂಡದ ನಾಯಕ ಮತ್ತು ಉಪನಾಯಕರು ತಮ್ಮ ತಂಡವನ್ನು ಮುನ್ನಡೆಸಿದರು. ನಂತರ ಬರುವ ಹಳದಿ ಬಣ್ಣದ ಸಮವಸ್ತ್ರವನ್ನು ಧರಿಸಿ ನಾಯಕ ಮತ್ತು ಉಪನಾಯಕ ತಂಡವನ್ನು ಮುನ್ನಡೆಸಿಕೊಂಡು ಹೋದರು. ಈ ಪಥ ಸಂಚಲನವುಒಂದು ಶಕ್ತಿಯುತ ಸಂದೇಶವನ್ನು ಬಿಟ್ಟು ಹೋಗುತ್ತದೆ ಶಿಸ್ತಿನ ತಲೆಮಾರು ಒಂದು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸುತ್ತದೆ ನಾವು ಇಂದು ನೋಡುವುದು ನಾಳೆಯ ನಾಯಕತ್ವದ ಅಡಿಪಾಯವಾಗಿದೆ. ಈ ಕ್ಷಣವು ನಮಗೆ ಒಂದು ಪಾಠ ಕಲಿಸುತ್ತದೆ ಪ್ರಗತಿ ಆತುರದಲ್ಲಿ ಆಗುವುದಿಲ್ಲ ಅದುಉದ್ದೇಶಪೂರ್ಣ ಹೆಜ್ಜೆಗಳೊಂದಿಗೆ ಸಾಗುತ್ತದೆಎಂದು ಗ್ಲೋಬಲ್ ಸೈನಿಕ ಅಕಾಡೆಮಿಯ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ಅಕಾಡೆಮಿಯಲ್ಲಿ ಅಂತರ ಮನೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆವು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಸಾಂಗಿಕ ಕೆಲಸ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಇರುವ ಅತ್ಯುತ್ತಮ ವೇದಿಕೆಯಾಗಿದೆ ಇದು ತಂಡದ ಸ್ಪೂರ್ತಿ ದೈಹಿಕ ಸಾಮಥ್ರ್ಯ ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಮನೆಗಳಿಗಾಗಿ (ಊouses)ಗೆಲ್ಲುವ ಉತ್ಸಾಹವನ್ನು ನೀಡುತ್ತದೆ.( ಓuಡಿseಡಿಥಿ) ಶಿಶು ವಿಹಾರ ದಿಂದ 9ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸ್ಯಾಕ್ ರೇಸ, ಸ್ಕಿಪಿಂಗ್ ಅಥ್ಲೆಟಿಕ್ಸ್ 100 ಮೀಟರ್, ಕಪ್ಪೆ ಜಿಗಿತ, ರಿಲೇ ರೇಸ್ ವಾಲಿಬಾಲ್, ಕಬ್ಬಡಿ,ಕ್ರಿಕೆಟ್, ಥ್ರೋಬಾಲ್,ಹಗ್ಗ ಜಗ್ಗಾಟ ಮುಂತಾದ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಗೆಲುವನ್ನು ಸಾಧಿಸಿದರು. ಕ್ರೀಡೆಗಳಲ್ಲಿ ವಿಜೇತರಾದವರಿಗೆ ಅಧ್ಯಕ್ಷರಿಂದ ಹಾಗೂ ಮುಖ್ಯ ಅತಿಥಿಗಳಿಂದ ಬಹುಮಾನಗಳನ್ನು ವಿತರಿಸಲಾಯಿತು. ಈ ಸಮಾರಂಭವನ್ನು ಕುರಿತು ಕರ್ನಲ್ ಶರಣಪ್ಪ ಸಿಕ್ಕನ್ಪುರೆ ಅವರು ಮಾತನಾಡಿದರುನಮ್ಮ ಯೋಗ್ಯತೆ ಹಾಗೂ ಸಮಯದ ಪರಿಪಾಲನೆಯು ನಮ್ಮ ಪ್ರತಿಷ್ಠೆ ಯಾಗಿದೆ.ನಮ್ಮ ದೇಶ ಆರ್ಥಿಕವಾಗಿ ಮುನ್ನಡೆಯಬೇಕು ನಮಗೆ ಸ್ವಾತಂತ್ರ ದೊರಕಿ ನೂರು ವರ್ಷಗಳನ್ನು ಪೂರ್ಣಗೊಳಿಸಿದ್ದೇವೆ. ಈಗ ನಮ್ಮ ಕನಸು ವಿಕಸಿತ ಭಾರತದಾಗಿದೆ. ನನ್ನ ಒಂದು ಕನಸಾಗಿತ್ತು ನಾನು ಹುಟ್ಟಿದ ಪ್ರದೇಶ ಹಾಗೂ ಹಿಂದುಳಿದ ಪ್ರದೇಶದ ಮಕ್ಕಳ ಸಲುವಾಗಿ ಏನಾದರೂ ಮಾಡಬೇಕೆಂದು ಅದಕ್ಕಾಗಿ ನಾನು ಗ್ಲೋಬಲ್ ಸೈನಿಕ್ ಅಕಾಡೆಮಿಯನ್ನು ತೆರೆದೆ ಇದರಲ್ಲಿ ಮಕ್ಕಳಿಗೆ ಶಿಸ್ತು, ನೈತಿಕ ಮೌಲ್ಯಗಳು, ಹಾಗೂ ಶಿಸ್ತಿನ ಸಿಪಾಯಿಗಳನ್ನು ದೇಶಕ್ಕೆ ಕೊಡುವ ಛಲದಿಂದ ನಾನು ಅವರನ್ನು ಬೆಳೆಸುತ್ತಿದ್ದೇನೆ. ನಾವು ಪ್ರವಾಸೋದ್ಯಮಕ್ಕೆ ಹೋಗಿದ್ದರು ವಾಯುಪಡೆ, ಸೈನ್ಯ ಪಡೆಯ, ರಕ್ಷಣಾ ಪಡೆಗಳ ಮಾಹಿತಿಯನ್ನು ಮಕ್ಕಳಲ್ಲಿ ಮೂಡಿಸಿದ್ದೇವೆ.ಸೈನಿಕ ತರಬೇತಿ ಕೇಂದ್ರಗಳಿಗೆ, ನಾವು ವಿದ್ಯಾರ್ಥಿಗಳಿಗೆ ಕರೆದುಕೊಂಡು ಹೋಗಿದ್ದೇವೆ. ಎಂದು ಕರ್ನಲ್ ಶರಣಪ್ಪ ಸಿಕ್ಕನಪುರೆ ಯವರು ಹೇಳಿದರು. ನಂತರ ಮುಖ್ಯ ಅತಿಥಿಗಳಾದ ಕ್ಯಾಪ್ಟನ್ ವಿಎ???ಲ್ ರೆಡ್ಡಿ ಅವರು ಮಾತನಾಡುತ್ತಾ ಗ್ಲೋಬಲ್ ಸೈನಿಕ ಅಕಾಡೆಮಿಯ ವಿದ್ಯಾರ್ಥಿಗಳ ಪರೇಡ್ ಅತ್ಯುನ್ನತ ಮಟ್ಟದ ಹಾಗೂ ಪೆÇ್ರೀತ್ಸಾಹದಾಯಕವಾಗಿತ್ತು. ನಾನು ಅವರ ಬಗ್ಗೆ ಬಹಳಷ್ಟು ಹೆಮ್ಮೆ ಪಡೆಯುತ್ತಿದ್ದೇನೆ. ಕರ್ನಲ್ ಶರಣಪ್ಪ ಅವರು ತಮ್ಮ ಹುಟ್ಟೂರಿನಲ್ಲಿ ಮಕ್ಕಳಿಗಾಗಿ ಒಂದು ಅದ್ಭುತ ಉನ್ನತ ಮಟ್ಟದ ಅಕ್ಯಾಡಮಿಯನ್ನು ತೆರೆದಿದ್ದಾರೆ. ವಿದ್ಯಾರ್ಥಿಗಳಲ್ಲಿ ಈ ವಿಷಯದ ಬಗ್ಗೆ ಜ್ಞಾನ ಇರಬೇಕು. ಶಿಕ್ಷಕರು ಸ್ಪರ್ಧಾತ್ಮಕ ಪ್ರಶ್ನೆಗಳನ್ನು ತರಗತಿಯಲ್ಲಿ ಕೇಳುತ್ತಾ ಇರಬೇಕು ಇದರಿಂದ ಮಕ್ಕಳಲ್ಲಿ ಸ್ಪರ್ಧಾತ್ಮಕ ಜಗತ್ತಲ್ಲಿ ಏನು ನಡೆಯುತ್ತಿದೆ ಪ್ರಸ್ತುತ ಘಟನೆಗಳ ಬಗ್ಗೆ ಅರಿವು ಮೂಡುತ್ತದೆ. ಸಮಾಜದಲ್ಲಿ ಮಕ್ಕಳ ಒಳ್ಳೆಯ ನಡುವಳಿಕೆ,ಪ್ರಾಮಾಣಿಕತೆ, , ಹಾಗೂ ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ನಾವು ಮಕ್ಕಳ ಹಾಗೂ ಸಮಾಜದ ನಡುವಿನ ಒಳ್ಳೆಯ ಸಂಬಂಧಗಳನ್ನು ರೂಪಿಸಲು ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ. ಒಳ್ಳೆಯ ನಡತೆ ನುಡಿ, ಶಿಸ್ತು, ಪ್ರಾಮಾಣಿಕತೆ, ಇದರೆ ಉತ್ತಮ ನಾಯಕನ್ನಾಗಿ ಸಮಾಜ ಮತ್ತು ರಾಷ್ಟ್ರವನ್ನು ಮುನ್ನಡೆಸಿಕೊಂಡು ಹೋಗಬಹುದು. ಗ್ಲೋಬಲ್ ಸೈನಿಕ ಅಕ್ಯಾಡೆಮಿಯ ಮಕ್ಕಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುತ್ತಿದೆ ವಿದ್ಯಾರ್ಥಿಗಳು ಇದರ ಪ್ರಯೋಜನನ್ನು ತೆಗೆದುಕೊಳ್ಳಬೇಕು ಉತ್ತಮ ನಾಗರಿಕನಾಗಿ ಸಮಾಜ ಹಾಗು ದೇಶದ ರಕ್ಷಣೆಯನ್ನು ಮಾಡಬೇಕು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಬಿವಿ ಶಿವಪ್ರಕಾಶ್ ಅವರು ನಮ್ಮ ದೇಶ ಮೊದಲು ಬೇರೆ ದೇಶಗಳಿಗೆ ಅವಲಿಂಬಿತವಾಗಿತ್ತು. ಆದರೆ ಈಗ ನಮ್ಮ ದೇಶ ಮೊದಲ ಸ್ಥಾನವನ್ನು ಉತ್ಪಾದನೆಗಳಲ್ಲಿ ಪಡೆಯುತ್ತಿದೆ ಆರ್ಮಿಯಲ್ಲಿಯೂ ಕೂಡ ಪ್ರಗತಿಯನ್ನು ಸಾಧಿಸುತ್ತಿದೆ ಆಪರೇಷನ್ ಸಿಂಧೂರುಇದಕ್ಕೆ ಮುಖ್ಯ ಉದಾಹರಣೆಯಾಗಿದೆ. ನಾವು ಈಗ ಎಲ್ಲಾ ರೀತಿಯಲ್ಲೂ ಮುನ್ನಡೆಯುತ್ತಿದ್ದೇವೆ. ಕರ್ನಲ್ ಶರಣಪ್ಪ ಸೀತನ್ಪುರೆ ಅವರು ತಮ್ಮ ಹುಟ್ಟು ಭೂಮಿಯನ್ನು ಪ್ರೀತಿಸಿ ಗೌರವಿಸಿ ಗ್ಲೋಬಲ್ ಸೈನಿಕ್ ಅಕಾಡೆಮಿಯ ತಳಪಾಯವನ್ನು ಹಾಕಿದ್ದಾರೆ. ರಾಜ್ಯಮಟ್ಟದಲ್ಲಿ ಚಿನ್ನದ ಪದಕಗಳನ್ನು ಗಳಿಸುವ ಸಾಮಾನ್ಯವಾದ ಮಾತಲ್ಲ ಇದಕ್ಕೆ ಶರಣಪ್ಪ ಅವರ ಶ್ರದ್ಧೆ ದೃಢಸಂಕಲ್ಪ ದಿಂದ ಮಾತ್ರ ಸಾಧ್ಯವಾಗಿದೆಇನ್ನೋರ್ವ ಅತಿಥಿಗಳಾದ ಮೋಹನ್ ಮೂರ್ತಿಯವರು ವಿದ್ಯಾರ್ಥಿಗಳಲ್ಲಿ ಕಲಿಕೆಯ ಅಭಿವೃದ್ಧಿಯ ಬಗ್ಗೆ ತಿಳಿಸಿದರುಮಕ್ಕಳಲ್ಲಿ ಬುದ್ಧಿ ಸಾಮಥ್ರ್ಯ ಕಲಿಕೆಯನ್ನುಪಡೆಯುವ ಸ್ಪೂರ್ತಿ ಮತ್ತು ಪೆÇ್ರೀತ್ಸಾಹವನ್ನು ನೀಡಬೇಕು. ನಮ್ಮ ದೇಶ ತಂತ್ರಜ್ಞಾನದಲ್ಲಿ ಮುಂದೆ ಹೋಗುತಿದೆ. ನಾವು ವಾಯುಪಡೆ, ನೌಕಾಪಡೆ, ಸೈನ್ಯಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದೇವೆ. ಯಾಂತ್ರಿಕ ಶಕ್ತಿ ತಂತ್ರಜ್ಞಾನದ ಶಕ್ತಿಯನ್ನು ಮೂಡಿಸಬೇಕು ಎಂದು ಹೇಳಿದರು.ಅಕಾಡೆಮಿಯ ಪ್ರಾಂಶುಪಾಲರಾದ ಶ್ರೀ ಸಮೋದ್ ಮೋಹನ್ ಅವರು ವಂದನಾರ್ಪಣೆಯನ್ನು ಹೇಳಿದರು. ನಂತರ ಮಕ್ಕಳಿಗೆ ಸಿಹಿಯನ್ನು ಹಂಚಿದರು.ಈ ಸಮಾರಂಭಕ್ಕೆ ಅಕಾಡೆಮಿಯ ಮುಖ್ಯೋಪಾಧ್ಯಾಯನಿಯಾದ ಕುಮಾರಿ ಜ್ಯೋತಿರಾಗ, ಪಿ ಆರ್ ಓ ಶ್ರೀಮತಿ ಕಾರಂಜಿ ಸ್ವಾಮಿ, ಮಾಜಿ ಸೈನಿಕರಾದ ಸುಬೇದಾರ್ ಮಡೆಪ್ಪ ಸುಬೇದಾರ ರಾಮ್ ದಾವಲ್ ಜಿ, ಸುಬೇದಾರ್ ಧನರಾಜ್ ಸಾವರೆ, ಚಂದ್ರಶೇಖರ್ ಮಡಪತಿ, ನಾಯಕ್ ಸಭೆದಾರ್ ಇರಾರೆಡ್ಡಿ, ಸಂಯೋಜಕರು ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.