
ತಾಳಿಕೋಟೆ :ಮೇ.10: ಕನ್ನಡ ಸಾಹಿತ್ಯ ಪರಿಷತ್ತು ನಾಡು-ನುಡಿ. ನೆಲ-ಜಲ ಹಾಗೂ ಸಂಸ್ಕೃತಿ – ಸಂಸ್ಕಾರವನ್ನೂ ಉಳಿಸುವ ಹಾಗೂ ಬೆಳೆಸುವ ಕಾರ್ಯ ನಿರಂತರವಾಗಿ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕತ9ವ್ಯವನ್ನು ಪಾಲಿಸುತ್ತಿದೆ ಎಂದು ಹಿರಿಯ ಸಾಹಿತಿ ಹಾಗೂ ವಿಶ್ರಾಂತ ಲೆಕ್ಕ ಪರಿಶೋಧಕ ಸಿದ್ದಣ್ಣ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಳಿಕೋಟೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ 112 ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡುತ್ತಿದ್ದ ಅವರು ನಾಲ್ವಡಿ ಕೃಷ್ಣರಾಜ ಒಡೆಯರ 1915 ರಲ್ಲಿ ಸ್ಥಾಪನೆ ಮಾಡಿದ ಸರ್ಕಾರದ ಪ್ರಾತಿನಿಧಿಕ ಸಂಸ್ಥೆ ಕಸಾಪ ಇಂದು ಹೆಮ್ಮರವಾಗಿ ಬೆಳೆದು ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡುತ್ತಾ ಬಂದಿರುವದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.
ತಾಳಿಕೋಟೆ ತಾಳಿಕೋಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರೇವಣಸಿದ್ದಪ್ಪ ಕೊಪ್ಪದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ವಿಷಯಗಳ ಕುರಿತು ಉಪನ್ಯಾಸ. ಚಿಂತನ. ಗೋಷ್ಠಿ. ಕವನ ವಾಚನ. ರಂಗಭೂಮಿ ಕಲೆ ಮುಂತಾದ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಮಾಡುವದರ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ವಿಸ್ತರಿಸಿದ ಕೀರ್ತಿ ಕಸಾಪಕ್ಕೆ ಸಲ್ಲುತ್ತದೆ ಎಂದರು.
ಗೌರವ ಕೋಶಾಧ್ಯಕರಾದ ರಾಜು ಹಂಚಾಟೆ ಹಾಗೂ ಪದಾಧಿಕಾರಿಗಳಾದ ಬಿ ಆರ್ ಪೆÇೀಲಿಸಪಾಟೀಲ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡಿಗರ ಹೆಮ್ಮೆಯ ಸಂಸ್ಥೆ. ಆಡಳಿತ ಭಾಷೆ. ಮಾತೃಭಾಷೆ ಕನ್ನಡವಾಗಿದ್ದು ಎಲ್ಲರೂ ಕಡ್ಡಾಯವಾಗಿ ಕನ್ನಡವನ್ನು ಕಲಿಯಬೇಕೆಂದರು.
ವಿಶ್ರಾಂತ ಶಿಕ್ಷಕರಾದ ಬಿ ಟಿ ಸಜ್ಜನ. ಪದಾಧಿಕಾರಿಗಳಾದ ಜೈ ಭೀಮ ಮುತ್ತಗಿ, ಕುಮಾರಿ ಶ್ವೇತಾ ಯರಗಲ್ಲ, ಎಂ.ಎಚ್.ಹಂದ್ರಾಳ, ಆರ್ ಬಿ ದಾನಿ. ಅಬೂಬಕರ ಲಾಹೋರಿ. ನಬಿ ಲಾಹೋರಿ. ಮೊದಲಾದವರು ಉಪಸ್ಥಿತರಿದ್ದರು






















