Home ಜಿಲ್ಲೆ ಕಸಾಪ ನಾಡು-ನುಡಿ ಬೆಳೆಸುವ ಪ್ರಾತಿನಿಧಿಕ ಸಂಸ್ಥೆ : ಜಯಶ್ರೀ ಹಿರೇಮಠ

ಕಸಾಪ ನಾಡು-ನುಡಿ ಬೆಳೆಸುವ ಪ್ರಾತಿನಿಧಿಕ ಸಂಸ್ಥೆ : ಜಯಶ್ರೀ ಹಿರೇಮಠ

ವಿಜಯಪುರ, ಮೇ. 8: ಕನ್ನಡ ಸಾಹಿತ್ಯ ಪರಿಷತ್ತು ನಾಡು-ನುಡಿ.ನೆಲ-ಜಲ ಹಾಗೂ ಸಂಸ್ಕøತಿ-
ಪರಂಪರೆ ಉಳಿಸುವ ಬೆಳೆಸುವ ಪ್ರಾತಿನಿಧಿಕ ಸಂಸ್ಥೆಯಾಗಿ. 112 ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಆಚರಿಸುತ್ತಿರುವದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷೆ ಜಯಶ್ರೀ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ 112 ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಎರಡು ಸಾವಿರ ವಷ9ದ ಇತಿಹಾಸ ಹೊಂದಿದೆ. ಕನ್ನಡ ಅನ್ನದ
ಭಾಷೆಯಾಗಿದ್ದರಿಂದ ನಾವೆಲ್ಲರೂ ಕನ್ನಡ ಕಡ್ಡಾಯವಾಗಿ ಅಧ್ಯಯನ ಅತ್ಯವಶ್ಯ
ಎಂದರು.
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಅಧೀಕ್ಷಕಿ ಶಶಿಕಲಾ ನಾಯ್ಕೋಡಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ವಾತಾವರಣ ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸರಕಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಕನ್ನಡ ಭಾಷೆ ಬೆಳೆಸುವತ್ತ ಗಮನ ಹರಿಸೋಣ ಎಂದರು.
ಸಾಹಿತಿ ವೈ.ಎಚ್. ಲಂಬು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ವಿಜಯಪುರದಲ್ಲಿ ಕನ್ನಡ ವಾತಾವರಣ ಸೃಷ್ಟಿಸೋಣ. ಕನ್ನಡ ನಮ್ಮೆಲ್ಲರ ಹೆಮ್ಮೆಯ ಭಾಷೆಯಾಗಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ದೊರಕಿದ್ದು ಕನ್ನಡ ಭಾಷೆಗೆ. ಇತ್ತೀಚೆಗೆ ಶಾಸ್ತ್ರೀಯ
ಸ್ಥಾನಮಾನ ನೀಡಿದ್ದು ಶ್ಲಾಘನೀಯ ಎಂದರು.
ಮಲ್ಲಿಕಾರ್ಜುನ ಕೆಳಗಡೆ. ಅಜು9ನ ಶಿರೂರ, ರಾಜೇಶ್ವರಿ ಹಿಟ್ಟಿನಹಳ್ಳಿ, ಮಹೆತಾಬ ಕಾಗವಾಡ ವೇದಿಕೆಯಲ್ಲಿದ್ದರು.
ರೂಪಾ ರಜಪೂತ, ಆಶಾ ಬಿರಾದಾರ, ಭಾಗೀರಥಿ ಸಿಂದೆ, ವಿಜಯಲಕ್ಷ್ಮಿ ಹಳಕಟ್ಟಿ, ಲಕ್ಷ್ಮಿ ಬಿರಾದಾರ, ಗಂಗಮ್ಮ ರಡ್ಡಿ, ಮಂಜುಳಾ ಕಾಳಗಿ, ಸುನಂದಾ ಕೋರಿ ಪ್ರಾರ್ಥಿಸಿದರು. ಮಮತಾ ಮುಳಸಾವಳಗಿ ಪ್ರಾಸ್ತಾವಿಕ ಮಾತನಾಡಿದರು. ಯಮನಪ್ಪ ಪವಾರ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.