
ಕಲಬುರಗಿ: ನಗರದ ಸೇಡಂ ವರ್ತುಲ ರಸ್ತೆ ವೃತ್ತದಲ್ಲಿ ಸುಮಾರು ದಿನಗಳಿಂದ ಒಳಚರಂಡಿ ತುಂಬಿ ಕೊಳಚೆ ನೀರು ರಸ್ತೆಯ ಮೇಲೆ ಹರಿದು ಗಬ್ಬು ನಾರುತ್ತಿತ್ತು. ಇದರಿಂದ ಪಾದಚಾರಿಗಳಿಗೆ ತೀವ್ರ ತೊಂದರೆ ಆಗುತ್ತಲಿತ್ತು. ಸಂಭದಪಟ್ಟ ಇಲಾಖೆಯವರು ಕೂಡಲೇ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು “ಸಂಜೆವಾಣಿ” ಪತ್ರಿಕೆಯಲ್ಲಿ ಚಿತ್ರ ಸಹಿತ ವರದಿ ಪ್ರಕಟಿಸಲಾಗಿತ್ತು. ನ.4 ರಂದು ಸಂಬಂಧಪಟ್ಟ ಇಲಾಖೆಯವರು ಇದನ್ನು ಗಮನಿಸಿ ಸಮಸ್ಯೆ ಬಗೆ ಹರಿಸಿದ್ದು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.





























