Home ಜಿಲ್ಲೆ ಅಮರೇಶ್ವರ ದೇಗುಲದಲ್ಲಿ ರೇಣುಕಾಚಾರ್ಯರ ಜಯಂತಿ ಆಚರಣೆ

ಅಮರೇಶ್ವರ ದೇಗುಲದಲ್ಲಿ ರೇಣುಕಾಚಾರ್ಯರ ಜಯಂತಿ ಆಚರಣೆ

ಔರಾದ :ಮಾ.೩: ಜಗದ್ಗುರು ಆದಿ ರೇಣುಕಾಚಾರ್ಯರರ ಜಯಂತಿ ಯುಗಮಾನೋತ್ಸವವನ್ನು ವೀರಶೈವ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಅಮರೇಶ್ವರ ದೇಗುಲದಲ್ಲಿ ಸಂಭ್ರಮದಿAದ ಆಚರಿಸಲಾಯಿತು.

ವೀರಶೈವ ಮಹಾಸಭಾ ಅಧ್ಯಕ್ಷ ಬಸವರಾಜ ದೇಶಮುಖ ಅವರು ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಗತ್ತಿಗೆ ಶಿವ ತತ್ವ ಸಿದ್ಧಾಂತಗಳನ್ನು ಬೋಧನೆ ಮಾಡಿದ ಜಗದ್ಗುರು ರೇಣುಕಾಚಾರ್ಯರು ಮಾನವ ಕುಲದ ಉದ್ಧಾರಕರಾಗಿ ಮಾನವ ಧರ್ಮದಿಂದ ಸದೃಢ ಸಮಾಜ ಕಟ್ಟಲು ಸಾಧ್ಯವೆಂದು ಸಾರಿದ ರೇಣುಕಾಚಾರ್ಯರ ತತ್ವ, ಸಿದ್ಧಾಂತಗಳು ಎಲ್ಲ ಕಾಲಕ್ಕೂ ಪ್ರಸ್ತುತ ಅದನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕಲ್ಲಪ್ಪ ದೇಶಮುಖ, ರೇವಣಪ್ಪ ಜ್ಯಾಂತೆ, ಸೂರ್ಯಕಾಂತ ಔರಾದೆ, ಧನರಾಜ ರಾಗಾ, ಹಣಮಂತ ನವಾಡೆ ಸೋಮನಾಥ ಸ್ವಾಮಿ, ಗೌರವ ದೇಶಮುಖ, ರಮೇಶ ಬೆಲೂರೆ, ಚನ್ನಬಸವ ಗಜರೆ, ಕೇದಾರ ಪಂಚಾಕ್ಷರಿ, ಸದಾನಂದ ಸ್ವಾಮಿ, ಸಚ್ಚಿದಾನಂದ ಸ್ವಾಮಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಆನಂದ ದ್ಯಾಡೆ, ನಗರಾಧ್ಯಕ್ಷ ಅಮರಸ್ವಾಮಿ ಸ್ಥಾವರಮಠ, ಉಪಾಧ್ಯಕ್ಷ ಶ್ರೀಕಾಂತ ಚಿದ್ರೆ, ಕಾರ್ಯದರ್ಶಿ ಸಂದೀಪ ಪಾಟೀಲ, ವಿಜಯಕುಮಾರ ಸ್ವಾಮಿ, ಮಹೇಶ ಸ್ವಾಮಿ, ಶ್ರೀಕಾಂತ ಅಲ್ಮಾಜೆ, ಬಸವ ಚೌಕಂಪಳ್ಳೆ, ಅನಿಲ ದೇವಕತೆ, ಬಾಲಾಜಿ ದಾಮಾ, ಕಾರ್ತಿಕ ಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.