ಸನಾತನ ಧರ್ಮ ಏಳಿಗೆಗೆ ಭಗವಂತನನ್ನು ಸ್ಮರಿಸಿ:ವೆಂಕಟೇಶ

ತಾಳಿಕೋಟೆ:ಜೂ.೨೯: ಸನಾತನ ಧರ್ಮವೆಂಬುದು ಆದಿಕಾಲದಿಂದ ಹೆಸರು ಹೊರಹೊಮ್ಮುತ್ತಾ ಸಾಗಿಬಂದಿದ್ದು ಈ ಧರ್ಮ ಕೃಷ್ಣ ಪರಮಾತ್ಮನ ಕಾಲದಿಂದಲೂ ಸಾಗಿಬಂದಿದ್ದು ನಾವೇಲ್ಲರೂ ಭಗವಂತನ ಪೂಜೆ ಗೈಯುತ್ತಾ ಸ್ಮರಿಸುತ್ತಾ ಇದನ್ನು ರಕ್ಷೀಸುವದಲ್ಲದೇ ಇದರ ಏಳಿಗೆಗೆ ಸದಾ ಭಗವಂತನನ್ನು ಸ್ಮರಿಸುತ್ತಾ ಸಾಗಬೇಕೆಂದು ಸ್ಥಳೀಯ ವೆಂಕಟೇಶ್ವರ ಸಂಸ್ಕೃತ ಪಾಠ ಶಾಲಾ ಅಧ್ಯಕ್ಷರಾದ ವೇ.ವೆಂಕಟೇಶ ಗ್ರಾಂಪೊರೊಹಿತ ಅವರು ನುಡಿದರು.
ಸ್ಥಳೀಯ ಶ್ರೀ ವಿಠ್ಠಲ ಮಂದಿರದಲ್ಲಿ ಏರ್ಪಡಿಸಲಾದ ಹನುಮ ಚಾಲಿಸಾ ಕಾರ್ಯಕ್ರಮದ ೧೪ನೇ ಶನಿವಾರರಂದು ಸಾಯಂಕಾಲ ೭ ಗಂಟೆಗೆ ಭಕ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಇತಿಹಾಸವನ್ನು ಅವಲೋಕಿಸಿ ನೋಡಿದಾಗ ಶನಿವಾರ ಶನಿದೇವರನ್ನು ಹಾಗೂ ಹನುಮಂತನನ್ನು ನಮ್ಮ ಬೇಕು ಬೇಡಿಕೆಗಳಿಗಾಗಿ ಸ್ಮರಿಸುತ್ತೇವೆ ಹನುಮಂತ ದೇವರ ಸ್ಮರಣೆ ಮಾಡುವದರಿಂದ ಹಾಗೂ ಹನುಮಾನ ಚಾಲಿಸಾ ಪಠಣ ಮಾಡುವದರಿಂದ ಎಲ್ಲ ಕಷ್ಠ ಕಾರ್ಪಣ್ಯಗಳು ನಿವಾರಣೆಯಾಗಿ ಅಪೇಕ್ಷೀತ ಎಲ್ಲವೂ ಸಿದ್ದಿಯಾಗುತ್ತವೆಂದರು. ಕೇವಲ ಹನುಮಂತ ಅಲ್ಲದೇ ದೇವರ ಸ್ಮರಣೆಯನ್ನು ಮಾಡಬೇಕು ಇದರಿಂದ ಧರ್ಮ ಪ್ರಚಾರಕ್ಕೂ ಅನುಕೂಲವಾಗುತ್ತದೆ ಅಲ್ಲದೇ ಜನ ಜಾಗೃತಿ ಮಾಡಿಸಿದಂತಾಗುತ್ತದೆ ಎಂದ ಅವರು ಭಗವಂತ ಹೇಳಿದಂತೆ ಧರ್ಮದ ಜಾಗೃತಿ ಮಾಡಿ ಭಗವಂತನ ಅಪೇಕ್ಷೆಯಂತೆ ನಮ್ಮ ಚಿಂತನೆಯನ್ನು ಭಗವಂತ ಮಾಡುತ್ತಾನೆ ಆದರೆ ಧರ್ಮದ ರಕ್ಷಣೆ ಎಂಬುದು ಸಂಘಟನೆಯಿAದ ಸಮಾಜದಿಂದ ಸಮೂಹದಿಂದ ಆಗುತ್ತದೆ ಎಂದರು. ದೇವತಾ ಕಾರ್ಯದಲ್ಲಿ ಮಕ್ಕಳನ್ನು ಹಾಗೂ ಕುಟುಂಬದವರನ್ನು ಕರೆದುಕೊಂಡು ಬಂದು ವಿಶೇಷವಾದಂತಹ ನಮ್ಮ ಸನಾತನ ಧರ್ಮದ ಏಳಿಗೆಗಾಗಿ ಶ್ರಮಿಸಬೇಕೆಂದ ವೇ.ವೆಂಕಟೇಶ ಅವರು ಹನುಮಂತನ ಸ್ಮರಣೆಯಿಂದ ಬುದ್ದಿ ಯಶಸ್ಸನ್ನು ಕೊಡುತ್ತದೆ ಅಲ್ಲದೇ ಶಕ್ತಿಯನ್ನು ಯುಕ್ತಿಯನ್ನೂ ಸಹ ಕೊಡುತ್ತದೆ ಜನರಿಗೆ ಉಪಯೋಗವಾಗುವಂತಹ ಕಾರ್ಯಗಳನ್ನು ಮಾಡಬೇಕೆಂದು ಹೇಳಿದ ಅವರು ತುಳಸಿದಾಸರು ಹನುಮಂತನನ್ನು ಸ್ಮರಿಸುತ್ತಾ ರಚಿಸಿದಂತಹ ಹನುಮಾನ ಚಾಲಿಸಾ ಈ ಪಠಣ ಮಾಡುವದು ನಮ್ಮೇಲ್ಲರಿಗೂ ಅಗತ್ಯವಾಗಿದೆ ಎಂದರು.
ನೇತೃತ್ವ ವಹಿಸಿದ ಖ್ಯಾತ ಜ್ಯೋತಿಷ್ಯ ಶಾಸ್ತç ಪರಿಣಿತರಾದ ವೇ.ವಸಂತ ಜೋಶಿ ಅವರು ಹನುಮಾನ ಚಾಲಿಸಾ ಪಠಣದ ೪೦ ನುಡಿಗಳನ್ನು ಭಕ್ತ ಸಮೂಹಕ್ಕೆ ಪಠಣ ಮಾಡಿಸಿ ಅದರ ಅರ್ಥವನ್ನು ಮನವರಿಕೆ ಮಾಡಿದರು.
ಕಾರ್ಯಕ್ರಮದ ಮೊದಲಿಗೆ ಶ್ರೀ ವಿಠ್ಠಲ ರುಕುಮಾಯಿ ಮಹಾ ಮೂರ್ತಿಗಳಿಗೆ ಮಹಾಭಿಷೇಕ, ಬಿಲ್ವರ್ಚಾನೆ, ಪುಷ್ಪಾರ್ಚನೆ ಮಹಾ ಮಂಗಳಾರತಿಯನ್ನು ಅರ್ಚಕರಾದ ದೀಪಕ ಜೋಶಿ ಅವರು ನೆರವೇರಿಸಿದರು.
ಈ ಸಮಯದಲ್ಲಿ ರಾಜಣ್ಣ ಸೊಂಡೂರ, ಶಾಮ ಹಂಚಾಟೆ, ಬಾಬು ಹಂಚಾಟೆ, ಅನಂತ ಕುಲಕರ್ಣಿ, ನಿಂಗೋಜಿ ಕುಲಕರ್ಣಿ, ಮಲ್ಲಿಕಾರ್ಜುನ ಹಿಪ್ಪರಗಿ, ದತ್ತಾ ಮಹೇಂದ್ರಕರ, ಅರುಣ ಕನಕಗಿರಿ, ಪ್ರಶಾಂತ ಜನಾದ್ರಿ, ಜೈಸಿಂಗ್ ಮೂಲಿಮನಿ, ಸುದೀರ ದೇಶಪಾಂಡೆ, ಪ್ರದೀಪ ಭುಸಾರೆ, ಪ್ರಮೋದ ಅಗರವಾಲಾ, ರಾಘವೇಂದ್ರ ವಿಜಾಪೂರ, ಶ್ರೀಮತಿ ರೇಣುಕಾ ಹಂಚಾಟೆ, ಸುದಾ ನಿಡಗುಂದಿ, ಶೈಲಾ ನಿಡಗುಂದಿ, ರಮಾ ತಾಳಪಲ್ಲೆ, ರಾಧಾ ಕನಕಗಿರಿ, ಭೋರಮ್ಮ ಕುಂಭಾರ, ಯಮನವ್ವ, ದೀಪ ಲಕ್ಷಿö್ಮÃ ಮಹೇಂದ್ರಕರ, ಕವಿತಾ ಜನಾದ್ರಿ ಮೊದಲಾದವರು ಉಪಸ್ಥಿತರಿದ್ದರು.