Home ಜಿಲ್ಲೆ ಮೋಕ್ಷಮಾರ್ಗಕ್ಕಾಗಿ ಭಗವಂತನನ್ನು ಸ್ಮರಿಸಿ:ಕೈಲಾಸಪೇಠಶ್ರೀ

ಮೋಕ್ಷಮಾರ್ಗಕ್ಕಾಗಿ ಭಗವಂತನನ್ನು ಸ್ಮರಿಸಿ:ಕೈಲಾಸಪೇಠಶ್ರೀ

ತಾಳಿಕೋಟೆ:ಫೆ.೧೯: ಪ್ರತಿನಿತ್ಯವೂ ಕಾಯಕವನ್ನು ಮಾಡಿಕೊಂಡು ಸಾಗುತ್ತಿರುವ ಮಾನವ ಜನ್ಮ ಕಾಯಕದೊಂದಿಗೆ ಭಕ್ತಿಭಾವದೊಂದಿಗೆ ನಡೆದುಕೊಂಡು ಸಾಗಿದರೆ ಭಗವಂತ ಒಲಿದೇ ಒಲಿಯುತ್ತಾನೆಂದು ಸ್ಥಳೀಯ ಕೈಲಾಸಪೇಠೆಯ ಶ್ರೀ ಬಸವಪ್ರಭು ದೇವರು ನುಡಿದರು.
ಬುಧವಾರರಂದು ಸ್ಥಳೀಯ ಶ್ರೀ ಸದ್ಗುರು ಸಾಂಭಪ್ರಭು ಶರಣಮುತ್ಯಾರವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಮಠದ ಆವರಣದಲ್ಲಿ ಏರ್ಪಡಿಸಲಾದ ಮುಗಳಖೋಡ ಶ್ರೀ ಯಲ್ಲಾಲಿಂಗ ಮಹಾರಾಜರ ಮಹಾ ಪುರಾಣ ಪ್ರಾರಂಭೋತ್ಸವದಲ್ಲಿ ದಿವ್ಯ ಸಾನಿದ್ಯವಹಿಸಿ ಕಾರ್ಯಕ್ರಮವನ್ನು ದೀಪಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದ ಶ್ರೀಗಳು ಶರಣರಾಗಲಿ, ಸಂತರಾಗಬೇಕಾದರೆ ಮನಸ್ಸಿನಲ್ಲಿರತಕ್ಕಂತಹ ಮಾನವೀಯ ಗುಣವೆಂಬುದು ದೊಡ್ಡದಾಗಿರಬೇಕು ಯಾವುದೆ ಫಲಾಪೇಕ್ಷವಿಲ್ಲದೇ ಎಲ್ಲವೂ ನಿಂದೇ ಎಂಬ ಭಾವನೆಯೊಂದಿಗೆ ಹಗಲು ರಾತ್ರಿ ಎನ್ನದೇ ಸ್ವಲ್ಪಾದರೂ ಸಮಯ ಅವಕಾಶ ಮಾಡಿಕೊಂಡು ಭಗವಂತನನ್ನು ಸ್ಮರಿಸಿದರೆ ಸನ್ಮಾರ್ಗದ ಹಾದಿ ದೊರೆಯಲಿದೆ ಎಂದು ಹೇಳಿದ ಶ್ರೀಗಳು ಜೀವನದಲ್ಲಿ ಮಾಡಿದ ತಪ್ಪುಗಳನ್ನು ದೂರಿಕರಿಸು ಭಗವಂತನೆ ಎಂದು ಬೇಡಿಕೊಳ್ಳುತ್ತಾ ತಪ್ಪುಗಳನ್ನು ತಿದ್ದಿಕೊಂಡು ಸಾಗುವ ಕಾರ್ಯ ಮಾಡಬೇಕು ನಾಲಿಗೆಯನ್ನು ಸ್ವಚ್ಚವಾಗಿಟ್ಟುಕೊಂಡು ಒಳ್ಳೆಯ ನುಡಿಗಳನ್ನು ನುಡಿಯುತ್ತಾ ಸಾಗಿದರೆ ಸ್ವಚ್ಚಂದವಾದ ಜೀವನವನ್ನು ಸಾಗಿಸಬಹುದಾಗಿದೆ ಎಂದು ಹೇಳಿದ ಅವರು ನೀನೇ ಸ್ವರ್ಗ, ನೀನೇ ದೇವಾ ನನಗೆ ಒಳ್ಳೆಯ ದಾರಿ ತೋರಿಸು ಎಂದು ಹೇಳುವದೇ ಶರಣರ ಹಾಗೂ ಪುರಾಣಗಳಲ್ಲಿ ದೊರೆಯುವಂತಹ ಸನ್ಮಾರ್ಗದ ವಿಷಯವಾಗಿದೆ ಎಂದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಯಾದಗಿರಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಸನಗೌಡ ಪಾಟೀಲ(ಯಡಿಯಾಪೂರ) ಅವರು ಮಾತನಾಡಿ ೧೯೮೩ನೇ ಸಾಲಿನಿಂದ ಇಂಜನೀಯರ್ ಆಗಬೇಕೆಂಬ ಅಪೇಕ್ಷೆಹೊತ್ತ ನಾನು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಸಾಗಿಬಂದೆ ಮುಗಳಖೋಡಶ್ರೀಗಳಿಗೆ ಬೆಟ್ಟಿಯಾಗಿ ನನ್ನಲ್ಲಿರತಕ್ಕಂತಹ ಅಪೇಕ್ಷೆ ಕುರಿತು ಅವರಿಗೆ ತಿಳಿ ಹೇಳಿದಾಗ ಅವರೂ ಕೂಡಾ ನಿನ್ನ ಅಪೇಕ್ಷೆ ಇಡೇರಲಿದೆ ಎಂದು ಹೇಳಿದರು ನೀನು ರಾಜಕೀಯ ದುರಿಣ ಸ್ಥಾನ ಮಾನ ಇಂದಿಲ್ಲಾ ನಾಳೆ ಹೊಂದುತ್ತಿದಿ ಎಂದು ಶ್ರೀಗಳು ನುಡಿದರು. ಆದರೂ ಇಂದಿನ ದಿನಮಾನದಲ್ಲಿ ಸೀವಿಲ್ ಇಂಜನೀಯರ್ ಸ್ಥಾನಮಾನ ಹೊಂದಿ ೧೨೦ ಕೋಟಿವರೆಗೂ ಕೆಲಸ ಕಾರ್ಯಗಳನ್ನು ಮಾಡುತ್ತಾ ಸಾಗಿದ್ದೆ ಏನೇ ಇದ್ದರೂ ಬಡಬಗ್ಗರ ಬಗ್ಗೆ ಅವರ ತೊಂದರೆಗಳನ್ನು ನೀವಾರಣೆ ಮಾಡಬೇಕೆಂಬ ಇಚ್ಚೆ ವ್ಯಕ್ತಪಡಿಸುತ್ತಾ ಸಾಗಿದ್ದ ನಾನು ದಾನ ಧರ್ಮವನ್ನು ಕೂಡಾ ಮಾಡುತ್ತಾ ಸಾಗಿದ್ದೇನೆ ಮುಗಳಖೋಡಶ್ರೀಗಳು ಹೇಳಿದ್ದಂತೆ ಭಕ್ತಿ ಇದ್ದಲ್ಲಿ ಶಕ್ತಿ ಎಂಬುದನ್ನು ಅರ್ಥೈಸಿಕೊಂಡಿದ್ದ ನಾನು ಅದೇ ಮಾರ್ಗದತ್ತ ಮುಂದುವರೆದು ಇಂದಿನ ಮಹತ್ವದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಗಳ ಕೃಪೆಗೂ ಪಾತ್ರರಾಗುತ್ತಾ ಸಾಗಿದ್ದೇನೆಂದರು.
ಇನ್ನೋರ್ವ ಅತಿಥಿ ಎಸ್.ಕೆ.ಕಾಲೇಜ್ ನಿವೃತ್ತ ಪ್ರಾಚಾರ್ಯರಾದ ಆರ್.ಎನ್.ಪಾಟೀಲ ಅವರು ಮಾತನಾಡಿ ನಮ್ಮ ನಾಡು ಶರಣ ಸಂತರಿಗೆ ಯೋಗಿಗಳಿಗೆ ಜನ್ಮ ನೀಡಿದ್ದಾಗಿದೆ ವಿದೇಶಿಗರು ನಮ್ಮ ನಾಡಿನ ಪದ್ದತಿಯನ್ನು ಅನುಕರಣೆ ಮಾಡುತ್ತಾ ಸಾಗಿದ್ದಲ್ಲದೇ ನಮ್ಮ ತತ್ವ ಸಿದ್ದಾಂತಗಳನ್ನು ಹಾಗೂ ವಚನಗಳನ್ನೂ ಸಹ ತಮ್ಮ ಭಾಷೆಯಲ್ಲಿ ಪರಿವರ್ತನೆ ಮಾಡುತ್ತಾ ಸಾಗುವದರೊಂದಿಗೆ ಅರ್ಥೈಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದಾರೆ ಅನೇಕ ಮಹಾತ್ಮರು ಶಿಶುನಾಳ ಶರೀಪ ಸಾಹೇಬರಂತವರು ಅನೇಕ ತತ್ವಪದಗಳ ಮೂಲಕ ಹೇಳಿಕೊಡುತ್ತಾ ಸಮಾಜ ಸುದಾರಣೆ ಮಾಡುತ್ತಾ ಸಾಗಿದ್ದರು ದೇವರಿಗಾಗಿ ಏನು ಮಾಡಿದೇವು ಎಂಬುದರ ಕುರಿತು ಅವರು ಅರ್ಥೈಸಿಕೊಳ್ಳುವಂತಹ ವಿಚಾರಗಳನ್ನು ನಮ್ಮೇಲ್ಲರಿಗೆ ತಿಳಿ ಹೇಳುವಂತಹ ಕಾರ್ಯಕ್ಕೆ ಮುಂದಾಗಿ ಅನೇಕ ತತ್ವಪದಗಳ ಮೂಲಕ ಮನವರಿಕೆ ಮಾಡಿದ್ದಾರೆಂದು ಹೇಳಿದ ಪಾಟೀಲರು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರರ ಹಾಗೂ ಮಹಾ ಶರಣ ಶರಣಮುತ್ಯಾರವರ ಪವಾಡಗಳ ಕುರಿತು ಜಾತ್ರೋತ್ಸವ ಕುರಿತು ಭಹುಮಾರ್ಮಿಕವಾಗಿ ವಿವರಿಸಿದರು.
ಇನ್ನೋರ್ವ ಅತಿಥಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ಮಾತನಾಡಿ ಯಾವುದೇ ಮಠ ಮಾನ್ಯಗಳಾಗಲಿ ಅಲ್ಲಿಯ ಸಾಂಪ್ರದಾಯದAತೆ ಭಕ್ತರನ್ನು ಉದ್ದರಿಸುವ ಕಾರ್ಯ ನಡೆಯುತ್ತಾ ಸಾಗಲಿದೆ ಇದರಿಂದ ಪುರಾಣ ಪ್ರವಚನ ನಡೆಯುವಂತಹ ಕಾರ್ಯದಿಂದಲೂ ಭಕ್ತರಿಗೂ ಅನುಕೂಲವಾಗಲಿದೆ ತಾಳಿಕೋಟೆ ಪಟ್ಟಣ ಪುಣ್ಯ ಕ್ಷೇತ್ರವಾಗಿದ್ದು ಅಂತಹ ಕ್ಷೇತ್ರದಲ್ಲಿ ಶರಣಮುತ್ಯಾರವರ ದೇವಸ್ಥಾನವು ಜೀರ್ಣೋದ್ದಾರಗೊಳ್ಳುತ್ತಾ ಸಾಗಿರುವದು ಮಹಾ ಪವಾಡವೇ ಸರಿ ಎಂದ ಅವರು ಜೀವನದಲ್ಲಿ ಶರಣರ ವಿಚಾರಗಳನ್ನು ಅರೀತು ನಡೆಯಬೇಕು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುವ ಕಾರ್ಯಕ್ಕೆ ಪಾಲಕರು ಮುಂದಾಗಬೇಕು ಇಂತಹ ಕಾರ್ಯಗಳಿಂದ ಜೀವನವೆಂಬುದು ಸಾರ್ಥಕವಾಗಲಿದೆ ಎಂದರು.
ಯಲ್ಲಾಲಿAಗ ಮಹಾರಾಜರ ಪುರಾಣ ಪ್ರವಚನವನ್ನು ಪ್ರಾರಂಬಿಸಿದ ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಡಾ.ಶಿವಲಿಂಗಯ್ಯ ಶರಣರು ಪುರಾಣಿಕಮಠ ಅವರು ಮಾತನಾಡಿ ಮುಗಳಖೋಡ ಯಲ್ಲಾಲಿಂಗೇಶ್ವರರ ಪುರಾಣವು ಅದ್ಭುತ್ ಪುರಾಣವಾಗಿದೆ ೧೮ ಅಧ್ಯಾಯದ ಪುರಾಣ ೧೮ ದಿವಸ ನಡೆಯಲಿದೆ ಇಂದು ಪ್ರಾರಂಭಗೊAಡ ದಿನದ ದಿನಾಂಕವೂ ಕೂಡಾ ೧೮ನೇ ದಿನಾಂಕವಾಗಿದೆ ಸೂಕ್ಷö್ಮವಾಗಿ ವಿಚಾರ ಮಾಡಲಾಗಿ ಅದ್ಭುತ್‌ವಾದ ಶಕ್ತಿ ತಾಳಿಕೋಟೆ ಪಟ್ಟಣದಲ್ಲಿದೆ ಎಂದರು. ಧರ್ಮ ಸ್ಥಾಪನೆಗಾಗಿ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಅನೇಕ ವಿಚಾರಗಳನ್ನು ತಿಳಿ ಹೇಳಿ ದರ್ಮದಿಂದ ನಡೆಯುವ ಕುರಿತು ಹಾಗೂ ತಿಳಿ ಹೇಳಿದ್ದರೆಂದು ಹೇಳಿದ ಪುರಾಣಿಕರು ದರ್ಮ ಅನ್ನುವಂತಹದ್ದು ಬಹಳೇ ಮುಖ್ಯವಾಗಿದೆ ನಾವೇಲ್ಲಾ ಮಾನವರು ಅರ್ಥೈಸಿಕೊಂಡು ಬಧುಕಲು ೧೮ ಅಧ್ಯಾಯದ ಭಗವದ್ಗೀತೆಯ ಸಾರವನ್ನು ಅರೀತುಕೊಂಡು ನಡೆಯುವಂತಾಗಬೇಕು ಯಲ್ಲಾಲಿಂಗಶ್ರೀಗಳ ಬಾಗಲಕೋಟೆಯ ಬಸವರಾಜ ಅವರು ಬರೆದಂತಹ ಮಹಾ ಪುರಾಣದ ಸಂಕ್ಷೀಪ್ತ ವಿಷಯವನ್ನು ವಿವರಿಸಿದರು.
ಈ ಸಮಯದಲ್ಲಿ ವೇದಿಕೆಯ ಮೇಲೆ ಶರಣರ ಮಠದ ಶ್ರೀ ಶರಣಪ್ಪ ಶರಣರು, ಬಸಣ್ಣ ಶರಣರು, ಶಿವಶರಣೆ ಕಾಶಿಬಾಯಿ ಅಮ್ಮನವರು, ಈರಸಂಗಪ್ಪಗೌಡ ಪಾಟೀಲ(ಮಿಣಜಗಿ), ಸಿದ್ದಣ್ಣ ಶರಣರ, ಮಲ್ಲಣ್ಣ ಶರಣರ, ಲಿಂಗರಾಜ ಶರಣರ, ಗುರುರಾಜ ಶರಣರ, ಸಂಗಮೇಶ ಶರಣರ, ಸಿದ್ದನಗೌಡ ಪೊಲೀಸ್‌ಪಾಟೀಲ(ಕರಿಭಾವಿ), ಬಂಡೆಪ್ಪಗೌಡ ಮಾಲಿಬಿರಾದಾರ, ಸಂಗಣ್ಣ ಪೂಜಾರಿ, ನಾನಾಗೌಡ ಬಸರಡ್ಡಿ, ಕಾಶಿರಾಯ ದೇಸಾಯಿ, ಸಂಗೀತಗಾರರಾದ ಅಶೋಕ ರಾಜನಕೋಳೂರ, ಬಸನಗೌಡ ಬಿರಾದಾರ, ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ಶ್ರೀಗಳಿಗೆ ಅತಿಥಿ ಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಿಜಯಕುಮಾರ ಹಿರೇಮಠ ನಿರೂಪಿಸಿದರು. ಶರಣಗೌಡ ಪೊಲೀಸ್‌ಪಾಟೀಲ ಸ್ವಾಗತಿಸಿದರು. ಸಂಗಮೇಶ ಶರಣರ ವಂದಿಸಿದರು.