
ಲಕ್ಷ್ಮೇಶ್ವರ,ಫೆ9: ಐತಿಹಾಸಿಕ ಪ್ರಸಿದ್ಧ ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ದಿನಾಂಕ 15 ರಂದು ರವಿವಾರ ಮಹಾಶಿವರಾತ್ರಿ ಉತ್ಸವದ ನಿಮಿತ್ಯವಾಗಿ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 15 ರಂದು ರವಿವಾರ ಸಾಯಂಕಾಲ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ 11.30ಕ್ಕೆ ಲಘು ರುದ್ರ ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರಭಿಷೇಕ, ಕ್ಷೀರಾಭಿಷೇಕ ಮಹಾಮಂಗಳಾರತಿ ಜರುಗಲಿದೆ.
ಫೆಬ್ರುವರಿ 15ರ ರವಿವಾರ ಸಾಯಂಕಾಲ ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಉದ್ಘಾಟನೆಯನ್ನು ತಹಶೀಲ್ದಾರ್ ಧನಂಜಯ್ ಎಂ ನೆರವೇರಿಸಲಿದ್ದಾರೆ ಅಧ್ಯಕ್ಷತೆಯನ್ನು ಅರ್ಚಕರ ಸೇವಾ ಸಮಿತಿಯ ಅಧ್ಯಕ್ಷರಾದ ದಿಗಂಬರ್ ಪೂಜಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಗುರುರಾಜ್ ಪಾಟೀಲ್ ಕುಲಕರ್ಣಿ ಶ್ರೀ ಸೋಮೇಶ್ವರ ಜಾತ್ರಾ ಕಮಿಟಿಯ ಅಧ್ಯಕ್ಷರಾದ ಕುಬೇರಪ್ಪ ಮಹಾಂತ ಶೆಟ್ಟರ್ ಯುವ ಮುಖಂಡರಾದ ಸುನಿಲ ಮಹಾ ಂತಶೆಟ್ಟರ ಆನಂದ ಸ್ವಾಮಿ ಗಡ್ಡದೇವರ ಮಠ ಪಿಎಸ್‍ಐ ನಾಗರಾಜ್ ಗಡದ ಮುಖ್ಯಾಧಿಕಾರಿ ಮಹಾಂತೇಶ್ ಬೀಳಗಿ ಆಗಮಿಸಲಿದ್ದಾರೆ.
ಸಂಜೆ 6.30 ಕೆ ದೇವಸ್ಥಾನ ಅರ್ಚಕರ ಕಾರ್ಯಕಾರಿ ಸಮಿತಿ ಪದಗ್ರಹಣ ಸಮಾರಂಭ ಜರುಗಲಿದೆ. 7.30 ಕ್ಕೆ ಡಾಕ್ಟರ್ ಅರ್ಜುನ್ ವಠಾರ ಅವರ ಶಾಸ್ತ್ರೀಯ ಸಂಗೀತ ಸುಗಮ ಸಂಗೀತ ಮತ್ತು ರಾತ್ರಿ 8 ಕ್ಕೆ ಪಂಡಿತ್ ನಟರಾಜ್ ಮಹಾಜನ್ ಅವರಿಂದ ವಾದ್ಯರಹಿತ ಸಿತಾರಾ ಶಹನಾಯಿ ವಾದನ ಜರುಗಲಿದೆ. ರಾತ್ರಿ 9ಕ್ಕೆ ವೇದಿಕಾ ದೃತ್ಯ ಶಾಲೆ ಭರತನಾಟ್ಯ ಪ್ರದರ್ಶನ ಜರುಗಲಿದೆ.
ಪ್ರಪ್ರಥಮ ಬಾರಿಗೆ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಹುಬ್ಬಳ್ಳಿ ಶಿವ ತಂಡದವರಿಂದ ಗಂಗಾ ಆರತಿ ಹಮ್ಮಿಕೊಳ್ಳಲಾಗಿದೆ.
ರಾತ್ರಿ 10 ರಿಂದ ಬೆಂಗಳೂರಿನ ದೀಪಿಕಾ ಎಚ್‍ಎಸ್ ಮತ್ತು ಅನುಶ್ರೀ ತಂಡದವರಿಂದ ನಿಮಿಷಾಂಬ ಜ್ಯೋತಿಶ್ರೀ ಇವರಿಂದ ನೃತ್ಯ ಆರಾಧನೆ ಶಿವೋಪಾಸನೆ ಜರುಗಲಿವೆ ಎಂದು ಶ್ರೀ ಸೋಮೇಶ್ವರ ದೇವಸ್ಥಾನದ ಜಂಟಿ ಕಮಿಟಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.






















