
ಧಾರವಾಡ,ಡಿ.೧೪: ೨೦೨೫-೨೬ ನೇ ಸಾಲಿನ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯಲ್ಲಿ ಸೆಪ್ಟೆಂಬರ್ ೨೨, ೨೦೨೫ ರಿಂದ ಅಕ್ಟೋಬರ್ ೩೧, ೨೦೨೫ ರವರೆಗೆ ಜರುಗಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ಗಣತಿದಾರರಿಗೆ, ಮೇಲ್ವಿಚಾಕರಿಗೆ ತರಬೇತಿ ನೀಡಿದ ರಾಜ್ಯಮಟ್ಟದ (ಮಾಸ್ಟರ್) ತರಬೇತಿದಾರರಿಗೆ ಗೌರವಧನವನ್ನು ಪಾವತಿ ಮಾಡುವ ಕಾರ್ಯ ಡಿಸೆಂಬರ್ ೧೨ ರಿಂದ ಆರಂಭವಾಗಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಗೌರವಧನ ಪಾವತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಮೀಕ್ಷೆದಾರರ ಮೇಲೆ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ ಒಟ್ಟು ೩೯೫ ಜನ ಮೇಲ್ವಿಚಾರಕರಿಗೆ ತಲಾ ರೂ.೧೦,೦೦೦ ಗಳಂತೆ ಒಟ್ಟು ೩೯,೫೦,೦೦೦ ರೂ.ಗಳು ಬಿಡುಗಡೆಯಾಗಿದ್ದು, ಎಲ್ಲಾ ಮೇಲ್ವಿಚಾರಕರ ರೆಸಿಪಿಯಂಟ್ ಐ.ಡಿ. ಗಳನ್ನು ಪಡೆಯಲಾಗಿದ್ದು, ಸದರಿಯವರಿಗೆ ಗೌರವಧನವನ್ನು ಪಾವತಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಒಟ್ಟು ೪,೮೮೪ ಸಮೀಕ್ಷಾದಾರರಿಗೆ ಸಮೀಕ್ಷೆ ಕೈಗೊಂಡಿರುವ ಮನೆಗಳಿಗನುಗುಣವಾಗಿ ಗೌರವಧನ ಪಾವತಿಸಲು ರೂ.೪,೪೦,೪೬,೭೦೦ ಬಿಡುಗಡೆಯಾಗಿದ್ದು, ಎಲ್ಲಾ ಗಣತಿದಾರರ ರೆಸಿಪಿಯಂಟ್ ಐ.ಡಿ.ಗಳನ್ನು ಪಡೆಯಲಾಗುತ್ತಿದೆ. ರೆಸಿಪಿಯಂಟ್ ಐ.ಡಿ. ಒದಗಿಸಿರುವ ೧,೫೨೫ ಗಣತಿದಾರರಿಗೆ ಒಟ್ಟು ರೂ.೧,೫೭,೬೨,೫೦೦ ಗಳನ್ನು ಪಾವತಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಉಳಿದ ಎಲ್ಲ ಗಣತಿದಾರರಿಗೂ ಗೌರವಧನ ಜಮಾ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಗಣತಿದಾರರಿಗೆ, ಮೇಲ್ವಿಚಾಕರಿಗೆ ತರಬೇತಿ ನೀಡಿದ ೯೨ ಜನ (ಮಾಸ್ಟರ್) ತರಬೇತಿದಾರರಿಗೆ ೪,೭೨,೫೦೦ ರೂ.ಗಳ ಗೌರವಧನವನ್ನು ಜಮೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು ೪,೮೮೬ ಬ್ಲಾಕ್‌ಗಳನ್ನು ಸೃಜಿಸಲಾಗಿದ್ದು, ಪ್ರತಿ ಬ್ಲಾಕ್‌ಗೆ ತಲಾ ರೂ.೫,೦೦೦ ಗಳಂತೆ ಒಟ್ಟು ರೂ.೨,೪೪,೨೫,೦೦೦ ಬಿಡಗಡೆಯಾಗಿದ್ದು, ಸಂಬAಧಪಟ್ಟ ಬ್ಲಾಕ್‌ಗಳಲ್ಲಿ ಕಾರ್ಯನಿರ್ವಹಿಸಿದ ಗಣತಿದಾರರಿಗೆ ಸದರಿ ಗೌರವಧನವನ್ನು ಪಾವತಿಸಬೇಕಾಗಿದ್ದು, ಆ ಬ್ಲಾಕ್‌ಗಳಲ್ಲಿ ಸಮೀಕ್ಷಾ ಕಾರ್ಯನಿರ್ವಹಿಸಿರುವ ಗಣತಿದಾರರ ಬ್ಲಾಕ್‌ವಾರು ಮಾಹಿತಿಗಳನ್ನು ಪಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























