
ಕಲಬುರಗಿ,ನ.2: ಪಿಯುಸಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದಲ್ಲಿ ಪರಿಣಾಮಕಾರಿ ಬೋಧನೆ ಮಾಡಿದ್ದರಿಂದ ಹಲವಾರು ವಿದ್ಯಾರ್ಥಿಗಳು ಇಂಜಿನಿಯರ್, ಎಂಬಿಬಿಎಸ್ ಮತ್ತು ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆದು ವೈದ್ಯರು ಮತ್ತು ಇಂಜಿನಿಯರ್ ಆಗಿರುವುದು ಅತ್ಯಂತ ಶ್ಲಾಘನೀಯ ಎಂದು ಎನ್ ಎಸ್ ಎಸ್ ವಿಭಾಗೀಯ ಅಧಿಕಾರಿ ಡಾ. ಚಂದ್ರಶೇಖರ್ ದೊಡ್ಡಮನಿ ಅಭಿಪ್ರಾಯಪಟ್ಟರು.ಸ್ಟೇಷನ್ ಬಜಾರ್ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಭೌತಶಾಸ್ತ್ರದ ಉಪನ್ಯಾಸಕರಾದ ರೇಖಾ ಬಿ.ರಾಯಚೂರ ಅವರ ಸೇವಾ ವಯೋನಿವೃತ್ತಿ ನಿಮಿತ್ಯ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸುಜಾತಾ ಬಿರಾದಾರ ವಹಿಸಿದ್ದರು. ಸನ್ಮಾನ ಸ್ವೀಕರಿಸಿ ರೇಖಾ ಬಿ ರಾಯಚೂರ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಎನ್ ವಿ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೆ.ಎಲ್ ಶುಕ್ಲಾ, ಉಪನ್ಯಾಸಕರಾದ ಶಶಿಧರ ಭೂಸನೂರ್ ,ಬಲರಾಮ ಚವ್ಹಾಣ,ಶ್ರೀನಿವಾಸ ಐಜಿ,ಸಿದ್ದಲಿಂಗಪ್ಪ ಪೂಜಾರಿ, ಡಾ. ಶೀಲಾವತಿ ವಾಡೆಕರ್, ಜಿಲ್ಲಾ ಎನ್‍ಎಸ್ ಎಸ್ ನೋಡಲ್ ಅಧಿಕಾರಿ ಪಾಂಡು ರಾಠೋಡ್ ಮಾತನಾಡಿದರು. ಉಪನ್ಯಾಸಕ ಡಾ.ಶಿವಪ್ಪ ಹುಣಚಾಳ್ ನಿರೂಪಿಸಿದರು. ಶ್ರೀಶೈಲ್ ಖುರ್ದು ಪ್ರಾರ್ಥಿಸಿದರು. ರೇಣುಕಾ ಚಿಕ್ಕಮೇಟಿ ವಂದಿಸಿದರು.ವಿಜಯಲಕ್ಷ್ಮಿ ರೆಡ್ಡಿ ಮಲ್ಲಯ್ಯ ಮಠಪತಿ ಪಲ್ಲವಿ ಕುಲಕರ್ಣಿ, ಮಹಿಬೂಬ್ ನದಾಫ್ , ರೋಹಿಣಿ ಕೆಎಸ್, ರಾಜೇಶ್ ಕೆಜೆ, ನಿರ್ಮಲಾ ಪವಾರ, ಲಕ್ಷ್ಮಿಕಾಂತ್ ಡೊಲೆ, ಮಲ್ಲಪ್ಪ ಮುಂತಾದವರು ಉಪಸ್ಥಿತರಿದ್ದರು.






















