Home ಜಿಲ್ಲೆ ಸೌಲಭ್ಯ ವಂಚಿತವಾದ ಪುನರ್ವಸತಿ ಕೇಂದ್ರಗಳು ಸಂತ್ರಸ್ಥರು ಅತಂತ್ರ

ಸೌಲಭ್ಯ ವಂಚಿತವಾದ ಪುನರ್ವಸತಿ ಕೇಂದ್ರಗಳು ಸಂತ್ರಸ್ಥರು ಅತಂತ್ರ

ಜಮಖಂಡಿ:ಫೆ.8:ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿಯಲ್ಲಿ ಜಲಾಶಯ ನಿರ್ಮಾಣದಿಂದ ಅವಳಿ ಜಿಲ್ಲೆಯ ಜನತೆ ಒಂದಿಲ್ಲೊಂದು ತೊಂದರೆಯನ್ನು ಅನುಭವಿಸುತ್ತಲೇ ಬಂದಿದ್ದಾರೆ. ಅದರ ಜೊತೆಗೆ ಸಂತ್ರಸ್ಥರಿಗಾಗಿ ನಿರ್ಮಿಸಿದ ಪುನರ್ವಸತಿ ಕೇಂದ್ರಗಳು ಸೌಲಭ್ಯವಂಚಿತವಗಿವೆ ಅದರಿಂದ ಸಂತ್ರಸ್ಥರು ಅತಂತ್ರಸ್ಥಿಯಲ್ಲಿದ್ದಾರೆ.
ಈ ಜಲಾಶಯವು ಬಾಗಲಕೋಟೆ ಜಿಲ್ಲೆಗೆ ವರದಾನವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಈ ಯೋಜನೆಯಲ್ಲಿ ಒಟ್ಟು ಸುಮಾರು 200 ಗ್ರಾಮಗಳು ಅದರಲ್ಲಿ ಮೊದಲು ಹಂತದಲ್ಲಿಯೇ 178 ಕ್ಕೂ ಅಧೀಕ ಗ್ರಾಮಗಳು ಮುಳುಗಡೆಯಾದರೆ ಎರಡನೇ ಹಂತದಲ್ಲಿ 22 ಕ್ಕೂ ಅಧಿಕ ಗ್ರಾಮಗಳು ಮುಳುಗಡೆ ಭಾಗ್ಯವನ್ನು ಹೊಂದಿವೆ.
ಈ ಯೋಜನೆ ಪೂರ್ಣಗೊಳ್ಳ್ಳಬೇಕಾದರೆ ಪುನರ್ವಸತಿ ಕೇಂದ್ರಗಳು ನಿರ್ಮಾಣವೇನೋ ಮಾಡಿದರು, ಆದರೆ ನಿರ್ವಹಣೆ ಮಾತ್ರ ಶೂನ್ಯವಾಗಿ ಸೌಲಭ್ಯ ವಂಚಿತವಾಗಿ ಮೂಲಭೂತ ಸೌಕರ್ಯಗಳಿಲ್ಲದೇ ತೆರೆದು ನಿಂತಿವೆ.
ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ನಿರ್ಮಾಣವಾದ ಪುನರ್ವಸತಿ ಕೇಂದ್ರಗಳನ್ನು, 2016 ರಲ್ಲಿ ಸರ್ಕಾರವು ಕೃಷ್ಣಾ ಮೇಲ್ದಂಡೆ ಯೋಜನೆ ನಿಗಮದಿಂದ ಇದ್ದ ಸ್ಥಿತಿಯಲ್ಲಿ ಎಲ್ಲ ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡಲು ಆದೇಶಮಾಡಿತ್ತು. ಕಳೆದ ಆರು ವರ್ಷದಿಂದ ಯಾವುದೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಗ್ರಾಮ ಪಂಚಾಯತಿಗಳು ವಿಫಲವಾದಂತೆ ಕಾಣುತ್ತಿವೆ
ಪುನರ್ವಸತಿ ಕೇಂದ್ರಗಳಲ್ಲಿ ಶಾಲೆಗಳ, ಪಂಚಾಯತಿ ಕಚೇರಿ, ಆರೋಗ್ಯ ಕೇಂದ್ರ, ಅದರ ಜೊತೆಗೆ ಅಧಿಕಾರಿಗಳ ವಸತಿ ಸಮುಚ್ಚಯಗಳೂ ಸಹ ಇವೆ ಅದರೆ ಅವುಗಳು ಯಾವುದಕ್ಕೂ ಉಪಯೋಗಕ್ಕೆ ಬಾರದಾಗಿವೆ ಅವೆಲ್ಲ ಅನೈತಿಕ ತಾಣಗಳಾಗವೆ. ಪುನರ್ವಸತಿ ಕೇಂದ್ರಗಳಲ್ಲಿ ಯಾವುದೇ ತರಹದ ಮೂಲಭೂತ ಸೌಕರ್ಯ ವಿಲ್ಲದೇ ಗ್ರಾಮಸ್ತರು ಅಲ್ಲಿಗೆ ಹೋಗುತ್ತಿಲ್ಲ ಜನತೆ ಪುನರ್ವಸತಿ ಕೇಂದ್ರಗಳಿಗೆ ಬರುತ್ತಿಲ್ಲವೆಂದು ಸರಕಾರ ಸೌಕರ್ಯ ನೀಡುತ್ತಿಲ್ಲ ಒಟ್ಟರೆಯಾಗಿ ಎಲ್ಲವೂ ಅಯೋಮಯವಾಗಿ ಸಂತ್ರಸ್ತರ ಬದುಕು ಬೀದಿಗೆ ನಿಂತಿದೆ. ಆದರೆ ಆಯಾ ಗ್ರಾಮಗಳಿಂದ ಬಹುದೂರವಾಗಿದ್ದು ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ತೊಂದರೆಯಗುತ್ತಿದೆಯೆಂದು ಸಂತ್ರಸ್ಥರು ಕೇಂದ್ರಗಳಿಗೆ ಹೋಗಲು ನಿರಾಕರಿಸುತ್ತಾರೆ,
2002 ರಲ್ಲಿ ನಿರ್ಮಿಸಿದ ಪುಕೆಗಳು ಇಲ್ಲಿಯವರಗೆ ಯಾವುದೆ ದುರಸ್ಥಿಯನ್ನೂ ಸಹ ಕಂಡಿಲ್ಲ ಇದ್ದ ರಸ್ತೆಗಳು ಚರಂಡಿಗಳು ಸಂಫೂರ್ಣವಾಗಿ ಹಾಳಾಗಿವೆ ಅವುಗಳನ್ನು ಮತ್ತೇ ಪುನರನಿರ್ಮಾಣ ಮಾಡಬೇಕು. ಆದರೆ ಸರಕಾರವೇನೋ ಮೂರನೇ ಹಂತದಲ್ಲಯೂ ಸಹ ಪುಕೆಗಳನ್ನು ನಿರ್ಮಿಸಿದರೆ ಹಿಂದೆ ನಿರ್ಮಿಸಿದ ಪುಕೆಗಳ ಸ್ಥಿತಿಗಳನ್ನು ಅವಲೋಕಿಸುವವರು ಯಾರು ಅದರ ಪುನರ್ಜನ್ಮಯಾವಾಗ ಎನ್ನುವುದೆ ಸಂತ್ರಸ್ಥರ ಪ್ರಶ್ನೆಯಾಗಿದೆ.

ಮುಳುಗಡೆಯ ವಿವರ—ಒಂದು ಮತ್ತು ಎರಡನೇ ಹಂತದಲ್ಲಿ 180 ಗ್ರಾಗಳು ಮುಳುಗಡೆಯಗಿದ್ದು ಒಟ್ಟು 74.742.15 ಹಕ್ಟೇರ ಜಮೀನು ನೀರಿನಲ್ಲಿ ಸ್ವಾಹಾಕಾರವಾಗಿದೆ. ಅದರಿಂದ ಸುಮಾರು 6.08 ಲಕ್ಷ ಹೆಕ್ಟೇರ ಜಮೀನು ನೀರವರಿ ಸೌಲಭ್ಯ ಹೊಂದಲಿದೆ. ಇನ್ನು ಮೂರನೇ ಹಂತದ 519.6 ಮೀ ದಿಂದ 524,256 ಮೀ ಎತ್ತರದ ಜಲಾಶಯದಲ್ಲಿ ಸುಮಾರು 20 ರಿಂದ 22 ಗ್ರಾಮಗಳು ಪೂರ್ಣ ಹಾಗೂ ಬಾಗಶಹಾ ಬಾಧಿತವಗುತ್ತಿದ್ದು, 1,33,687 ಎಕರೆ ಜಮೀನು ನೀರಿನಲ್ಲಿ ಮುಳುಗಡೆಯಾಗುತ್ತವೆ. ಮೂರನೇ ಹಂತ ಪೂರ್ಣವಾದಲ್ಲಿ 5.94 ಲಕ್ಷ ಹೆಕ್ಟೇರ ಜಮೀನಿಗೆ ಹೊಸದಾಗಿ ನೀರವರಿ ಸೌಲಭ್ಯವಾಗಲಿದೆ.