ಮಾನವೀಯ ಸೇವೆಗೆ ಮತ್ತೊಂದು ಹೆಸರು ರೆಡ್ ಕ್ರಾಸ್

ಕಲಬುರಗಿ:ನ.20:ಮಾನವ ದುಃಖವನ್ನು ತಡೆಯುವುದು ಮತ್ತು ಕಡಿಮೆ ಮಾಡುವುದು, ಮತ್ತು ಎಲ್ಲರಿಗೂ ಗೌರವವನ್ನು ಖಚಿತಪಡಿಸುವುದು ರೆಡ್ ಕ್ರಾಸ್ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಕಲಬುರ್ಗಿ ಹಾಗೂ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಸ್ಟೇಷನ್ ಬಜಾರ್ ಕಲ್ಬುರ್ಗಿಯ ಭಾರತೀಯ ರೆಡ್ ಕ್ರಾಸ್ ಕಿರಿಯ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಚಿಕಿತ್ಸಾ ಜಾಗೃತಿ ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ವಿಭಾಗೀಯ ಅಧಿಕಾರಿ ಡಾ. ಚಂದ್ರಶೇಖರ್ ದೊಡ್ಡಮನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ರೆಡ್ ಕ್ರಾಸ್ ಸಂಸ್ಥೆ ವಿಪತ್ತು ನಿರ್ವಹಣೆಯಲ್ಲಿ ,ಜನರ ಆರೋಗ್ಯ ಕಾಪಾಡುವಲ್ಲಿ ಮಾನವೀಯ ಸೇವೆ ಸಲ್ಲಿಸುವುದರ ಮೂಲಕ ಮನುಕುಲದ ಮಹತ್ವವನ್ನ ಜಗತ್ತಿಗೆ ಎತ್ತಿ ತೋರಿಸುತ್ತದೆ ಎಂದರು. ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಅರುಣ್ ಕುಮಾರ್ ಲೋಹಿಯಾ ಉದ್ಘಾಟಿಸಿ ಮಾತನಾಡಿದ ಯಾವುದೇ ಜಾತಿ ಧರ್ಮ ಬಣ್ಣ ಗುರುತಿಸದೇ ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದು ಮಾನವನಿಗೆ ಆಪತ್ತು ಬಂದಾಗ ಮುಂದೆ ಬಂದು ಸೇವೆ ಮಾಡುವುದೇ ರೆಡಕ್ರಾಸ್ ವಾಗಿದೆ. ಪ್ರಾಂಶುಪಾಲರಾದ ಸುಜಾತಾ ಬಿರಾದರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಥಮ ಚಿಕಿತ್ಸಾ ವಿಧಾನ ನಮಗೆ ಗೊತ್ತಿರದೆ ಕೆಲವು ಎಡವಟ್ಟುಗಳನ್ನ ಮಾಡಿಕೊಂಡು ಆಪತ್ತುಗಳಿಗೆ ಕಾರಣರಾಗುತ್ತೇವೆ. ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರಥಮ ಚಿಕಿತ್ಸಾ ವಿಧಾನವನ್ನು ತಿಳಿದುಕೊಂಡು ಆಪತ್ತಿನಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡಬೇಕು ಎಂದರು. ಎನ್ ಎಸ್ ಎಸ್ ವಿಭಾಗೀಯ ಅಧಿಕಾರಿ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ಮಾತನಾಡಿ ಮಾನವನ ಜೀವನಕ್ಕೆ ಪರರಿಗಾಗಿ ಸೇವೆ ಮಾಡಿದಾಗ ಮಾತ್ರ ಮೌಲ್ಯ ಬರುತ್ತದೆ ಸ್ವಾರ್ಥಕ್ಕಾಗಿ ಬದುಕುವುದು ಪ್ರಾಣಿಯ ಲಕ್ಷಣ ಬೇರೆಯವರಿಗಾಗಿ ಬದುಕುವುದು ಪರೋಪಕಾರಿ ಲಕ್ಷಣವಾಗಿದೆ ಪ್ರತಿಯೊಬ್ಬರು ಅಂಗಾಂಗ ದಾನ ಮಾಡಲು ಮುಂದಾಗಬೇಕು . ಬಡವರಿಗೆ ಅಸಹಾಯಕರಿಗೆ ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ರಕ್ತದ ಅವಶ್ಯಕತೆ ಇದ್ದಾಗ ರಕ್ತದಾನ ಮಾಡಿದಾಗ ಅದರ ಅಮೂಲ್ಯ ಸೇವೆಗೆ ಬೆಲೆ ಕಟ್ಟಲಾಗದು.ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಡಾಕ್ಟರ್ ಸಂಗಮೇಶ್ ಕೇರೆ ಪ್ರಥಮ ಚಿಕಿತ್ಸೆ ಹಾವು ಕಡಿತ. ಹೃದಯಘಾತ, ವಿಷ ಸೇವನೆ, ನಾಯಿ ಕಡಿತ, ಅಪಘಾತ ಏನೆಲ್ಲಾ ಕ್ರಮಗಳು ಕೈಗೊಳ್ಳಬೇಕು ಪ್ರಥಮ ಉಪಚಾರಗಳ ಬಗ್ಗೆ ತಿಳಿಸಿಕೊಟ್ಟರು.ರೆಡ್ ಕ್ರಾಸ್ ಸಂಸ್ಥೆಯ ಕಿರಿಯ ಸದಸ್ಯರು ಹಾಗೂ ರಾಜ್ಯಶಾಸ್ತ್ರದ ಉಪನ್ಯಾಸಕರಾದ ಸಿದ್ದಲಿಂಗಪ್ಪ ಪೂಜಾರಿ ಗಣ್ಯರ ಪರಿಚಯ ಮಾಡಿಕೊಟ್ಟರು. ಜಿಲ್ಲಾ ಎನ್ ಎಸ್ ಎಸ್ ನೋಡಲ್ ಅಧಿಕಾರಿ ಪಾಂಡು ಎಲ್ ರಾಠೋಡ್ ನಿರೂಪಿಸಿದರು. ಕನ್ನಡ ಉಪನ್ಯಾಸಕ ಡಾ .ಶಿವಪ್ಪ ಹುಣಚಾಳ ಸ್ವಾಗತಿಸಿದರು. ಉಪನ್ಯಾಸಕ ಶ್ರೀಶೈಲ್ ಖುರದ್ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರುಗಳಾದ ಬಲರಾಮ ಚವ್ಹಾಣ್ , ವಿಜಯಲಕ್ಷ್ಮಿ ರೆಡ್ಡಿ,ಶಶಿಧರ್ ಭೂಸನೂರ್, ರೇಣುಕಾ ಚಿಕ್ಕಮೇಟಿ, ಶ್ರೀನಿವಾಸ್ ಐ ಜಿ ಶಾರದಾ ,ರಾಜೇಶ್ ಕೆಜೆ ಮುಂತಾದವರು ಉಪಸ್ಥಿತರಿದ್ದರು