
ರಬಕವಿ-ಬನಹಟ್ಟಿ,ಜ.21:ಬನಹಟ್ಟಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸದಾಶಿವನಗರ ಶಾಲಾ ಶಿಕ್ಷಕ ಚಿರಂಜೀವಿ ರೋಡಕರ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್(ರಿ) ಬಾಗಲಕೋಟ ಜಿಲ್ಲಾಧ್ಯಕ್ಷರೆಂದು ನೇಮಕಗೊಳಿಸಿ ರಾಜ್ಯಾಧ್ಯಕ್ಷ ಸಂಗಮೇಶ ಖನ್ನಿನಾಯ್ಕರ, ಮಹಾ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಹಿರೇಗೌಡರ ಆದೇಶಿಸಿದ್ದಾರೆ.
ಈ ಪರಿಷತ್ತು ಸರ್ಕಾರಿ, ಅನುದಾನಿತ ಪೂರ್ವಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು, ಶಿಕ್ಷಕರನ್ನೊಳಗೊಂಡ ಸಂಘಟನೆಯಾಗಿದೆ.






















