ದಿ.9 ರಿಂದ ರಿಕಾನ್ ಎಕ್ಸ್ ಪೋ 2026

ಹುಬ್ಬಳ್ಳಿ,ಜ7: ಕ್ರೆಡಾಯ್ ಹುಬ್ಬಳ್ಳಿ-ಧಾರವಾಡ ವತಿಯಿಂದ ರಿಕಾನ್ ಎಕ್ಸ್‍ಪೆÇೀ 2026 ಆಯೋಜನೆ – ಉತ್ತರ ಕರ್ನಾಟಕದ ಅತಿದೊಡ್ಡ, ರಿಯಲ್ ಎಸ್ಟೇಟ್, ಒಳಾಂಗಣ ವಿನ್ಯಾಸ ಮತ್ತು ನಿರ್ಮಾಣ ಸಾಮಗ್ರಿಗಳ ಪ್ರದರ್ಶನ ಜನವರಿ 9, 2026 ರಂದು ನಡೆಯಲಿದೆ ಎಂದು ಕ್ರೆಡಾಯ್ ಹುಬ್ಬಳ್ಳಿ-ಧಾರವಾಡ ಘಟಕದ ಅಧ್ಯಕ್ಷರಾದ ಗುರುರಾಜ್ ಎಂ. ಅಣ್ಣಿಗೇರಿ ಹೇಳಿದರು. ಅವರು, ಉತ್ತರ ಕರ್ನಾಟಕದ ಬೃಹತ್ ರಿಯಲ್ ಎಸ್ಟೇಟ್, ಇಂಟೀರಿಯರ್ಸ್ ಮತ್ತು ನಿರ್ಮಾಣ ಸಾಮಗ್ರಿಗಳ ಪ್ರದರ್ಶನವಾದ `ರಿಕಾನ್ ಎಕ್ಸ್ ಪೋ 2026′ ಅನ್ನು ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಪ್ರದರ್ಶನವು ಶುಕ್ರವಾರ, ಜನವರಿ 9, 2026 ರಂದು ಬೆಳಗ್ಗೆ, 11:00 ಗಂಟೆಗೆ ಹುಬ್ಬಳ್ಳಿಯ ಏರ್‍ಪೆÇೀರ್ಟ್ ರಸ್ತೆಯ ದೇಶಪಾಂಡೆ ಸ್ಮಾರ್ಟ್ ಅಪ್ಸ್ ಎದುರು ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮವು ಜನವರಿ 9 ರಿಂದ 11 ರವರೆಗೆ ಮೂರು ದಿನಗಳ ಕಾಲ ಪ್ರತಿದಿನ ಬೆಳಗ್ಗೆ 11:00 ರಿಂದ ರಾತ್ರಿ 9:00 ರವರೆಗೆ ನಡೆಯಲಿದೆ ಎಂದರು.

ಪ್ರದರ್ಶನದ ಕುರಿತು ಮಾಹಿತಿ ನೀಡಿದ ರಿಕಾನ್ ಎಕ್ಸ್‍ಪೆÇೀ 2026 ರ ಸಂಚಾಲಕ ಇಸ್ಮಾಯಿಲ್ ಸಾಂಸಿ ಅವರು, “ಮೊದಲ ಬಾರಿಗೆ ಕ್ರೆಡಾಯ್ ಹುಬ್ಬಳ್ಳಿ ಧಾರವಾಡವು ‘ಯಶ್ ಇವೆಂಟ್ಸ್’ ಸಹಯೋಗದೊಂದಿಗೆ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ 150 ಕ್ಕೂ ಹೆಚ್ಚು ಮಳಿಗೆಗಳೊಂದಿಗೆ ಈ ಮೆಗಾ ಎಕ್ಸ್ಪೋವನ್ನು ಆಯೋಜಿಸುತ್ತಿದೆ. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳು ಸೇರಿದಂತೆ ಬೆಂಗಳೂರು, ಮೈಸೂರು, ದಾವಣಗೆರೆ ಹಾಗೂ ಮೊದಲ ಬಾರಿಗೆ ದುಬೈ ಮೂಲದ ಪ್ರಾಪರ್ಟಿ ಕನ್ನಲೆಂಟ್‍ಗಳು ಮತ್ತು ಬಿಲ್ಡರ್‍ಗಳು ಇಲ್ಲಿ ಭಾಗವಹಿಸುತ್ತಿದ್ದಾರೆ. ನಿವೇಶನಗಳು, ಫ್ಯಾಟ್‍ಗಳು, ವಾಣಿಜ್ಯ ಮಳಿಗೆಗಳು, ನವೀನ ನಿರ್ಮಾಣ ಸಾಮಗ್ರಿಗಳು ಮತ್ತು ಆಧುನಿಕ ಒಳಾಂಗಣ ವಿನ್ಯಾಸಗಳನ್ನು ಆಕರ್ಷಕ ರಿಯಾಯಿತಿ ದರದಲ್ಲಿ ಒಂದೇ ಸೂರಿನಡಿ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿದೆ,” ಎಂದರು.

ಕ್ರೆಡಾಯ್ ಚೇರ್ಮನ್ ಸಂಜಯ್ ಕೊಠಾರಿ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಸೂರಜ್ ಅಲವಂಡಿ, ಕ್ರೆಡಾಯ್ ಕಾರ್ಯದರ್ಶಿ ಸತೀಶ್ ಮುನವಳ್ಳಿ, ಶಿವಣ್ಣ ಪಾಟೀಲ್, ಜಂಟಿ ಕಾರ್ಯದರ್ಶಿಗಳಾದ ಅರ್ಬಾಜ್ ಸಾಂಸಿ, ಶ್ರೀಪಾದ್ ಶೇಜ್ಞಾಡ್ಕರ್, ಖಜಾಂಚಿ ಬ್ರಿಯಾನ್ ಡಿಸೋಜಾ, ಜಂಟಿ ಖಜಾಂಚಿ ಆಕಾಶ್ ಹಬೀಬ್, ಮೆಂಟರ್ ಜಯರಾಮ್ ಶೆಟ್ಟಿ, ಸಲಹೆಗಾರ ಸಜೀದ್ ಫರಾಶ್, ಸಲಹೆಗಾರ ಮತ್ತು ಕ್ರೆಡಾಯ್ ಕರ್ನಾಟಕದ ಮಾಜಿ ಅಧ್ಯಕ್ಷ ಪ್ರದೀಪ್ ರಾಯ್ಕರ್ ಹಾಗೂ ಕಾರ್ಯಕ್ರಮ ನಿರ್ದೇಶಕರಾದ ಪ್ರಕಾಶ್ ಕಲ್ಕುಂದ್ರಿಕರ್ ಮತ್ತು ವಿನಯ್ ಕದಂ ಉಪಸ್ಥಿತರಿದ್ದರು.