Home ಜಿಲ್ಲೆ ಕಲಬುರಗಿ ದಸರಾ ಅಂಗವಾಗಿ ದೇವಿ ಪಾರಾಯಣ

ದಸರಾ ಅಂಗವಾಗಿ ದೇವಿ ಪಾರಾಯಣ

ಚಿಂಚೋಳಿ: ತಾಲೂಕಿನ ಚಿಮ್ಮಇದಲಾಯಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ಹಿರಿಮಠದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ದಸರಾ ಹಬ್ಬದ ನಿಮಿತ್ತ ದೇವಿ ಪಾರಾಯಣ ಹಾಗೂ ಕೋರವಾರದ ಶ್ರೀ ಅಣ್ಣ ವೀರಭದ್ರೇಶ್ವರ ದೇವರ ಮಹಾಪುರಾಣ ಕಾರ್ಯಕ್ರಮವು ಭಕ್ತಿಭಾವದಿಂದ ಜರುಗಿತು.
ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಅಣ್ಣ ವೀರಭದ್ರೇಶ್ವರ ದೇವರಿಗೆ ಗ್ರಾಮದ ಐವರು ಮುತ್ತೈದೆಯರು ಸೇರಿಕೊಂಡು ತೊಟ್ಟಿಲು ಹಾಕುವ ಕಾರ್ಯಕ್ರಮವನ್ನು ನೆರವೇರಿಸಿದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ವಿಜಯ ಮಹಾಂತೇಶ್ವರ ಶಿವಾಚಾರ್ಯರು, ಚಿಂಚೋಳಿ ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಂಜೀವಕುಮಾರ್ ಪಾಟೀಲ, ಚಿಮ್ಮಇದಲಾಯಿ ಗ್ರಾಮದ ಮುಖಂಡರಾದ ಶಿವಶರಣಪ್ಪ ಡೆಂಗಿ, ವೀರೇಶ್ ದೇಸಾಯಿ, ಮಲ್ಲಿಕಾರ್ಜುನ ದಳಪತಿ, ಶಾಂತಲಿಂಗಯ್ಯ ಸ್ವಾಮಿ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.