
ಕಲಬುರಗಿ,ಜೂ.16- ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುವ ನೀಟ್ಟಿನಲ್ಲಿ ಹಾಗೂ ಸ್ವ-ಉದ್ಯೋಗ ಪ್ರವಾಸಿ ವಾಹನ ಕಾರ್ ಟ್ಯಾಕ್ಸಿ ಚಾಲನೆಯ ಮೂಲಕ ಜೀವನ ಬದುಕು ಕಟ್ಟಿಕೊಳ್ಳಲು ತರಬೇತಿ, ಮಾರ್ಗದರ್ಶನ ಹಾಗೂ ಯೋಜನೆಯ ಕುರಿತು ಪ್ರಚಾರ ಕೈಗೊಳ್ಳಲುವುದು ಅಗತ್ಯವಾಗಿದೆ ಎಂದು ಕಲಬುರಗಿ ಜಿಲ್ಲಾ ಚಾಲಕರ ಸಂಘವು ಇಲ್ಲಿನ ಎಲ್ಲಾ ಚಾಲಕರಿಗೆ ಪ್ರವಾಸಿಗರ ಸುರಕ್ಷತೆ ಕುರಿತು ಮಾಹಿತಿ ಮಾರ್ಗದರ್ಶನ ತರಬೇತಿ ನೀಡಬೇಕು ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪ್ರವಾಸೋದ್ಯಮ ಇಲಾಖೆಯ ಮೂಲಕ ಕಲಬುರಗಿ ಜಿಲ್ಲಾ ಚಾಲಕರ ಸಂಘ ಕ್ಕೆ ಅನುಮೋದನೆ ಹಾಗೂ ಈ ಇಲಾಖೆಯ ಸೌಲಭ್ಯಗಳು ಸರಳವಾಗಿ ಒದಗಿಸಬೇಕು. ಪ್ರವಾಸೋದ್ಯಮ ಇಲಾಖೆಯ ಸಮಿತಿಯು ಸಾರಿಗೆ ಇಲಾಖೆ ಮತ್ತು ಸಂಚಾರಿ ಪೆÇೀಲಿಸ್, ಆರೋಗ್ಯ ಇಲಾಖೆಯ ಒಳಗೊಂಡತೆ ಕಲಬುರಗಿ ಜಿಲ್ಲಾ ಚಾಲಕರ ಸಂಘದ ನಾಮ ನಿರ್ದೇಶನ ಮಾಡಬೇಕು.
ಕಲಬುರಗಿ ನಗರದ ಪ್ರಮುಖ ಸ್ಥಳಗಳಲ್ಲಿ ಹಾಗೂ ಹೊರವಲಯ ರಿಂಗ ರೋಡಗಳಲ್ಲಿ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಚಿತ್ರಗಳ ಬ್ಯಾನರ್ ಹೋಲ್ಡಿಂಗಸ್-ಫಲಕ ಲಗತ್ತಿಸಬೇಕು. ಕೈಪಿಡಿ ಪ್ರಕಟಣೆ ಮಾಡಿ ಹಂಚಬೇಕು. ರಾಜ್ಯದಿಂದ ಆಂದ್ರಪ್ರದೇಶ, ತೆಲಂಗಾಣ, ತಮಿಳನಾಡು, ಗೋವಾ, ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೆ ಪ್ರವಾಸಿ ವಾಹನ ಕಾರ್ ಟ್ಯಾಕ್ಸಿ ಹೋಗಿ ಬರಲು ತೆರೆಗೆಯನ್ನು ಕಡಿಮೆ ಮಾಡಬೇಕು ಈ ಮೂಲಕ ಕಾರ್ ಟ್ಯಾಕ್ಸಿ ಪ್ರವಾಸಿಗರಿಗೆ ರಾಜ್ಯ ವಿವಿಧ ಸ್ಥಳಗಳಿಗೆ ಭೇಟಿ ಕೊಡಲು ಸರಳಿಕರಣ ಗೊಳಿಸಬೇಕು.
ಕಲ್ಯಾಣ ಕರ್ನಾಟಕದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈ ಐತಿಹಾಸಿಕ ಸ್ಥಳಗಳ ಭೇಟಿಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಸೂಕ್ತ ಮಾಹಿತಿ ಮಾರ್ಗದರ್ಶನದ ಕೈಪೀಡಿ-ಕ್ಯಾಲೇಂಡರ್ ಉಚಿತವಾಗಿ ನೀಡುವ ಯೋಜನೆ ರೂಪಿಸಿ, ಶೈಕ್ಷಣಿಕ ಪ್ರವಾಸಿ ಪೂರ್ವ ಮಾಹಿತಿಯನ್ನು ಶಾಲಾ ಕಾಲೇಜು ಮಕ್ಕಳಿಗೆ ನೀಡಬೇಕು.
ಕಲ್ಯಾಣ ಕರ್ನಾಟಕ ಸ್ವಯಂ ಉದ್ಯೋಗಿ ಕಾರ್ ಟ್ಯಾಕ್ಸಿ-ಚಾಲಕರ ಸಂಘದ ಪದಾಧಿಕಾರಿಗಳ ಸಭೆಯನ್ನು ಕರೆದು, ಪ್ರವಾಸಿ ವಾಹನ ಚಾಲಕರ ದುಂಡು ಮೇಜಿನ್ ಸಭೆಯನ್ನು ಆಯೋಜಿಸುವಂತೆ ಮನವಿ.ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರೀಶಿಲಿಸಿ ಕಾರ್ ಟ್ರಾಕ್ಸಿ ಸಂಘಗಳಿಗೆ ಹಾಗೂ ಪ್ರವಾಸಿಗಳಿಗೆ ಅನುಕೂಲಕರ ವ್ಯವಸ್ಥೆ ರೂಪಿಸಬೇಕೆಂದು ಕಲಬುರಗಿ ಜಿಲ್ಲಾ ಚಾಲಕರ ಸಂಘ (ರಿ) ಅಧ್ಯಕ್ಷ ಚಂದ್ರಶೇಖರ, ಪ್ರವಾಸಿ ಮಾರ್ಗದರ್ಶಿ ಪ್ರಶಿಕ್ಷಾರ್ಥಿಗಳು, ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.