
ಕಲಬುರಗಿ,ಜ.10: ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಹಾಗೂ ಹುಳಗೇರಾ ಅಣವೀರಭದ್ರೇಶ್ವರ ಜಾತ್ರೆಯು ಜ. 14 ರಂದು ಜರುಗುವುದು. ಮುಂಜಾನೆ 6 ಗಂಟೆಯಿಂದ 10.30 ರವರೆಗೆ ಗೌರಿಶಂಕರ ಟೆಂಗಿನಮಠ ರಟಕಲ್ ಅವರಿಂದ ರುದ್ರಾಭಿಷೇಕ ಜರುಗುವುದು. ಮುಂಜಾನೆ 11 ಗಂಟೆಯಿಂದ 2 ರ ವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುವವು. ಮಧ್ಯಾಹ್ನ 2.30 ಗಂಟೆಯಿಂದ ಶಿವಾನುಭವ ಚಿಂತನ ಮತ್ತು ಧರ್ಮಸಭೆ ನಡೆಯುವದು.ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠ ಶ್ರೀನಿವಾಸ ಸರಡಗಿ ಹಾಗೂ ಕುರಿಕೋಟಾ ಮತ್ತು ಸುಲ್ತಾನಪುರ ಪೀಠದ ಮಠಾಧೀಶರಾದ ಡಾ.ರೇವಣಸಿದ್ದ ಶಿವಾಚಾರ್ಯರು ಸಾನಿಧ್ಯವಹಿಸುವರು. ರಟಕಲ್ ಹಿರೇಮಠದ ರೇವಣಸಿದ್ದ ಶಿವಾಚಾರ್ಯರು, ರಟಕಲ್‍ವಿರಕ್ತಮಠದ ನೀಲಕಂಠ ದೇವರು ಅಧ್ಯಕ್ಷತೆ ವಹಿಸುವರು.
ಚಿಂಚೋಳಿ ಶಾಸಕ ಡಾ.ಅವಿನಾಶ ಉಮೇಶ ಜಾಧವ ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಶಾಸಕರಾದ ಬಸವರಾಜ ಮತ್ತಿಮೂಡ,ಚಂದ್ರಶೇಖರ ಪಾಟೀಲ ಹುಮನಾಬಾದ್,ಜಗದೇವ ಗುತ್ತೇದಾರ ಅವರು ಸೇರಿದಂತೆ ಅನೇಕ ಗಣ್ಯರು ಆಗಮಿಸುವರು.
ಸಂಜೆ 5.30 ಕ್ಕೆ ಅಣವೀರಭದ್ರೇಶ್ವರ ಮತ್ತು ಭದ್ರಕಾಳಿ ದೇವಿಯ ಕಲ್ಯಾಣ ಮಹೋತ್ಸವ ಜರುಗುವುದು.ರಾತ್ರಿ 10 ಗಂಟೆಯಿಂದ ರಟಕಲ್, ಹುಳಗೇರಾ, ದುತ್ತರಗಿ ಮತ್ತು ರುಮ್ಮನಗೂಡ ಸದ್ಭಕ್ತರಿಂದ ಭಜನೆ,ಚಂದ್ರಕಾಂತ ಪೆದ್ದಿ ಮತ್ತು ಸಂಗಡಿಗರಿಂದ ಸಂಗೀತ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ರಟಕಲ್ ಶ್ರೀ ಅಣವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಪದಾಧಿಕಾರಿಗಳು ಮತ್ತು ಕಲಬುರಗಿ ವಿಶ್ವರಾಧ್ಯ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅವರು ತಿಳಿಸಿದ್ದಾರೆ.























