
ಕಲಬುರಗಿ,ಮಾ.14: ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಮ್ಮನ ಸಿರಸಗಿ ಗ್ರಾಮದ ಭಾಗೇಶ ಉಮ್ಮರಗಿ ಅವರ ಮನೆಯ ಆವರಣದಲ್ಲಿ ಪೂಜನೀಯ ತುಳಸಿ ಸಸಿ ನೆಟ್ಟಿರುವರು. ಇದು ಕ್ರಮೇಣ ಸುಮಾರು 15 ಅಡಿಗೂ ಹೆಚ್ಚು ಎತ್ತರ ಬೆಳೆದಿದೆ.
ಸಾಮಾನ್ಯವಾಗಿ ತುಳಸಿ ಸಸಿ ಒಂದು ಅಥವಾ ಎರಡಡಿ ಇರುವದು. ಆದರೆ ಇವರ ಮನೆಯ ಅಂಗಳದಲ್ಲಿ ಸೊಂಪಾಗಿ ಬೆಳೆದ ತುಳಸಿ ಗಿಡ ಸುಮಾರು 15 ಅಡಿಗೂ ಹೆಚ್ಚು ಎತ್ತರ ಮನೆಯ ಮೇಲ್ಛಾವಣಿಗಿಂತ ಎತ್ತರ ಬೆಳೆದು ನೋಡುವವರಿಗೆ ಅಚ್ಚರಿ ಮೂಡಿಸುವಂತೆ ಮಾಡಿದೆ.ನಿತ್ಯ ಪೂಜಿಸುವ ಈ ಗಿಡ ಅಪರೂಪದಲ್ಲಿ ಅಪರೂಪದಂತಿದೆ.
-ಗುರುರಾಜ ಪಟ್ಟಣಶೆಟ್ಟಿ.




















