Home ಜಿಲ್ಲೆ ಕಲಬುರಗಿ ಒರಟು ರಾಜಕಾರಣಕ್ಕೆ ರಂಜೋಳ ಗ್ರಾಮಸ್ಥರು ತಿಲಾಂಜಲಿ:ಭಾವೈಕ್ಯತೆಯ ಕೇಂದ್ರಕ್ಕೆ ಧಕ್ಕೆ ತರುವ ಪ್ರಯತ್ನ ವಿಫಲ:ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಒರಟು ರಾಜಕಾರಣಕ್ಕೆ ರಂಜೋಳ ಗ್ರಾಮಸ್ಥರು ತಿಲಾಂಜಲಿ:ಭಾವೈಕ್ಯತೆಯ ಕೇಂದ್ರಕ್ಕೆ ಧಕ್ಕೆ ತರುವ ಪ್ರಯತ್ನ ವಿಫಲ:ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಸೇಡಂ,ಆ,23:ಹಳ್ಳಿಗಳಲ್ಲಿ ದ್ವೇಷ ಗುಂಪುಗಾರಿಕೆ, ವೈಯಕ್ತಿಕ ನಿಂದನೆ ಮತ್ತು ಒರಟು ರಾಜಕೀಯದ ಕಾಲ ಮುಗಿದ್ದು ಹೋಗಿದೆ, ಜನಸಾಮಾನ್ಯರು ಈಗ ರಾಜಕೀಯದ ಚದುರಂಗದಾಟಗಳನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆ, ಅವರು ಕೇವಲ ಅಭಿವೃದ್ಧಿ ಹಾಗೂ ನೆಮ್ಮದಿಯನ್ನು ಮಾತ್ರ ಬಯಸುತ್ತಿದ್ದಾರೆ ಎಂಬುದಕ್ಕೆ ರಂಜೋಳ ಗ್ರಾಮಸ್ಥರೇ ಉದಾಹರಣೆಯೆಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಊಡಗಿ ಅಭಿಪ್ರಾಯಪಟ್ಟರು.
ತಾಲೂಕಿನ ರಂಜೋಳ ಗ್ರಾಮದಲ್ಲಿ ನಿರ್ಮಾಣಗೊಂಡ ವೀರಾಂಜನೇಯ ಹಾಗೂ 9 ಗ್ರಾಮ ದೇವತೆಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇವಾಲಯಗಳು ಭಕ್ತಿ ಮತ್ತು ಊರಿನ ಸಮಸ್ತ ಜನರ ಸಾಂಸ್ಕøತಿಕ ಒಗ್ಗಟ್ಟಿನ ಕೇಂದ್ರಗಳಾಗಿವೆ. ಇಲ್ಲಿ ಪಕ್ಷ, ಜಾತಿ ಗುಂಪಿನ ಆಧಾರದ ಮೇಲೆ ರಾಜಕೀಯ ಬಣ್ಣ ಬಳಿಯುವುದು ಊರಿನ ಶಾಂತಿಯುತ ವಾತಾವರಣವನ್ನು ಹಾಳು ಮಾಡುವ ಪ್ರಯತ್ನ ಮಾಡಿದ್ದು, ಇದು ಅತ್ಯಂತ ಅಹಿತಕರ ಘಟನೆಯಾಗಿದ್ದು ಇಂತ ಘಟನೆ ಆಗಬಾರದಿತ್ತು ಹಾಗಿದೆ ಅದನ್ನು ಮರೆತುಬಿಡಿ ಎಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದ ಸಚಿವರು,ಗ್ರಾಮದ ಜನರು ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾದಾಗಿ ಹೊರಗಿನ ಹಾಗೂ ಒಳಗಿನ ಯಾವುದೇ ವಿಚ್ಛಿದ್ರಕಾರಕ ಶಕ್ತಿಗಳು ತಮ್ಮ ಸ್ವಾರ್ಥ ಸಾಧಿಸಲು ಸಾಧ್ಯವಿಲ್ಲ. ಈ ಒಗ್ಗಟ್ಟೇ ಊರಿನ ಸಮಗ್ರ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ ಎಂದರು. ಸತೀಶ್ ರೆಡ್ಡಿ ಪಾಟೀಲ್ ರಂಜೋಳ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷರಾದ ಶರಣು ಗದ್ದಿಗೆ, ಗುರುಮಿಠಕಲ್ ಪೂಜ್ಯರಾದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ವೇದಿಕೆ ಮೇಲೆ ಭೋಜ ಲಿಂಗೇಶ್ವರ ಮಠದ ಪ್ರಕಾಶ್ ತಾತಾ, ಅಬ್ದುಲ್ ಸಾಬ್ ಮುತ್ಯಾ, ಹಾಗೂ ಬಸವರಾಜ ಪಾಟೀಲ ಊಡಗಿ, ರವೀಂದ್ರ ನಂದಿಗಾಮ, ವೆಂಕಟ್ ನರಸಿಂಹ ರೆಡ್ಡಿ, ನಾರಾಯಣರೆಡ್ಡಿ ಶೇರಿಕಾರ್,ವಿಶ್ವನಾಥ ಪಾಟೀಲ ಕುಕುಂದಾ, ಸತೀಶ್ ಪೂಜಾರಿ, ರವಿ ಸಾಹು, ರಾಜು ಗೌಡ ಬೆನಕನಹಳ್ಳಿ, ಮೋಹನ್ ರೆಡ್ಡಿ, ಲಕ್ಷ್ಮಿಕಾಂತ್, ಕುಲಕರ್ಣಿ, ರಾಮಯ್ಯ ಪೂಜಾರಿ, ರಾಮಚಂದ್ರ ಗುತ್ತೇದಾರ್, ರಾಜು ಪಸಾರ, ಅಬ್ದುಲ್ ರಶೀದ್, ಹೇಮರೆಡ್ಡಿ ಪಾಟೀಲ್ ಕಲಕಂಭ, ವೀರೇಂದ್ರ ರುದ್ನೂರ, ಹಫೀಜ್ ರಶೀದ್ ರಂಜೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ಅವರು ಆರೋಪಿಸಿರುವ ದೇಣಿಗೆ ಹಣ ಲೂಟಿಯ ಆರೋಪಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಅಭಿವೃದ್ಧಿಗಾಗಿ ಬಂದ ದೇಣಿಗೆ ಹಣ ಪ್ರತಿನಿತ್ಯ ವಾಟ್ಸಪ್ ಗ್ರೂಪ್ನಲ್ಲಿ ಖರ್ಚು ವೆಚ್ಚದ ಬಗ್ಗೆ ವಿವರವಾಗಿ ಮಾಹಿತಿ ಇದೆ,
ಸತೀಶ್ ರೆಡ್ಡಿ ಪಾಟೀಲ್
ಗ್ರಾಮದ ಮುಖಂಡರು ರಂಜೋಳ

ರಂಜೋಳ್ ಗ್ರಾಮದ ಯುವ ಮುಖಂಡರಾದ ಮೋಹನ್ ರೆಡ್ಡಿ ನೇತೃತ್ವದಲ್ಲಿ ದ್ವಿಚಕ್ರ ವಾಹನ ????ಲಿ ಮುಖಾಂತರ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಊಡಗಿ ಅವರಿಗೆ ಭವ್ಯ ಮೆರವಣಿಗೆ ಮುಖಾಂತರ ಬರಮಾಡಿಕೊಂಡರು, ನಂತರ ವೇದಿಕೆ ಮೇಲೆ ಸತೀಶ್ ರೆಡ್ಡಿ ಪಾಟೀಲ್ ರಂಜೋಳ ನೇತೃತ್ವದಲ್ಲಿ ಸಚಿವರಿಗೆ ಬೆಳ್ಳಿ ಗದ್ದೆ ನೀಡಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.