ರಾಣಿ ಚನ್ನಮ್ಮನ ಧೈರ್ಯ ತ್ಯಾಗ ಮಹಿಳೆಯರಿಗೆ ಪ್ರೇರಣೆ

ಶಿಡ್ಲಘಟ್ಟ.ಆ,೨೪:ಐದು ಶತಮಾನಗಳ ನಂತರ ದಿನಗಳಲ್ಲಿ ಶಿಕ್ಷಣ, ರಾಜಕೀಯ, ಉದ್ಯೋಗ, ಕ್ರೀಡೆ, ವಿಜ್ಞಾನ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಗಂಡಸರ ಸರಿಸಮಾನವಾಗಿ ಮಹಿಳೆಯರು ಮುನ್ನಡೆಯುತ್ತಿರುವುದು ಹೆಮ್ಮಯ ಸಂಗತಿ ಕಿತ್ತೂರಿನ ಹುಲಿ ಎಂದೇ ಖ್ಯಾತಿ ಪಡೆದ ರಾಣಿ ಚನ್ನಮ್ಮನ ಧೈರ್ಯ ಮತ್ತು ತ್ಯಾಗವು ಭಾರತೀಯ ಮಹಿಳೆಯರಿಗೆ ಶಾಶ್ವತ ಪ್ರೇರಣೆಯಾಗಿದೆಯೆಂದು ವೀರಶೈವ ಸಮಾಜದ ಚಂದ್ರಶೇಖರ್ ಬಾಬು ಹೇಳಿದರು.


ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ನಾಡಹಬ್ಬಗಳ ಆಚರಣಾ ಸಮಿತಿ ಹಾಗೂ ವೀರಶೈವ ಲಿಂಗಾಯತ ಸಮುದಾಯದ ವತಿಯಿಂದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಿತ್ತೂರಿನ ರಾಣಿ ಚನ್ನಮ್ಮ ಬ್ರಿಟಿಷರ ಆಕ್ರಮಣಕಾರಿ ನೀತಿಗೆ ವಿರುದ್ಧವಾಗಿ ಧೈರ್ಯವಾಗಿ ನಿಂತು, ತನ್ನ ರಾಜ್ಯವನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಮೊದಲ ಮಹಿಳಾ ಯೋಧೆ ಎಂದರು.


ಗ್ರೇಟ್ ೨ ತಹಶೀಲ್ದಾರ್ ರಾಜೇಂದ್ರ ರವರು ಮಾತನಾಡಿ ರಾಣಿ ಚನ್ನಮ್ಮ ರಾಷ್ಟ್ರಕ್ಕಾಗಿ ಶಸ್ತ್ರ ಹಿಡಿದು ಹೋರಾಡಿದವರು. ಅವರಂತಹ ಸಾಹಸಿಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.


ರಾಜ್ಯ ನೇಕಾರ ಸಂಘದ ಅಧ್ಯಕ್ಷ ಗಣೇಶ್ ರವರು ಮಾತನಾಡಿ ಪ್ರತಿ ಮಹಿಳೆಯರು ಮುಂದೆ ಬಂದು ಕಿತ್ತೂರು ರಾಣಿ ಚನ್ನಮ್ಮನ ಆದರ್ಶಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು.


ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಕುಮಾರ್, ಅಖಿಲ ಭಾರತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಬಸವರಾಜು, ಶ್ರೀ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ನಂದೀಶ್, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಮಂಜುನಾಥ್, ಜಿಲ್ಲಾ ಸಪಾಯಿ ಕರ್ಮಚಾರಿ ಸದಸ್ಯ ಲಕ್ಷ್ಮಣರಾಜು, ಕಸಾಪ ತಾಲ್ಲೂಕು ಅದ್ಯಕ್ಷ ಪಟೇಲ್ ನಾರಾಯಣಸ್ವಾಮಿ, ಎಲ್ಲಾ ಇಲಾಖಾ ಅಧಿಕಾರಿಗಳು, ಕನ್ನಡಪರ ಸಂಘಟಿತರು ವಿದ್ಯಾರ್ಥಿಗಳು ಮತ್ತು ಮಹಿಳಾ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.