ರಾಣಿ ಚನ್ನಮ್ಮ ಮಹಿಳಾಶಕ್ತಿ ಪ್ರತೀಕ


ಚನ್ನಮ್ಮನ ಕಿತ್ತೂರು,ಫೆ.೪: ಕಿತ್ತೂರು ರಾಣಿ ಚನ್ನಮ್ಮಳು ಮಹಿಳಾಶಕ್ತಿ ಪ್ರತೀಕವಾಗಿದ್ದು ಇಂದಿನ ಯುವಪಿಳಿಗೆಗೆ ಪ್ರೇರಕ ಶಕ್ತಿಯಾಗಿದ್ದಾಳೆಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ ಹೇಳಿದರು.


ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕಿತ್ತೂರು ತಾಲೂಕಾ ಕಸಾಪಗಳ ಸಂಯುಕ್ತ ಆಶ್ರಯದಲ್ಲಿ ಕಲ್ಮಠ ಆವರಣದಲ್ಲಿ ನಡೆದ ಚನ್ನಮ್ಮಾಜಿ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಸರ್ಕಾರ ಮತ್ತು ಜನಪ್ರತಿನಿಧಿಗಳು ಸ್ವಾತಂತ್ರö್ಯಕ್ಕಾಗಿ ಹೋರಾಡಿದ ವೀರಮಹಿಳೆಯ ನಾಡಾದ ಐತಿಹಾಸಿಕ ಚನ್ನಮ್ಮನ ಕಿತ್ತೂರನ್ನು ಪ್ರವಾಸಿ ಕ್ಷೇತ್ರವಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ಆಶಿಸಿದರು.


ಕಸಾಪ ಅಧ್ಯಕ್ಷ ಡಾ. ಎಸ್.ಬಿ. ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ಪುರುಷ ಪ್ರಧಾನ ಸಮಾಜದಲ್ಲಿ ಬ್ರಿಟಿಷರ ವಿರುದ್ದ ಹೋರಾಡಿದ ವೀರವನಿತೆ ಚನ್ನಮ್ಮ ಮಹಿಳಾ ಶಕ್ತಿಯ ಉದಾಹರಣೆಯಾಗಿದ್ದು ಅವರ ಸಾಹಸ, ಸ್ವಾಭಿಮಾನ, ದೇಶಪ್ರೇಮ ಮತ್ತು ತ್ಯಾಗ, ಬಲಿದಾನಗಳು ಅಜರಾಮರ ಉಳಿದಿದ್ದು ನಾವು ಅವುಗಳನ್ನು ಪ್ರತಿದಿನ ಸ್ಮರಿಸುವುದು ಅವಶ್ಯಕವಾಗಿದೆ ಎಂದು.


ಇದಕ್ಕೂ ಪೂರ್ವ ಚನ್ನಮ್ಮನ ಪುತ್ಥಳಿಗೆ ಪುಷ್ಪನಮನ ಅರ್ಪಿಸುವ ಮೂಲಕ ರಾಣಿಚನ್ನಮ್ಮಾಜಿ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜಗುರು ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ರಾಜಗುರು ಶಿಕ್ಷಕರು, ಕಸಾಪ ಪದಧಿಕಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಗಣ್ಯರಿದ್ದರು. ರಾಜೇಶ್ವರಿ ಕಳಸಣ್ಣವರ ಸ್ವಾಗತಿಸಿದರು, ಆನಂದ ಶಿವಳ್ಳಿಮಠ ವಂದಿಸಿದರು.