ವೈದ್ಯಕೀಯ ಕಾಲೇಜಿಗಾಗಿ ರಂಗೋಲಿ ಚಳುವಳಿ

ಬಸವನ ಬಾಗೇವಾಡಿ:ನ.19: ವಿಜಯಪುರ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ 62 ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಜನ ವೇದಿಕೆ ಮತ್ತು ಕರ್ನಾಟಕ ಜನ ಆರೋಗ್ಯ ಚಳುವಳಿ ಸಂಘಟನೆ ಪದಾಧಿಕಾರಿಗಳು ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೃಹತ್ ರಂಗೋಲಿಯನ್ನು ಬಿಡಿಸಿ ಗಮನ ಸೆಳೆದರು ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಖಾಸಗಿ ಸಹ ಭಾಗಿತ್ವ ಕೈಬಿಡಬೇಕು ಹಾಗೂ ಸರಕಾರಿ ಆಸ್ಪತ್ರೆಯನ್ನು ಉಳಿಸಿ ಎಂದು ಗ್ರಹಿಸಿ ಬಸವನ ಬಾಗೇವಾಡಿ ನಗರದ ಬಸವೇಶ್ವರ ವೃತ್ತದಲ್ಲಿ ರಂಗೋಲಿ ಬಿಡಿಸಿ ಚಳುವಳಿ ನಡೆಸಿದರು ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಸ್ವಸಹಾಯ ಸಂಘದ ಮಹಿಳೆಯರು ರಂಗೋಲಿ ಮೂಲಕವೇ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಜನ ಆರೋಗ್ಯ ಚಳುವಳಿಯ ಮುಖಂಡರಾದ ಭಾರತಿ ನಿಡುಗುಂದಿ ಮಾತನಾಡಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ವಿವಿಧ ರೀತಿಯಲ್ಲಿ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು ರಂಗೋಲಿ ಚಳುವಳಿ ಕೂಡ ಹೋರಾಟದ ಒಂದು ಭಾಗ ಎಂದು ಹೇಳಿದರು ಸರಕಾರ ವೈದ್ಯಕೀಯ ಕಾಲೇಜನ್ನು ಸ್ಥಾಪನೆ ಮಾಡಲು ಖಾಸಗಿ ಅವರಿಗೆ ಒಪ್ಪಿಸಿದರೆ ಮುಂದೊಂದು ದಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯನ್ನು ಕೂಡ ಖಾಸಗಿಯವರು ಕಬಳಿಸಿಕೊಳ್ಳುವ ಹುಣ್ಣಾರ ಇದರಲ್ಲಿದೆ 150 ಎಕರೆ ಜಾಗ ಹೊಂದಿರುವ ಏಕೈಕ ಜಿಲ್ಲೆ ವಿಜಯಪುರವಾಗಿದ್ದು ಇಲ್ಲಿ ಎಲ್ಲಾ ರೀತಿಯ ಸುಸಜ್ಜಿತವಾದ ಜಾಗವಿದೆ ಈ ಜಾಗವನ್ನು ನಾವು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಮಾರಾಟ ಮಾಡಲು ಬಿಡುವುದಿಲ್ಲ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಸ್ವಸಹಾಯ ಸಂಘದ ಫಾತಿಮಾ ಹೊರ್ತಿ ಹಸೀನಾ ಹಳ್ಳಿ ಶಾಂತವ್ವ ಗುಡಿಮನಿ ರತ್ನಬಾಯಿ ಗುಡಿಮನಿ ಶೋಭಾ ಬಿರಾದಾರ ಅಲೀಮಾ ಕೋರಬು ಮುಂತಾದವರು ಚಳುವಳಿಯಲ್ಲಿ ಭಾಗವಹಿಸಿದ್ದರು