ರಾಮಲಿಂಗೇಶ್ವರ ಮಠದ ವಿವಿಧ ಕಾರ್ಯಕ್ರಮದ ಬಿತ್ತಿ ಪತ್ರ ಬಿಡುಗಡೆ

ತಾಳಿಕೋಟೆ:ಜ.೧೫: ತಾಲೂಕಿನ ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಹಾಗೂ ಸಭಾ ಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಫೇಬ್ರವರಿ ೫ ರಿಂದ ೮ರವರೆಗೆ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಕುರಿತು ಶ್ರೀಮಠದ ವತಿಯಿಂದ ಮುದ್ರಿಸಲಾಗಿರುವ ಬಿತ್ತಿ ಪತ್ರಗಳನ್ನು ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ಬಿಡುಗಡೆಗೊಳಿಸಿದರು.
ಈ ಸಮಯದಲ್ಲಿ ಮಾತನಾಡಿದ ಕೊಡೇಕಲ್ಲಶ್ರೀಗಳು ಫೇಬ್ರವರಿ ೩ ರಿಂದ ೮ರವರೆಗೆ ಶ್ರೀ ರಾಮಲಿಂಗೇಶ್ವರ ನೂತನ ಮಠದ ಉದ್ಘಾಟನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಫೇ.೩ ರಂದು ಬೃಹತ್ ರೈತ ಜನೋತ್ಸವ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಅವರು ಭಾಗವಹಿಸಲಿದ್ದಾರೆ. ದಿ. ೪ ರಂದು ಯೋಧರಿಗೆ ಮತ್ತು ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ ಹಾಗೂ ಬೆಂಗಳೂರ ಸಿಪಿಐ ಜ್ಯೋತಿರ್ಲಿಂಗ್ ಹೊನ್ನಾಕಟ್ಟಿ ಒಳಗೊಂಡು ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ದಿ.೫ ರಂದು ಮಾತೃನಮನ ಕಾರ್ಯಕ್ರಮದ ಅಂಗವಾಗಿ ೫ ಸಾವಿರ ಮುತೈದೆಯರಿಗೆ ಉಡಿ ತುಂಬುವ ಬೃಹತ್ ಕಾರ್ಯ ನಡೆಯಲಿದ್ದು ಕಲ್ಬುರ್ಗಿಯ ಶ್ರೀ ಶರಣ ಬಸವೇಶ್ವರ ಮಹಾ ಸಂಸ್ಥಾನ ಪೀಠದ ಚಿ.ಶ್ರೀ ದೊಡ್ಡಬಸಪ್ಪ ಅಪ್ಪನವರು ಹಾಗೂ ಮಾತೋಶ್ರೀ ದ್ರಾಕ್ಷಾಯಿಣಿ ಅಮ್ಮನವರ ಸಾನಿದ್ಯದಲ್ಲಿ ವಿವಿಧ ಸಾಧಕ ಮಹಿಳೆಯರು ಪಾಲ್ಗೊಳ್ಳಲಿದ್ದಾರೆಂದರು. ದಿ.೬ ರಂದು ಯುವ ಜನೋತ್ಸವ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು, ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ(ಪಡೇಕನೂರ) ಅವರು ಆಗಮಿಸಲಿದ್ದಾರೆ. ದಿ. ೭ ರಂದು ಮಧ್ಯಾಹ್ನ ೧-೩೦ ಗಂಟೆಗೆ ಜಗದ್ಗುರುಗಳ ಅಡ್ಡಫಲ್ಲಕ್ಕಿ ಮಹೋತ್ಸವ ಸಾಯಂಕಾಲ ೫-೩೦ ಗಂಟೆಗೆ ಸಧ್ಧರ್ಮ ಸಮಾರಂಭ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಆಗಮಿಸಲಿದ್ದಾರೆ, ದಿ.೮ ರಂದು ಸಿದ್ದಿಪುರುಷ ಶ್ರೀ ರಾಮಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ, ಜಂಗಮ ವಟುಗಳಿಗೆ ಅಯ್ಯಾಚಾರ, ಶ್ರೀ ರಾಮಲಿಂಗಯ್ಯ ಸ್ವಾಮಿಗಳಿಗೆ ಮಂಗಳ ಸ್ನಾನ ಹಾಗೂ ಜಗದ್ಗುರುಗಳಿಂದ ಆಶಿರ್ವಾದ ಅನುಗ್ರಹ, ನವಗ್ರಹ ಮೂರ್ತಿ ಉದ್ಘಾಟನೆ, ಮಹಾದ್ವಾರ, ನೂತನ ಶ್ರೀಮಠ ಹಾಗೂ ದಾಸೋಹ ನಿಲಯ ಉದ್ಘಾಟನೆ ಒಳಗೊಂಡು ಅನೇಕ ಕಾರ್ಯಕ್ರಮಗಳು ನಡೆಯಲಿದ್ದು ಎಲ್ಲ ಕಾರ್ಯಕ್ರಮದ ವಿವರಣೆಯೊಳಗೊಂಡ ಬಿತ್ತಿಪತ್ರವನ್ನು ಮುದ್ರಿಸಿ ಇಂದು ಬಿಡುಗಡೆಗೊಳಿಸಲಾಗಿದೆ ಎಂದು ಕಾರ್ಯಕ್ರಮದ ಮಾಹಿತಿಯನ್ನು ಹಂಚಿಕೊAಡರು.

ಈ ಸಮಯದಲ್ಲಿ ದೇವರ ಹಿಪ್ಪರಗಿ ಜಡಿಮಠದ ಶ್ರೀ ಜಡಿಸಿದ್ದೇಶ್ವರ ಮಹಾಸ್ವಾಮಿಗಳು, ನಾವದಗಿ ಮಠದ ಶ್ರೀ ರಾಜೇಂದ್ರಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು, ಪರದೇಶಿಮಠದ ಶ್ರೀ ಶಿವಯೋಗಿ ಮಹಾಸ್ವಾಮಿಗಳು, ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ಗ್ರಾಮದ ಮುಖಂಡರಾದ ಬಸನಗೌಡ ಪಾಟೀಲ, ಶ್ರೀಮತಿ ಡಾ.ಮಾಲಿನಿ ಪ್ರಭುಗೌಡ, ಸೋಮನಗೌಡ ಪಾಟೀಲ, ಶರಣಗೌಡ ಪಾಟೀಲ, ಬಸಯ್ಯ ಹಿರೇಮಠ, ಸವರಾಜ ಗೊರ್ಜಿ, ಮಂಜುನಾಥ ಕವಡಿಮಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬಿಗ್ ಬಾಸ್ ಖ್ಯಾತಿಯ ಹಣಮಂತ ಆಗಮನ
ಚಬನೂರ ಗ್ರಾಮದ ಶ್ರೀ ರಾಮಲಿಂಗೇಶ್ವರ ನೂತನ ಮಠದ ಉದ್ಘಾಟನೆ ಅಂಗವಾಗಿ ಫೇ.೭ ರಂದು ರಾತ್ರಿ ೯ ಗಂಟೆಗೆ ನಡೆಯಲಿರುವ ತತ್ವಪದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಹಣಮಂತ ಲಮಾಣೆ ಭಾಗವಹಿಸಲಿದ್ದಾರೆ, ಈ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ತತ್ವಪದಗಳ ಮೂಲಕ ಶರಣರು ಅನುಭಾವಿಕರ ನುಡಿಗಳು ಹೊರಬರಲಿದೆ ಇವರ ಜೊತೆಯಾಗಿ ಇನ್ನೂ ಕೆಲವು ಹಾಸ್ಯ ಕಲಾವಿದರು ಭಾಗಿಯಾಗಲಿದ್ದಾರೆ.