ಬಡವರ ಹಕ್ಕಿಗೆ ರಾಮ್ ಜಿ ಉದ್ಯೋಗ ಖಾತ್ರಿ ಪೆಟ್ಟು:ಮಲ್ಲಿಕಾರ್ಜುನ ಖರ್ಗೆ ಸುಳ್ಳು ಬೋಗಳೆದಾಸರ ಪಕ್ಷ ಬಿಜೆಪಿ :ಸಿದ್ದರಾಮಯ್ಯ ಆರೋಪ

ಯಡ್ರಾಮಿ:ಜ.13:ಮನರೇಗಾ’ದಿಂದ ‘ವಿಬಿ-ಜಿ ರಾಮ್ ಜಿ’ಗೆ ನಡೆಸುತ್ತಿರುವ ಪಯಣದಲ್ಲಿ ಸರ್ಕಾರವು ಬಡಜನರ ಸ್ವಾಭಿಮಾನವನ್ನು ಕಸಿದಿದೆ ಡಾ.ಮಲ್ಲಿಕಾರ್ಜುನ ಖರ್ಗೆ ರಾಜ್ಯ ಸಂಸದರು ರಾಜ್ಯ ಸಭೆ ಸದಸ್ಯರು ಕಲಬುರಗಿ ಆರೋಪ ವ್ಯಕ್ತಪಡಿಸಿದರು.

ಯಡ್ರಾಮಿ ಪಟ್ಟಣದಲ್ಲಿ ಕೆ.ಪಿ.ಎಸ್ ಶಾಲಾ ಆವರಣದಲ್ಲಿ ಸೋಮವಾರ ಪ್ರಜಾ ಸೌಧಗಳ,ಕೆ.ಪಿ.ಎಸ್ ಶಾಲೆಗಳ ಹಾಗೂ ವಿವಿಧ ಇಲಾಖೆಯ ಕಾಮಗಾರಿಗಳ ಶಂಕುಸ್ಥಾಪನೆ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು.

ಕೆಲಸ ಮಾಡಲು ತಯಾರಿರುವವರಿಗೆ ಕೆಲಸದ ಹಕ್ಕನ್ನು ಕೊಟ್ಟಿದ್ದ ಮನರೇಗಾ ಕಾರ್ಯಕ್ರಮ ಕಾಂಗ್ರೆಸ್ ಕೇಂದ್ರ ಸರ್ಕಾರ ಸೋನಿಯಾ ಗಾಂಧಿ ಪ್ರಧಾನಿ ಮನಮೋಹನಸಿಂಗ್ ಸರ್ಕಾರ ಮಾಡಲಾಗಿತ್ತು ಬಡವರ ಪರವಾದ ಅತ್ಯಂತ ಪ್ರಭಾವಶಾಲಿ ಯೋಜನೆಯೆಂದು ಜಗತ್ತಿನಲ್ಲಿ ಹೆಸರು ಮಾಡಿತ್ತು.

ಈಗಿನ ಬಿಜೆಪಿ ಕೇಂದ್ರ ಸರ್ಕಾರ ಸಂಪೂರ್ಣ ಬದಲಾವಣೆ ಮಾಡಲು ಹೊರಟಿದೆ ಹಿಂದೆ ಕೂಡಾ ರೈತರ ವಿರೋಧ ಕಾನೂನು ಮಾಡಿತ್ತು ದೇಶದಲ್ಲಿ ಕಾನೂನು ವಿರುದ್ಧ ಏಳು ನೂರು ಜನ ಹೋರಾಟ ಮಾಡಿ ಸಾವು ಸಂಭವಿಸಿದ ನಂತರ ವಾಪಸ್ ಪಡೆದು ಕೊಂಡಿದೆ.

ಈ ಕಾನೂನು ಕೂಡ ದೇಶಕ್ಕೆ ಮಾರಕವಾಗಿದೆ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಇದರ ವಿರುದ್ಧ ಹೋರಾಟ ಮಾಡಬೇಕು ಹೀಗೆ ಇದ್ದರೆ ದೇಶಕ್ಕೆ ಮಾರಕವಾಗುವುದು ತಕ್ಷಣ ಎಚ್ಚರ ಆಗಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ.ಸುಳ್ಳು ಬೋಗಳೆದಾಸರ ಪಕ್ಷ ಬಿಜೆಪಿ ಪಕ್ಷ ಸುಳ್ಳುಗಳು ಹೇಳುವದೇ ಅವರ ಕಾಲಕ ಬಿಜೆಪಿ ಪಕ್ಷವನ್ನು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಬಿಜೆಪಿ ಪಕ್ಷ ಸುಳ್ಳು ಹೇಳುತ್ತದೆ ಅದು ಅಪಾರ ಸುದ್ದ ಸುಳ್ಳು ಯಾವುದೇ ಕಾರಣಕ್ಕೂ ದಿವಾಳಿಯಾಗಿಲ್ಲ.

ಚುನಾವಣೆ ಸಮಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಐದು ಗ್ಯಾರಂಟಿಗಳು ಹೇಳಿದ್ದೆವು ಐದು ಗ್ಯಾರಂಟಿಗಳು ನೀಡಿದ್ದೇವೆ ಹಾಗೂ ಅದೇ ಸಮಯದಲ್ಲಿ 160 ಭರವಸೆಗಳು ನೀಡಿದ್ದೇವು ಅವುಗಳಲ್ಲಿ 158 ಬರವಸೆಗಳು ಮಾಡಿದ್ದೇವೆ.

ಭರವಸೆ ಇಲ್ಲದ 30 ಭರವಸೆಗಳು ಮಾಡಲಾಗಿದೆ ಒಟ್ಟು ಒಟ್ಟು 188 ಭರವಸೆಗಳು ಮಾಡಲಾಗಿದೆ 2018 ರಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವಾಗ 600.ಭರವಸೆ ನೀಡಿತ್ತು ಆದರೆ ಪ್ರತಿಶತ 10 ರಷ್ಟು ಮಾಡಿದೆ ಹಾಗಾದ್ರೆ ಯಾವ ಪಕ್ಷ ಸುಳ್ಳು ಹೇಳುವ ಪಕ್ಷ ಎಂದು ಬಿಜೆಪಿ ಪಕ್ಷದ ವಿರುದ್ಧ ಹರಿಹಾಯಿದರು.

ಜೇವರ್ಗಿ ವಿಧಾನಸಭಾ ಕ್ಷೇತ್ರ ಒಂದರಲ್ಲೇ ಇಂದು ಪ್ರಜಾ ಸೌಧ ನಿರ್ಮಾಣ ಕೆ.ಪಿ.ಎಸ್ ಶಾಲೆಗಳ ಇತರೆ ಕಾಮಗಾರಿಗಳಿಗೆ ಸುಮಾರು ?906 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

ಗ್ಯಾರಂಟಿ ಯೋಜನೆಗಳಿಗೆ ಅನುದಾನ ನೀಡುವ ಜೊತೆಗೆ ಅಭಿವೃದ್ಧಿ ಯೋಜನೆಗಳನ್ನು ಕೂಡ ಆದ್ಯತೆ ಮೇರೆಗೆ ಅನುಷ್ಠಾನ ಮಾಡಲಾಗುತ್ತಿದೆ. ಇದು ನಮ್ಮ ರಾಜಕೀಯ ಬದ್ಧತೆ.

ಬಿಜೆಪಿ ಸರ್ಕಾರ 2018=23 ವರೆಗೂ ಅಧಿಕಾರದಲ್ಲಿ ಇದ್ದಾಗ ಹೊಸ ತಾಲೂಕು 63 ಗಳಲ್ಲಿ 14 ಕಡೇ ಮಾತ್ರ ಕಟ್ಟಡ ಮಾಡಲಾಗಿದೆ ನಾವು 2024 ಅಧಿಕಾರಕ್ಕೆ ಬಂದು 49 ಪ್ರಜಾ ಸೌಧ ಶಂಕುಸ್ಥಾಪನೆ ಮಾಡಿದ್ದೇವೆ ಕಟ್ಟಡ ಮಾಡಿ ಉದ್ಘಾಟನೆ ಕೂಡ ಮಾಡುತ್ತೇವೆ.

ಈ ವರ್ಷ ಅತಿವೃಷ್ಟಿಯಿಂದ ಬೇಳೆ ಹಾಳಾಗಿ ರೈತರು ಸಂಕಟ ಪರಸ್ಥಿತಿಯಲ್ಲಿ ನಾವು ಬಂದು ಪರಿಶೀಲನೆ ಮಾಡಿ ಎಸ್.ಟಿ.ಆರ್.ಟಿಯಿಂದ ಸುಮಾರು 12000 ಕೋಟಿ ರೈತರಿಗೆ ನೀಡುವ ಜೋತೆಗೆ ಕರ್ನಾಟಕ ಸರ್ಕಾರ ವತಿಯಿಂದ 115 ಕೋಟಿ ಹಣ ಬೀಡುಗಡೆ ಮಾಡಲಾಗಿದೆ.

ತಮಗೆ ಸುಳ್ಳು ಹೇಳುವ ಸರ್ಕಾರ ಬೇಕೂ ಅಥವಾ ಸತ್ಯ ಹೇಳುವ ಸರ್ಕಾರ ಬೇಕು ಸತ್ಯ ಹೇಳುವ ಹಾಗೂ ನುಡಿದಂತೆ ನಡೆಯುವ ಸರ್ಕಾರ ಬೇಕು ಅಂದ್ರೆ ನಮ್ಮ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಕೇಳಿಕೊಂಡರು.

ಪ್ರಾಸ್ಥಾವೀಕವಾಗಿ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯಸಿಂಗ ಧರ್ಮಸಿಂಗ್ ಮಾಡನಾಡಿ ಕಂಧಾಯ ಇಲಾಖೆ ಹಾಗೂ ಕೆ.ಕೆ.ಆರ್.ಡಿ.ಬಿ ವತಿಯಿಂದ 163.ಕೋಟಿ ವೆಚ್ಚದಲ್ಲಿ 16 ಪ್ರಜಾಸೌದ ನಿರ್ಮಾಣ ಮಾಡಲು ಯಡ್ರಾಮಿಯಲ್ಲಿ ಪ್ರಭಾವತಿ ಧರ್ಮಸಿಂಗ್ ಅವರು ಐದು ಎಕರೆ ಜಮೀನು ಸರ್ಕಾರಕ್ಕೆ ನೀಡಲಾಗಿದೆ.

ಶಿಕ್ಷಣ ಇಲಾಖೆ ಹಾಗೂ ಕೆ.ಕೆ.ಆರ್.ಡಿ.ಬಿ ವತಿಯಿಂದ 600 ಕೋಟಿ ವೆಚ್ಚದಲ್ಲಿ 350 ಹೊಸ ಕೆ.ಪಿ.ಎಸ್.ಶಾಲೆಗಳು ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಕಾರ್ಯಕ್ರಮ ಮಾಡಲಾಗಿದೆ.

ಜೇವರ್ಗಿ ಮತ್ತು ಯಡ್ರಾಮಿ ಕ್ಷೇತ್ರದ ಪ್ರಮುಖ ಮಲ್ಲಾಬಾದ ಏತ ನೀರಾವರಿ ಯೋಜನೆ ಹಾಗೂ ಕ್ಷತ್ರದ ನೀರಾವರಿ ಯೋಜನೆಗೆ 360 ಕೋಟಿ ಉಪಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ಅನುಮೋದನೆ ನೀಡಿದ್ದಾರೆ.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರು 3.35 ಕೋಟಿ ನೀಡಿದ್ದಾರೆ ಹಾಗೂ ಕೆ.ಕೆ.ಆರ್.ಡಿ.ಬಿ ವತಿಯಿಂದ ಅನುದಾನದಲ್ಲಿ ಅಕ್ಷರ ಆವಿಸ್ಕಾರ ಯೋಜನೆ ಅಡಿಯಲ್ಲಿ 25% ಪ್ರತಿಶತ ಮೀಸಲು ಇಡಲಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಭಾಗವಹಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ, ಸಚಿವರಾದ ಕೃಷ್ಣ ಭೈರೇಗೌಡ,ಮಧು ಬಂಗಾರಪ್ಪ, ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ, ಶರಣಬಸಪ್ಪ ದರ್ಶನಾಪುರ, ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್,ಶಾಸಕರಾದ ಎಂ.ವೈ ಪಾಟೀಲ, ಅಲ್ಲಮಪ್ರಭು ಪಾಟೀಲ,ಕನೀಜ್ ಫಾತಿಮಾ ಹಾಗೂ ಜನಪ್ರತಿನಿಧಿಗಳು,ಅಧಿಕಾರಿಗಳು.

ಕೇವಲ ಶಾಲೆಗಳು ಕಟ್ಟುವುದು ಅಲ್ಲದೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯಾಗಬೇಕು ಅಂದ್ರೆ ಶಿಕ್ಷಕರ ನೇಮಕಾತಿ ಮಾಡಿಕೊಂಡು ಅದರ ಜೋತೆಗೆ ದಕ್ಷಿಣ ಭಾಗದಕ್ಕೆ ಅಭಿವೃದ್ಧಿಗೆ ಹೇಗೆ ಒತ್ತು ನೀಡಲಾಗುವುದು ಅದರ 75% ಪ್ರತಿಶತ ಈ ಬಾಗಕ್ಕೆ ನೀಡಿದಾಗ ಮಾತ್ರ ಈ ಭಾಗ ಅಭಿವೃದ್ಧಿ ಹೊಂದಲು ಸಾಧ್ಯ.

-ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.

ನಾನು ಕಲ್ಯಾಣ ಕರ್ನಾಟಕದಲ್ಲಿ ಹುಟ್ಟಬೇಕು ಆಗಿತ್ತು ಹುಟ್ಟಿದರೆ ನಾನು ಹೆಚ್ಚಿನ ಅನುದಾನ ಬಂದು ನಮ್ಮ ಭಾಗದ ಜನರಿಗೆ ಉತ್ತಮ ಕಾರ್ಯವಾಗುತ್ತು.

=ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ.