Home ಜಿಲ್ಲೆ ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಆಚರಣೆ

ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಆಚರಣೆ

ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಆಚರಣೆ /ಬೀದರ್/ಕರ್ನಾಟಕ

ಬೀದರ್: ಪ್ರೀತಿ, ವಾತ್ಸಲ್ಯ, ವಿಶ್ವಾಸ ಹಾಗೂ ಸಹೋದರತ್ವದ ಸಂಕೇತವಾದ ರಕ್ಷಾ ಬಂಧನದ ಪವಿತ್ರ ಹಬ್ಬವನ್ನು ಬೀದರ್ ದಕ್ಷಿಣ ಕ್ಷೇತ್ರದ ಮಹಿಳಾ ಮೋರ್ಚಾ ಪದಾಧಿಕಾರಿಗಳು ಆತ್ಮೀಯವಾಗಿ ಆಚರಿಸಿದರು.
ರಕ್ಷಾ ಬಂಧನದ ಅಂಗವಾಗಿ ಬೀದರ್ ದಕ್ಷಿಣ ಕ್ಷೇತ್ರದ ಮಹಿಳಾ ಮೋರ್ಚಾ ಪದಾಧಿಕಾರಿ ಸಹೋದರಿಯರು ಬೀದರ್ ನಗರದ ಪ್ರತಾಪ ನಗರದಲ್ಲಿರುವ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಕಚೇರಿಯಲ್ಲಿ ಶಾಸಕರಿಗೆ ರಾಖಿ ಕಟ್ಟಿ, ಸಿಹಿ ತಿನಿಸಿ, ಪ್ರೀತಿ-ವಾತ್ಸಲ್ಯದಿಂದ ಶುಭ ಹಾರೈಸಿದರು. ಶಾಸಕರಿಗೆ ರಾಖಿ ಕಟ್ಟುವ ಮೂಲಕ ಸಹೋದರತ್ವದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು.
ಈ ವೇಳೆ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ರಕ್ಷಾ ಬಂಧನವು ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಹತ್ವ ಹೊಂದಿರುವ ಹಬ್ಬವಾಗಿದೆ. ರಾಖಿ ಎಂಬ ಪವಿತ್ರ ದಾರಿಯು ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ, ಕಾಳಜಿ ಮತ್ತು ರಕ್ಷಣೆಯ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಮಹಿಳಾ ಮೋರ್ಚಾ ಸಹೋದರಿಯರು ತೋರಿದ ಈ ಆತ್ಮೀಯತೆ ಹಾಗೂ ಪ್ರೀತಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಮಹಿಳೆಯರು ಕುಟುಂಬದ ಜೊತೆಗೆ ಸಮಾಜದ ಅಭಿವೃದ್ಧಿಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಹಿಳಾ ಸಬಲೀಕರಣ, ಸುರಕ್ಷತೆ ಹಾಗೂ ಗೌರವಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಉತ್ತೇಜಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ರಕ್ಷಾ ಬಂಧನದ ಈ ಆತ್ಮೀಯ ಸಂದರ್ಭದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರದ ಬಾಂಧವ್ಯ ಇನ್ನಷ್ಟು ಬಲವಾಗಲಿ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸೇವೆಯ ಕಾರ್ಯಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿಯುವAತಾಗಲಿ ಎಂದು ಹಾರೈಸಿದರು.
ಮಹಿಳಾ ಮೋರ್ಚಾ ಪದಾಧಿಕಾರಿಗಳು ಮಾತನಾಡಿ, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರೊಂದಿಗೆ ಸಹೋದರತ್ವದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ರಕ್ಷಾ ಬಂಧನ ಆಚರಿಸಲಾಗಿದೆ. ಜನಸೇವೆಯ ಕಾರ್ಯಗಳಿಗೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಹೇಮಾ ತುಕ್ಕಾರೆಡ್ಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂತೋಷಿ ನಿಡವಂಚಾ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಗುಂಡಮ್ಮ ಬುಧೇರಾ, ಪ್ರಧಾನ ಕಾರ್ಯದರ್ಶಿ ಸುಜಾತಾ ಮಂದಾ, ನಾಗಮ್ಮ ಮಲ್ಕಾಪುರ, ಕುಮಿತಾ ದೇವಗಿರಿ ತಾಂಡಾ, ಸುನೀತಾ ಶಾಪುರ, ಶಿಲ್ಪಾ ನಿಡವಂಚಾ, ಸಂಗೀತಾ ನಿಡವಂಚಾ, ಗೌರಮ್ಮ ಚಾಂಗಲೇರಾ, ಶ್ರಿದೇವಿ ಚಾಂಗಲೇರಾ, ಲಲೀತಾ ಬಗದಲ್ ತಾಂಡಾ, ಸುಮಂಗಲ ಚಟನಳ್ಳಿ ಮತ್ತಿತರರು ಉಪಸ್ಥಿತರಿದ್ದರು.