
ಕಾಳಗಿ:ಡಿ.24:ದೇಶದ ಕಟ್ಟಕಡೆಯ ವ್ಯಕ್ತಿಗಳಿಗೂ ಸಹ ಸಮಾಜಿಕ ನ್ಯಾಯ ನೀಡಬೇಕಾಗಿರುವ ಎಕೈಕ ಸ್ಥಾನ ಗ್ರಾಪಂ.ಗಳು ಪಡೆದುಕೊಂಡಿವೆ.
ಇಂತಹ ಪವಿತ್ರ ಸ್ಥಳಗಳೇ ಲಂಚದ ಮಿಂಚಿನ ಮೇಲೆ ಉರುಳುತ್ತಿದ್ದರೆ ಜನಸಾಮಾನ್ಯರ ಪಾಡೇನು ಎಂಬುವುದಕ್ಕೆ ಕಾಳಗಿ ತಾಲೂಕಿನ ರಾಜಾಪೂರ ಗ್ರಾಪಂ.ಸಾಕ್ಷಿಯಾಗಿದೆ.
ಸ್ಥಳಿಯ ನ್ಯಾಯಾಲಯದಂತೆ ಕೆಲಸ ಮಾಡಬೇಕಾಗಿರುವ ಗ್ರಾಪಂ.ಗಳಲ್ಲಿ ಮುಗ್ದಜನರಿಗಾಗುತ್ತಿರುವ ಅನ್ಯಾಯ ನೋಡಿದರೆ ಗಾಂಧಿಜೀ ಅವರು, ಕಂಡ ಗ್ರಾಮ ಸ್ವರಾಜ್ಯದ ಗತಿಯೇನು? ಎಂಬುವುದು ಜನಸಾಮಾನ್ಯರು ಆಡಿಕೊಳ್ಳುವಂತಾಗಿದೆ.
ರಾಜಾಪೂರ ಗ್ರಾಪಂ.ಅಧ್ಯಕ್ಷ ಪ್ರಕಾಶರೆಡ್ಡಿ ಮಲ್ಲಾರೆಡ್ಡಿ ಅವರು, ಮಳಗಾ(ಕೆ) ಗ್ರಾಮದ ಚಾಂದ್ ಸುಲ್ತಾನಾ ರೋಷನ್ ಅವರ ಖುಲ್ಲಾ ಜಾಗವನ್ನು ಗ್ರಾಪಂ.ಡಿಸಿಬಿಯಲ್ಲಿ ಸೇರಿಸುವ ಸಂಬಂಧ ರೂ.5,000/-. ಬೇಡಿಕೆ ಇಟ್ಟಿದ್ದರು.
ಚಾಂದ್ ಸುಲ್ತಾನ ಅವರು, ಖರಿದಿಸಿರುವ ಖುಲ್ಲಾ ಜಾಗವನ್ನು ಗ್ರಾಪಂ.ಡಿಸಿಬಿ ವಹಿಯಲ್ಲಿ ನಮೂದಿಸುವ ಕೆಲಸ ಮಾಡಿಸಿ ಕೊಡುವ ಆರೋಪದ ಮೇಲೆ ರೂ.5,000/-.ಲಂಚದ ಹಣವನ್ನು ಸ್ವೀಕರಿಸುವಾಗ ಟ್ರಾಪ್ ಆಗಿರುವ ಆರೋಪ ಸಾಬಿತಾಗಿರುವುದರಿಂದ ಸದಸ್ಯತ್ವವನ್ನು ರದ್ದು ಪಡಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಗ್ರಾಮ ಪಂಚಾಯತ್ ರಾಜ್ ಅಧಿನೀಯಮ-1993ರ ಪ್ರಕರಣ-43(ಎ) ಮತ್ತು 48(4)ರನ್ವಯ ಗ್ರಾಮ ಪಂಚಾಯತಿ ಸದಸ್ಯತ್ವದಿಂದ ತೆಗೆದುಹಾಕಿ ಮತ್ತು ಪ್ರಕರಣ-43(ಎ)(2)ರನ್ವಯ ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಸರ್ಕಾರ ಆದೇಶಿಸಿದೆ. ಎಂದು ತಿಳಿದು ಬಂದಿದೆ.























