Home ಜಿಲ್ಲೆ ಕಲಬುರಗಿ ರೈತರ ಸುರಕ್ಷತೆಗೆ ರೈತ ಸಂಜೀವಿನಿ ಆಸರೆ: ಪ್ರತಿಯೊಬ್ಬ ರೈತನೂ ಲಾಭ ಪಡೆಯಲು: ಜಿಕೆ ವೆಂಕಟೇಶ್ ಕರೆ

ರೈತರ ಸುರಕ್ಷತೆಗೆ ರೈತ ಸಂಜೀವಿನಿ ಆಸರೆ: ಪ್ರತಿಯೊಬ್ಬ ರೈತನೂ ಲಾಭ ಪಡೆಯಲು: ಜಿಕೆ ವೆಂಕಟೇಶ್ ಕರೆ

ಸೇಡಂ,ಸೆ,24:ರೈತರು ಹಗಲು ರಾತ್ರಿ ಎನ್ನದೆ ಹೊಲ ಗದ್ದೆಗಳಲ್ಲಿ ಹಾಗೂ ತೋಟಗಳಲ್ಲಿ ಶ್ರಮಿಸುತ್ತಾರೆ. ಅವರು ಯಂತ್ರೋಪಕರಣಗಳ ಬಳಕೆ, ವಿದ್ಯುತ್ ಆಘಾತ ಹಾವು ಕಡಿತ, ಕೃಷಿ ಸಂಬಂಧಿತ ಇತರೆ ಕೆಲಸಗಳ ವೇಳೆ ಆಕಸ್ಮಿಕ ಅಪಘಾತಗಳು ಸಂಭವಿಸುವ ಅಪಾಯ ಹೆಚ್ಚಾಗಿರುತ್ತದೆ. ಇಂತಹ ದುರದೃಷ್ಟಕರ ಸಂದರ್ಭಗಳಲ್ಲಿ ರೈತರ ಕುಟುಂಬಕ್ಕೆ ಆರ್ಥಿಕ ಭದ್ರತೆಗಾಗಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆ ರೂಪಿಸಿಲಾಗಿದ್ದು ಈ ಯೋಜನೆಯಡಿ ಪ್ರತಿಯೊಬ್ಬ ರೈತನೂ ಲಾಭ ಪಡೆಯಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಕಲಬುರ್ಗಿ ವಿಭಾಗೀಯ ಕಾರ್ಯಾಲಯದ ಪ್ರಧಾನ ವ್ಯವಸ್ಥಾಪಕರಾದ ಜಿಕೆ ವೆಂಕಟೇಶ್ ಹೇಳಿದರು. ನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಂಭಾಗಣದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಪಶುಸಂಗೋಪನೆ ಇಲಾಖೆ ಮತ್ತು ಎಪಿಎಂಸಿಯಲ್ಲಿ ಮಾಡುವ ಶ್ರಮಿಕರಿಗೆ ಸೌಲಭ್ಯಗಳ ದೊರೆಯುವಂತಹ ಮಾಹಿತಿಯನ್ನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವಿಭಾಗೀಯ ಕಾರ್ಯಾಲಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ರೈತರ ಜೀವ ಹಾಗೂ ಆರೋಗ್ಯದ ಸುರಕ್ಷತೆಗೆ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆ ಅತ್ಯಂತ ಸೂಕ್ತ ಹಾಗೂ ಅಗತ್ಯ ಆಸರೆಯಾಗಿದ್ದು, ರಾಜ್ಯದ ಪ್ರತಿಯೊಬ್ಬ ಅರ್ಹ ರೈತನೂ ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು ಎಂದರು. ರಾಜ್ಯದಲ್ಲಿರುವ 15ರಿಂದ 60 ವರ್ಷದೊಳಗಿನ ವಯಮಿತಿಯಲ್ಲಿರುವ ರೈತರು ಮತ್ತು ಆ ಕುಟುಂಬದ ಸದಸ್ಯರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ ಎಂದರು. ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ.ಇಮ್ರಾನ್ ಮನಿಯಾರ ಮಾತನಾಡಿ ಪಶು ಆಸ್ಪತ್ರೆಯಲ್ಲಿ ಧನ ಕರುಗಳಿಗೆ ಕುರಿ ಕೋಳಿಗಳಿಗೆ ದೊರೆಯುವಂತ ಹಲವು ರೀತಿಯ ಸೌಲಭ್ಯಗಳನ್ನು ರೈತರು ಎಚ್ಚೆತ್ತುಕೊಂಡು ಲಾಭ ಪಡೆಯುತ್ತಿದ್ದಾರೆ, ಜೊತೆಗೆ ರೈತರಿಗೆ ದೊರೆಯುವಂತಹ ಹಲವು ರೀತಿಯ ಸರ್ಕಾರದ ಯೋಜನೆಗಳು ರೈತರಿಗೆ ತಲುಪಿಸುವ ವ್ಯವಸ್ಥೆ ತಾಲೂಕ ಆಸ್ಪತ್ರೆಯಿಂದ ಮಾಡಲಾಗುತ್ತದೆ ಎಂದರು. ಈ ವೇಳೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ರಾಜಕುಮಾರ ಕೌಡಲ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಶಾಲಕುಮಾರ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ.ಇಮ್ರಾನ್ ಮನಿಯಾರ್, ಕೃಷಿಕ ಸಮಾಜದ ತಾಲೂಕ ಅಧ್ಯಕ್ಷ ಬಸವರಾಜ ರೆವಗೋಂಡ, ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಕಾರ್ಯದರ್ಶಿ ಶಿವಕುಮಾರ್ ಬೋಳಶೆಟ್ಟಿ, ರವಿ ಸಾಹುಕಾರ ಸೂರವಾರ, ಮಹೇಶ್ ಪೂಜಾರಿ, ಸುರೇಶ್ ಬಿಜನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಎಪಿಎಂಸಿಯಲ್ಲಿ ಮಾಡುವಂತಹ ಶ್ರಮಿಕರಿಗೆ ಹಲವು ರೀತಿಯ ಸರ್ಕಾರದ ಸೌಲಭ್ಯಗಳು ಒದಗಿಸುತ್ತಿದೆ ಅದರ ಲಾಭ ಶ್ರಮಕರು ಪಡೆಯಬೇಕು.
ಜಿಕೆ ವೆಂಕಟೇಶ್
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಕಲಬುರ್ಗಿ ವಿಭಾಗೀಯ ಕಾರ್ಯಾಲಯದ ಪ್ರಧಾನ ವ್ಯವಸ್ಥಾಪಕರು