ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ

ಕಲಬುರಗಿ,ನ.27-ನಗರದ ಡಂಕಾ ಕ್ರಾಸ್‍ದಿಂದ ಗಣೇಶ್ ಮಂದಿರಕ್ಕೆ ಹೋಗುವ ರಸ್ತೆಯಲ್ಲಿ ಗೃಹ ಬಳಕೆಗೆ ಗ್ಯಾಸ್ ಸಿಲಿಂಡರ್‍ಗಳನ್ನು ಅಕ್ರಮವಾಗಿ ಸಂಗ್ರಹ ಮಾಡಿ ಆಟೋರಿಕ್ಷಾಗಳಿಗೆ ತುಂಬಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಹಾರ ನಿರೀಕ್ಷಕ ಯಲ್ಲಾಲಿಂಗ ಕಡಕೋಳಕರ್ ಅವರು ಸಿಸಿಬಿ ಘಟಕದ ಪಿಐ ಅರುಣಕುಮಾರ, ಸಿಬ್ಬಂದಿಗಳಾದ ಮೃತ್ಯುಂಜಯ, ಅಶೋಕ ಕಟಕೆ, ಯಲ್ಲಪ್ಪ, ಶಿವಕುಮಾರ, ನಾಗರಾಜ ಮತ್ತು ಸುನೀಲಕುಮಾರ ಅವರೊಂದಿಗೆ ದಾಳಿ ನಡೆಸಿದ್ದಾರೆ.
ಆಳಂದ ಕಾಲೋನಿಯ ಪರಶುರಾಮ ಕೋಟನೂರ (23) ಎಂಬಾತನನ್ನು ಬಂಧಿಸಿ ಗ್ಯಾಸ್ ಸಿಲಿಂಡರ್, ತೂಕದ ಯಂತ್ರ, ಹೆಚ್.ಪಿ.ಮೋಟಾರ್ ಸೇರಿ 7,500 ರೂ.ಮೌಲ್ಯದ ವಸ್ತುಗಳು ಮತ್ತು 450 ರೂ.ನಗದು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಪರಶುರಾಮ ಕೋಟನೂರ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.