Home ಜಿಲ್ಲೆ ಕಲಬುರಗಿ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ

ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ

ಚಿತ್ತಾಪುರ; ಪಟ್ಟಣದ ಬ್ರಾಹ್ಮಣ ಗಲ್ಲಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಉತ್ತರಾದಿಮಠದಿಂದ ಸಂಭ್ರಮದಿಂದ ಆಚರಿಸಲಾಯಿತು.
ಇದೇ ವೆಳೆ ಬೆಳೆಗ್ಗೆ ಅಷ್ಟೋತ್ತರ ಪಾರಾಯಣ ಪಂಡಿತ್ ತಿರುಪತಿ ಆಚಾರರಿಂದ ರಾಯರ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ ಮಾಡಿದರು.
ನಂತರ ಬೃಂದಾವನಕ್ಕೆ ಫಲ ಪುಷ್ಪಗಳಿಂದ ಅರ್ಚಕರಾದ ಉತ್ತಮ ಪುರೋಹಿತ ಭರತ ಕುಮಾರ ಹಾಗೂ ಪವನ ಕುಮಾರ ಅವರಿಂದ ಅಲಂಕಾರ ಮಾಡಲಾಯಿತು.
ಪಂ ವೆಂಕಣ್ಣಾಚಾರ್ಯರಿಂದ ಪ್ರವಚನ ಹೇಳಲಾಯಿತು. ನಂತರ ಚಿತ್ತಾಪುರದ ಸಮಸ್ತ ವಿಪ್ರರು ಮತ್ತು ಮಹಿಳೆಯರಿಂದ ರಥೋತ್ಸವ ಹಾಗೂ ಗಜವಾಹನೋತ್ಸವ ಮಾಡಲಾಯಿತು.
ಸಾಯಂಕಾಲ ದಾಸವಾಣಿ ಕಾರ್ಯಕ್ರಮ ಜರಗಿತು. ನಂತರ ಪಲ್ಲಕ್ಕಿ ಸೇವೆ ತೊಟ್ಟಿಲ ಸೇವೆಯಿಂದ ಕಾರ್ಯಕ್ರಮವನ್ನು ಸಂಪನ್ನಗೊಂಡಿತು.
ಸುಧಾಕರ ಕುಲಕರ್ಣಿ, ಸಂಜೀವ ಕೊಡದುರ, ವೆಂಕಟೇಶ ಕುಲಕರ್ಣಿ, ಪವನ ಕುಲಕರ್ಣಿ, ಅನಂತ್ ಹೇಡಿಗಿಮುದ್ರ ಅವರು ಅನ್ನ ಸಂತರ್ಪಣೆ ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರವಿಕುಲಕರ್ಣಿ, ವಿಶ್ವನಾಥ ಅಫಜಲಪುರಕರ, ರಾಮಾಚಾರಿ ಧನರಾಜ, ರಾಜೇಶ್ ದೇಶಪಾಂಡೆ, ಅಂಬರೀಷ್ ಕುಲಕರ್ಣಿ, ನಾಗರಾಜ್ ಅಲ್ಲೂರು, ರಾಜುಕೊಡದೂರು, ಜಯಂತ್ ಮಾಲಗತಿ, ಗಿರೀಶ್ ಜಾನಿಬು ಸೇರಿದಂತೆ ಇತರರು ಇದ್ದರು.
ಮಹಿಳಾ ಭಜನಾ ಮಂಡಳಿ ಉಪಸ್ಥಿತರಿದ್ದರು.