ವಿಜ್ಞಾನ ಕ್ಷೇತ್ರದ ಮೂಲಕ ಭಾರತದ ಕೀರ್ತಿ ಹೆಚ್ಚಿಸಿದ ಖುರಾನ್

ಕಲಬುರಗಿ :ಜ.9: ಹರಗೋಬಿಂದ್ ಖುರಾನ್ ಅವರು ಭಾರತೀಯ ಅಮೇರಿಕನ್ ಜೀವರಸಾಯನ ಶಾಸ್ತ್ರಜ್ಞರಾಗಿದ್ದರು, ಜೀವಕೋಶದ ಆನುವಂಶಿಕ ಸಂಕೇತವನ್ನು ಸಾಗಿಸುವ ನ್ಯೂಕ್ಲಿಯಿಕ್ ಆಮ್ಲಗಳಲ್ಲಿನ ನ್ಯೂಕ್ಲಿಯೊಟೈಡ್ ಗಳ ಕ್ರಮವು ಪೆÇ್ರೀಟೀನ್ ಗಳ ಕೋಶದ ಸಂಶ್ಲೇಷಣೆಯನ್ನು ನಿಯಂತ್ರಿಸುತ್ತದೆ ಎಂಬ ತಮ್ಮ ಸಂಶೋಧನೆಗೆ 1968ರಲ್ಲಿ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಪಡೆಯುವ ಮೂಲಕ ನಮ್ಮ ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಮಲ್ಲಿನಾಥ ಮಹಾರಾಜ ಪ್ರಾಥಮಿಕ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ಹರಗೋಬಿಂದ್ ಖುರಾನ್ ಅವರ ಜನ್ಮದಿನಾಚರಣೆ” ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿ ದಿಸೆಯಿಂದಲೇ ವಿಜ್ಞಾನದ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್. ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲುರೆ, ಶಿಕ್ಷಕಿಯರಾದ ಮಂಜುಳಾ ನರೋಣಾ, ಶ್ರೀದೇವಿ, ಸೇವಕಿ ಸಿದ್ದಮ್ಮ ಹಾಗೂ ವಿದ್ಯಾರ್ಥಿಗಳು ಇದ್ದರು.