ರಸಪ್ರಶ್ನೆಗಳಿಂದ ಆತ್ಮವಿಶ್ವಾಸ ವೃದ್ಧಿ:ಬಸವರಾಜ ಜಾಲವಾದಿ

ಕೊಲ್ಹಾರ:ಫೆ.3: ದಡ ಸೇರಿದರೆ ಸಾಕೆಂಬುದು ನೀರಿಗೆ ಬಿದ್ದವನ ಹಂಬಲ ಪರೀಕ್ಷೆ ಪಾಸಾದರೆ ಸಾಕು ಎಂಬುದು ವಿದ್ಯಾರ್ಥಿಗಳ ಹಂಬಲ! ನೆನಪಿರಲಿ ನಮ್ಮ ಕರ್ತವ್ಯ ಕರ್ಮದ ಯಶಸ್ಸಿಗೆ ಕಾರಣವಾಗಬೇಕು ರಸಪ್ರಶ್ನೆ ಕಾರ್ಯಕ್ರಮಗಳಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಪೆÇ್ರ; ಬಸವರಾಜ ಜಾಲವಾದಿ ಹೇಳಿದರು.

ತಾಲೂಕಿನ ಕೂಡಗಿಯ ಸರಕಾರಿ ಪದವಿ ಪೂರ್ವ ಕಾಲೇಜು ನಲ್ಲಿ ಏರ್ಪಡಿಸಿದ ಪರೀಕ್ಷಾ ಭಯದಿಂದ ಮುಕ್ತಿ ಹೊಂದಿ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ ಉಪದೇಶಿಸುತ್ತಿದ್ದರು.
ಪರೀಕ್ಷಾ ಭಯದಿಂದ ಮುಕ್ತರಾಗಲು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಅವರು ರಸಪ್ರಶ್ನೆಗಳು ಪರೀಕ್ಷೆಯಯ ಆಚೆಗಿರುವ ಆನಂದ ಎಂಬ ದಡದ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ ನೀರಿಗೆ ಬಿದ್ದರೂ ಹೇಗಾದರೂ ಕೈಕಾಲು ಬಡಿದುಕೊಂಡು ಅಥವಾ ದೋಣಿಯೇರಿಕೊಂಡು ದಡ ಸೇರದ ವ್ಯಕ್ತಿ ಪ್ರಯತ್ನ ಮಾಡದೇ ಹೋದರೆ ಇಲ್ಲವಾಗುತ್ತಾನೆ..! ಇಲ್ಲವೆ ಮುಳುಗಿ ಕೊಳೆತು ಹೋಗುತ್ತಾನೆ. ಅದೇ ರೀತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಅಥವಾ ಫೇಲಾದ ವ್ಯಕ್ತಿಯು ಸಮಾಜದಲ್ಲಿ ಇದ್ದೂ ಇಲ್ಲದಂತಾಗುತ್ತಾನೆ ಎಂಬುದನ್ನು ನೆನಪಿಡಬೇಕು. ಪರೀಕ್ಷೆ ಎಂಬ ಭಯ ಆತಂಕ ಇರಲೇಬೇಕು ಆದರೆ ಈ ಭಯ ಮತ್ತು ಆತಂಕಗಳಿಂದ ಛಲ, ಪ್ರಯತ್ನ, ಎದೆಗಾರಿಕೆ ಇಷ್ಟು ದಿನಗಳವರೆಗೆ ಗಳಿಸಿದ ಕೌಶಲ್ಯಗಳನ್ನು ಬಳಸಿಕೊಂಡು ಮುಂದೆ ಬರುವಂತೆ ಆಗಬೇಕು ಎಂದರು.

ತಲಾ ಹದಿನೈದು ವಿದ್ಯಾರ್ಥಿಗಳ ನಾಲ್ಕು ಗುಂಪುಗಳನ್ನಾಗಿ ವಿಂಗಸಿಡಿಕೊಂಡು ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಬೀಳಿಸಿದ್ದರು ಅತ್ಯಂತ ತುರುಸಿನಿಂದ ನಡೆದ ಸ್ಪರ್ಧೆಯಲ್ಲಿ ಲಕ್ಷ್ಮಿ ಹಂಗರಗಿ ರೇಖಾ ಜಲದಿ ಲಕ್ಷ್ಮಿ ನಾಯಕ್ ಪ್ರೇರಣಾ ಹಿರೇಮಠ, ಶೃತಿ ಹಂಗರಗಿ, ಇವರ ತಂಡ ಪ್ರಥಮ ಬಹುಮಾನ ಗೆದ್ದು ಬೀಗಿತು. ನಂತರದ ತಂಡಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನವನ್ನು ಪಡೆದರು ಸ್ಪರ್ಧೆ ಮಾತ್ರ ಅತ್ಯಂತ ತುರುಸಿನಿಂದ ಕೂಡಿದ್ದು ಕಂಡು ಬಂತು ನಾಳೆ ನಾವು ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನೊಂದಿಗೆ ವಿದ್ಯಾರ್ಥಿಗಳು ಮತ್ತೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸುವಂತೆ ವಿನಂತಿ ಮಾಡಿಕೊಂಡದ್ದು ಇಂತಹ ಕಾರ್ಯಕ್ರಮಗಳಿಂದ ಆಗುವ ಪ್ರಯೋಜನವನ್ನು ಎತ್ತಿ ತೋರಿಸುವಂತಿತ್ತು.