
ಲಕ್ಷ್ಮೇಶ್ವರ,ಫೆ 3: ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಎಸ್ ಜೆ ಎಂ ವಿ ಜಿ ಪದವಿ ಪೂರ್ವ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ದಲ್ಲಿ ಅರ್ಥಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಾಗಾರ ಜರುಗಿತು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಅರ್ಥಶಾಸ್ತ್ರ ಉಪನ್ಯಾಸಕ ಎ ಎನ್ ನಾವಿ ಎಂಎಫ್ ನದಾಫ್ ಶರಣಪ್ಪ ಕಲ್ಗುಡಿ ಗೌರಮ್ಮ ತಳವಾರ್ ವಿದ್ಯಾರ್ಥಿನಿಯರಿಗೆ ಪ್ರಶ್ನೆ ಪತ್ರಿಕೆ ಹೇಗೆ ಬಿಡಿಸಬೇಕು ಎಂಬುದನ್ನು ತಿಳಿಸಿ ಇದರಿಂದ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಭಯ ವನ್ನು ಹೋಗಲಾಡಿಸಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಕಾರ್ಯಗಾರ ಜರುಗಿತು.
ಪ್ರಾಚಾರ್ಯ ಸರಸ್ವತಿ ಹುಲ್ಲಣ್ಣನವರ್ ಅಧ್ಯಕ್ಷತೆ ವಹಿಸಿ ಈ ಕಾರ್ಯಗಾರ ವಿದ್ಯಾರ್ಥಿನಿಯರ ಪರೀಕ್ಷಾ ಭಯವನ್ನು ಹೋಗಲಾಡಿಸಿ ಅವರಲ್ಲಿ ಹೆಚ್ಚಿನ ಆಸಕ್ತಿ ಉಂಟುಮಾಡಿತಲ್ಲದೆ ಇದು ವಿದ್ಯಾರ್ಥಿಗಳಿಗೆ ಪ್ರಯೋಜನವಾಯಿತು ಎಂದು ಹೇಳಿದರು.
ಅರ್ಥಶಾಸ್ತ್ರ ಉಪನ್ಯಾಸಕ ನಾಗಪ್ಪ ಬಸಾಪುರ್ ಆಯೋಜಿಸಿದ್ದರು ಕಾರ್ಯಾಗಾರದ ನಂತರ ಉಪನ್ಯಾಸಕರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.




























