Home ಜಿಲ್ಲೆ ಕಲಿಕಾ ಹಬ್ಬದಿಂದ ಗುಣಮಟ್ಟದ ಶಿಕ್ಷಣ ಹೆಚ್ಚಳ : ಪಿಎಸ್‍ಐ ಆಶಾ

ಕಲಿಕಾ ಹಬ್ಬದಿಂದ ಗುಣಮಟ್ಟದ ಶಿಕ್ಷಣ ಹೆಚ್ಚಳ : ಪಿಎಸ್‍ಐ ಆಶಾ

ಕಮಲನಗರ:ಫೆ.13: ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಳವಾಗಲಿದೆ ಎಂದು ಕಮಲನಗರದ ಪಿಎಸ್‍ಐ ಆಶಾ ರಾಠೋಡ್ ಹೇಳಿದರು.

ಗುರುವಾರ ತಾಲ್ಲೂಕಿನ ಚ್ಯಾಂಡೇಶ್ವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸಮೂಹ ಮಟ್ಟದ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಲ್ಲಿ ಅಡಗಿರುವ ಜ್ಞಾನವನ್ನು ಇಂತಹ ವೇದಿಕೆ ಮೂಲಕ ಹ್ರೆರತಂದು ಅವರ ಕಲಿಕಾ ಸಾಮಥ್ರ್ಯ ಹೆಚ್ಚಿಸಲು ಅನುಕೂಲವಾಗಲಿದೆ ಎಂದರು.

ಗೋಲ್ಡನ್ ವ್ಯಾಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಜಯಶ್ರೀ ಪ್ರವೀಣ ಬಿರಾದಾರ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಜ್ಞಾನವನ್ನು ಇಂತಹ ವೇದಿಕೆ ಮೂಲಕ ಹ್ರೆರತಂದು ಅವರ ಕಲಿಕಾ ಸಾಮಥ್ಯ ಹೆಚ್ಚಿಸಲು ಅನುಕೂಲವಾಗಲಿದೆ ಎಂದರು.

ಎಸ್‍ಡಿಎಂಸಿ ಅಧ್ಯಕ್ಷ ರಾಜಕುಮಾರ ಧಬಾಲೆ ಮಾತನಾಡಿ, ಪುಸ್ತಕವನ್ನು ಓದುವುದು, ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಚಟುವಟಿಕೆಗಳನ್ನು ಬಲಪಡಿಸುವ ಮೂಲಕ ಮಕ್ಕಳ ಜ್ಞಾನವನ್ನು ಹೆಚ್ಚಿಸುವ ಕಲಿಕಾ ಹಬ್ಬವನ್ನು ಅತ್ಯಂತ ಮಹತ್ವದ ಘಟ್ಟವಾಗಿದೆ ಎಂದರು.

ಬಿಆರ್‍ಪಿ ಶಶಿಕಾಂತ ಬಿಡವೆ ಮಾತನಾಡಿದರು.

ಸಿಆರ್‍ಪಿ ಶಿವಕುಮಾರ ಹೊನ್ನಾಳೆ, ಸಿಆರ್‍ಪಿ ರಮಾಕಾಂತ ಕಾಳೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ, ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಲಿಂಗಾನಂದ ಮಹಾಜನ, ಗುರುಬಸಯ್ಯ ಸ್ವಾಮಿ, ಶಿವಾಜಿ ಬಿರಾದರ, ರೋಹಿತ, ಕಾಶಿಬಾಯಿ ಗುಡ್ಡಾ, ಮಹಾದೇವ ಮಡಿವಾಳಪ್ಪ, ಶಿವರಾಜ ಜಲಸಿಂಗೆ, ರಮೇಶ ಬಿರಾದಾರ, ಮೆಹಮೂದ್, ಲಲಿತಾ ಸ್ವಾಮಿ, ಗಿರಿ ಸರ್ ಇದ್ದರು.

ಶಾಲಾ ಮಕ್ಕಳು ಸ್ವಾಗತ ಗೀತೆ ನುಡಿಸಿದರು. ಸಿಆರ್‍ಪಿ.ಶಿವಕುಮಾರ ಹೊನ್ನಾಳೆ ಸ್ವಾಗತಿಸಿದರೆ, ಸುನೀತಾ ಪಟವಾರಿ ಪ್ರಾಸ್ತಾವಿಕ ಮಾತನಾಡಿದರು. ಮಹಾದೇವ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು.