ಗುಣಮಟ್ಟದ ಶಿಕ್ಷಣ ಶಿಕ್ಷಣ ಗುರಿ: ಕೋನರಡ್ಡಿ


ನವಲಗುಂದ,ಜು.೪: ತಾಲ್ಲೂಕಿನ ಸರ್ಕಾರಿ ಶಾಲೆಗಳ ಕಟ್ಟಡಕ್ಕಾಗಿ ವಿಶೇಷ ವಿನ್ಯಾಸದಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವುದರೊಂದಿಗೆ ಮೂಲಭೂತ ಸೌಲಭ್ಯ ಒದಗಿಸುವ ಮೂಲಕ, ಶಿಕ್ಷಣ ತಜ್ಞರ ತಂಡದೊAದಿಗೆ ಸಮಾಲೋಚಿಸಿ ಅವರ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಕಾರ್ಯಾಗಾರ,ಕಮ್ಮಟ ಏರ್ಪಡಿಸಿ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ತಿಳಿಸಿದರು.
ಅವರು ತಾಲ್ಲೂಕಿನ ಗುಡಿಸಾಗರ ಗ್ರಾಮದ ಶ್ರೀ ಚನ್ನಬಸಪ್ಪ ಹೊಳೆಯಣ್ಣವರ ಸರಕಾರಿ ಪ್ರೌಢಶಾಲೆಗೆ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಕ್ವಾಲಕಮ್ ಕಂಪನಿಯ ಸಹಕಾರದಿಂದ ನೂತನ ನಿರ್ಮಿಸಿರುವ ಕುಡಿಯುವ ನೀರು, ಕೈ ತೊಳೆಯುವ ತೊಟ್ಟಿ ಹಾಗೂ ಶೌಚಾಲಯಗಳ ಹಸ್ತಾಂತರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಸ್ವಾಮಿ ವಿವೇಕಾನಂದ ಯೂಥ ಮೂವಮೆಂಟರವರ ಕಾರ್ಯ ಶ್ಲಾಘನೀಯವಾದುದು. ಅತ್ಯಂತ ಗುಣಮಟ್ಟದಿಂದ ಕೂಡಿದ ಕಾಮಗಾರಿಗಳನ್ನು ನಿರ್ಮಾಣ ಮಾಡಿ ಶಾಲೆಗೆ ಹಸ್ತಾಂತರ ಮಾಡಿದ್ದಾರೆ. ಇಂತಹ ಘಟಕಗಳನ್ನು ನವಲಗುಂದ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ನಿರ್ಮಾಣ ಮಾಡುವಂತೆ ಕೋನರಡ್ಡಿ ತಿಳಿಸಿದರು.


ಎ ಬಿ ಕೊಪ್ಪದ ಮಾತನಾಡಿ ಗ್ರಾಮೀಣ ಮಕ್ಕಳು ಅತ್ಯಂತ ಪ್ರತಿಭಾವಂತರಾಗಿದ್ದು.ಅವರಿಗೆ ಉತ್ತಮ ಮಾರ್ಗದರ್ಶನ ದೊರೆತಲ್ಲಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಸಂಶಯವಿಲ್ಲ.ವಿಷಯಗಳ ಮೂಲಪರಿಕಲ್ಪನೆಗಳನ್ನು ಕೌಶಲ್ಯಪೂವ೯ಕವಾಗಿ ಮಕ್ಕಳಲ್ಲಿ ಮೂಡಿಸುವ ಕಾರ್ಯಮಾಡುವದರಿಂದ ಶಾಶ್ವತ ಕಲಿಕೆ ಸಾಧ್ಯ. ಮೌಲ್ಯ ಶಿಕ್ಷಣದ ಬೀಜ ಬಿತ್ತುವದರಿಂದ ಸುಂದರ,ಸದೃಢ ಸಮಾಜ ನಿರ್ಮಾಣವಾಗುವದು ಎಂದರು.


ಇದೆ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ಬಿಸಿ ಊಟದ ಗುಣಮಟ್ಟ ತಿಳಿಯಲು ಶಾಸಕರು ವಿದ್ಯಾರ್ಥಿಗಳೊಂದಿಗೆ ಊಟ ಸವಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾರಾದ ಇಂದುಮತಿ ವಿಷ್ಣುನಾಯ್ಕ,ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಯೋಜನಾ ನಿರ್ದೇಶಕ ಜಯಕುಮಾರ ಕೆ, ಗ್ರಾ ಪಂ ಅಧ್ಯಕ್ಷೆ ರತ್ನಮ್ಮ ಗುಡಿಸಲಮನಿ, ಉಪಾಧ್ಯಕ್ಷೆ ನಜೀರಾಬೇಗಂ ದಿವಾನಸಾಬನವರ, ಎಸ್ ಸಿ ಹೊಳೆಯಣ್ಣವರ, ಬಿ ಟಿ ಕುಲಕರ್ಣಿ, ಎಸಡಿಎಂಸಿ ಪದಾಧಿಕಾರಿಗಳಾದ ಚಿದಾನಂದ ಮುತ್ತಣ್ಣವರ, ಖಾಜಾಸಾಹೇಬ ದಿವಾನಸಾಬನವರ, ಗುರುನಾಥ ಉಳ್ಳಾಗಡ್ಡಿ, ಭೀಮಣ್ಣ ಪಟ್ಟೆದ, ಎ ಡಿ ಕುಲಕರ್ಣಿ ಎಲ್.ವಾಯ್. ರಾಯಪ್ಪನವರ ಮಂಜುಕುಮಾರಿ ರಜಪೂತ, ಶಿವಾನಂದ ಜನ್ನರ, ನಾಗಲಿಂಗಪ್ಪ ಹೊಳೆಯಣ್ಣವರ, ಎಂ.ಎಸ್.ಹಡಲಗಿ ಸೇರಿದಂತೆ ಗ್ರಾ ಪಂ ಸದಸ್ಯರು, ಶಾಲಾ ಆಡಳಿತ ಮಂಡಳಿ ಸದಸ್ಯರ ಹಾಗೂ ಶಿಕ್ಷಕರು,ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.