ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ ಅಗತ್ಯ

ಸಂಜೆವಾಣಿ ವಾರ್ತ
ಹುಮನಾಬಾದ್ :ಅ.೧೩: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.
ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಕಿನ್ನರಿ ಬೋಮ್ಮಯ್ಯನ ದೇವಸ್ಥಾನದಲ್ಲಿ ನಡೆದ ಕಿನ್ನರಿ ಬೋಮ್ಮಯ್ಯನ ರಥೋತ್ಸವ ಹಾಗೂ ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವೈಜ್ಞಾನಿಕವಾಗಿ ಬಹಳ ವೇಗದಿಂದ ಬೆಳೆಯುತ್ತಿರುವ ಪ್ರಸ್ತುತ ದಿನದಲ್ಲಿ ಹಣ, ಆಸ್ತಿ ಗಳಿಕೆಯ ಮನಸ್ಥಿತಿಯಿಂದ ಹೊರಬಂದು ಮಕ್ಕಳನ್ನೆ ದೊಡ್ಡ ಆಸ್ತಿಯನ್ನಾಗಿ ಮಾಡುವ ಮೂಲಕ ಬಲಿಷ್ಠ ರಾಷ್ಟ್ರದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಈ ಜಾತ್ರಾ ಮಹೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಮಾಜಿಕ ಸೇವಕರಿಗೆ ಸೇರಿದಂತೆ ಉತ್ಸವ ಸಮಿತಿ ಪದಾಧಿಕಾರಿಗಳಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಿರೇಮಠ ಸಂಸ್ಧಾನದ ಮೃತ್ಯುಂಜಯ ಶಿವಯೋಗಿ ಶಿವಾಚಾರ್ಯ, ಡೊಂಗರಗಾAವ ರೇವಣಸಿದ್ದೇಶ್ವರ ಮಠದ ಉದಯ ರಾಜಯೋಗೇಂದ್ರ, ಜಂಗಮ ಮಠ ನೇರಳೆ, ಕನಕಪುರ ಹಾಗೂ ಹಳ್ಳಿಖೇಡ ಹಿರೇಮಠದ ಪೀಠಾಧಿಪತಿ ಚರಮೂರ್ತಿ ಸಿದ್ದರಾಮ ದೇವರು, ಸುಭಾಷ ವಾರದ ಶಿವಕುಮಾರ ಪಾಟೀಲ್, ಸುಭಾಷ ಚೀಲಶೆಟ್ಟಿ, ಅಣ್ಣೆಪ್ಪ ರಟಕಲೆ, ಭಕ್ತರಾಜ ಚಿತ್ತಾಪೂರೆ, ಪ್ರಭುರಾವ ಬಿರಾದಾರ, ಮಲ್ಲಿಕಾರ್ಜುನ ತಟಪಟೆ, ಉದಯಕುಮಾರ ವಾರದ , ರಮೇಶ ವಾರದ , ಶ್ರೀ ಮಹೇಶ ಚೀಲಶಟ್ಟಿ , ಸಂಗಪ್ಪ ಉಪ್ಪಿನ , ಮಹಾದೇವ ಗೋಸ್ವಾಮಿ , ಭೀಮಶಾ ಕೋರಿ , ಗುಂಡಪ್ಪಾ ಕೋರಿ , ಸಂಗಮೇಶ ಸಿದ್ದೇಶ್ವರ , ಪ್ರಕಾಶ ಬಾವಗಿ , ಸಂತೋಷ ಚಿಲಶಟ್ಟಿ , ಭೀಮಶಾ ಸ್ವಂತ ಇದ್ದರು.