
ಜಮಖಂಡಿ :ಜ.25: ನಗರದಲ್ಲಿ ಶಾಂತಿ ಸೌಹಾರ್ದತೆ ಹಾಗೂ ಸಮಾಜದ ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅಮನ ಕಮಿಟಿ ವತಿಯಿಂದ ಜ.28ರಂದು ಸಾಯಂಕಾಲ 7 ಗಂಟೆಗೆ ನಗರದ ಪೆÇೀಲೋ ಮೈದಾನದಲ್ಲಿ ವಿಶ್ವವಿಖ್ಯಾತ ಪ್ರಸಿದ್ಧ ಸೂಫಿ ಕವ್ವಾಲಿ ಗಾಯಕ ಅನೀಸ್ ಸಾಬರಿ ಅವರಿಂದ ಕವ್ವಾಲಿ ಕಾರ್ಯಕ್ರಮ ನಡೆಯಲಿದೆ ಎಂದು ಅದ್ಯಕ್ಷ ಅಕಬರ ಜಮಾದಾರ ಹೇಳಿದರು.
ನಗರದಲ್ಲಿ ಜಾತಿ, ಧರ್ಮ ತಾರತಮ್ಯ ಮಾಡದೆ ಕೋಮು ಸೌಹಾರ್ದತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಆದರಿಂದ ಇಂತಹ ವಿಶ್ವ ವಿಖ್ಯಾತ ಗಾಯಕ ಅನಿಸ್ ಸಾಭರಿ ಅವರು ತಂಡ ದೇಶ ಭಕ್ತಿ ಗೀತೆಗಳನ್ನು ಹಾಡಿ ಎಲ್ಲರಲ್ಲಿ ಒಂದು ಭಾವೈಕ್ಯತೆ ಸಾರುವರು ಎಂದರು.
ಉಪದ್ಯಾಕ್ಷ ಮೀರಾ ಒಂಟಮರಿ ಮಾತನಾಡಿ ಈ ಕವ್ವಾಲಿ ಕಾರ್ಯಕ್ರಮದ ಉದ್ದೇಶ ಇಷ್ಟೆ ನಗರದಲ್ಲಿ ಹಿಂದು ಮುಸ್ಲಿಂ ಸಮಾಜದಲ್ಲಿ ಭಾವೈಕ್ಯತೆ ಬೇರಿಯಲಿ ಎಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಒಲೆಮಠದ ಶ್ರೀ ಆನಂದ ದೇವರು ಹಾಗೂ ಮುಖ್ಯ ಅಥಿತಿಗಳಾಗಿ ಮಾಜಿ ಶಾಸಕ ಆನಂದ ನ್ಯಾಮಗೌಡ ಮತ್ತು ಹಮೀದ್ ಮುಸ್ರೀಫ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಗೂ ಶ್ರೀಗಳು ಆಗಮಿಸಲಿದ್ದಾರೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಬಕ್ಕರ ಕುಡಚಿ ಮಾತನಾಡಿ ಈ ಭಾರತ ದೇಶದಲ್ಲಿ ನಮ್ಮ ಜಲ,ನೆಲ ಈ ಮಣ್ಣನ್ನು ದೇಶ ಭಕ್ತ ಮತ್ತು ಇತರರ ಮನಸ್ಸನ್ನು ಪ್ರಿ?ತಿಸಿದಾಗ ಮಾತ್ರ ಸೌಹಾರ್ದ ಭಾವನೆ ಸಾರುತ್ತವೆ ಆ ನಿಟ್ಟಿನಲ್ಲಿ ನಮ್ಮ ನಗರದಕ್ಕೆ ದೇಶದ ಪ್ರಸಿದ್ಧ ಗಾಯಕ ಅನಿಸ್ ಸಾಬರಿ ಅವರು ಆಗಮಿಸಲಿದ್ದಾರೆ ಅವರು ವಿಶ್ವಾದ್ಯಂತ ಕವ್ವಾಲಿ ಮೂಲಕ ಹಿಂದು ಮತ್ತು ಮುಸ್ಲಿಂ ಭಾವೈಕ್ಯತೆ ಸಂಕೇತ ಸಾರಿದ್ದಾರೆ ಅಣ್ಣ ಬಸವಣ್ಣನವರ ನಾಡಿನಲ್ಲಿ ಹಿಂದು-ಮುಸ್ಲಿಂ ಸಮಾಜದ ಹಿರಿಯರು ಒಂದೆ ಭಾವನೆಗಳಿಂದ ಬಂದಿದ್ದೆವೆ ಆದರಿಂದ ನಮ್ಮ ಕಮಿಟಿ ವತಿಯಿಂದ ಈ ಕವ್ವಾಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು
ಕಾರ್ಯದರ್ಶಿ ಮುಸ್ಥಪಾ ಕರಜಗಿ ಹಾಗೂ ನಿರ್ದೇಶಕ ಖೀಜರ ಪೆಂಡಾರಿ ಮಾತನಾಡಿ ಈ ಕವಾಲಿ ಕಾರ್ಯಕ್ರಮವು ಒಂದೆ ಧರ್ಮಕ್ಕೆ ಸಿಮಿತವಾಗದೆ ಎಲ್ಲ ಧರ್ಮದವರನ್ನು ಒಳಗೊಂಡು ಒಂದು ಐತಿಹಾಸಿಕ ಕಾರ್ಯಕ್ರಮವನ್ನು ನಗರದಲ್ಲಿ ಒಂದು ಭಾವೈಕ್ಯತೆ ಸೃಷ್ಟಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಯಾಕೆಂದರೆ ಇತ್ತಿಚಿನ ದಿನಗಳಲ್ಲಿ ಜಾತಿ ಜಾತಿಗಳ ಮಧ್ಯ ವಿಷ ಬೀಜ ಬಿತ್ತುವ ಕಾರ್ಯನಡೆದಿದೆ ಆದರಿಂದ ಕವಾಲ ಅನಿಸ್ ದೇಶ ಭಕ್ತಿ ಗೀತೆಗಳು ಹಾಗೂ ಭಾವೈಕ್ಯತೆ ಗೀತೆಗಳನ್ನು ಹಾಡುವ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುವರು ಎಲ್ಲರು ಈ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆ ತರಬೇಕು ಎಂದರು.
ಆಶೀಫ ಝಂಡೆ, ಮೈನು ದೀನ್ ಖಾಟಿಕ್, ಸಾಧಿಕ್ ಪೀರಾ ಖಾದ್ರಿ, ರಿಯಾಜ ಖಾಸರ್, ನದೀಂ ಜಮಾದಾರ, ಅಯಾಜ್ ವಿಜಾಪೂರ, ಮೊಹಸೀನ್ ಮುಲ್ಲಾ,ಮುಸಾ ಮುಲ್ಲಾ,ರಸೀದ್ ಖುದಾವನ, ಅಲ್ತಮಾಸ ಸಲಗರ, ಸದ್ದಾಂ ಅವರಸಂಗ, ಸಲೀಂ ಶೇಖ, ಇಸಾಲಿ ಸಂಗತ್ರಾಸ,ರಫೀಕ್ ಬೆನ್ನೂರ ಅನೇಕರು ಇದ್ದರು.
























