Home ಜಿಲ್ಲೆ ಗುರು ನಾನಕ್ ದೇವ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಪೂರ್ವಿ ಬಿರಾದಾರ್”ಭಾರತದ ಉದಯೋನ್ಮುಖ ತಾರ-2026″ ಪ್ರಶಸ್ತಿಗ ಭಾಜನ-ಸನ್ಮಾನ

ಗುರು ನಾನಕ್ ದೇವ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಪೂರ್ವಿ ಬಿರಾದಾರ್”ಭಾರತದ ಉದಯೋನ್ಮುಖ ತಾರ-2026″ ಪ್ರಶಸ್ತಿಗ ಭಾಜನ-ಸನ್ಮಾನ

ಬೀದರ್: ನಗರದ ಗುರು ನಗರದಲ್ಲಿರುವ ಗುರು ನಾನಕ್ ದೇವ್ ಪಬ್ಲಿಕ್ ಶಾಲೆಯ 9ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ ಪೂರ್ವಿ ಬಿರಾದಾರ್ ಅವರು ಪುಣೆಯ ಚಿಂಚ್‍ವಾಡ್‍ನ ಎಲ್ಪ್‍ರೊ ಮಾಲ್‍ನಲ್ಲಿ ಆಗಸ್ಟ್ 21 ರಿಂದ 23ರವರÉಗÉ ನಡೆದ “ಭಾರತದ ಉದಯೋನ್ಮುಖ ತಾರೆ-2026” ಸ್ಪರ್ಧೇಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಮಕ್ಕಳ ವಿಭಾಗದ 2ನೇ ವಯೋಮಾನದ (9-14 ವರ್ಷ) ವಿಜೇತರಾಗಿ ಹೊರಹೊಮ್ಮಿದ್ದಾರÉ.
ಈ ಸ್ಪರ್ಧೇಯಲ್ಲಿ ಮಕ್ಕಳನ್ನು ಎರಡು ವಯೋಮಾನದ ಗುಂಪುಗಳಾಗಿ ವಿಂಗಡಿಸಲಾಗಿತ್ತು. ಮೊದಲನೆಯದು 5 ರಿಂದ 8 ವರ್ಷ ಮತ್ತು ಎರಡನೆಯದು 9 ರಿಂದ 14 ವರ್ಷ ವಯೋಮಾನದ ವಿಭಾಗವಾಗಿತ್ತು. ಸ್ಪರ್ಧೇಯ ಮೊದಲ ಹಂತದ ಸಾಂಸ್ಕøತಿಕ ಸುತ್ತಿನಲ್ಲಿ ಎರಡು ಸುತ್ತುಗಳನ್ನು ಆಯೋಜಿಸಲಾಗಿತ್ತು. ಈ ಸುತ್ತಿನಲ್ಲಿ ಪೂರ್ವಿ ಬಿರಾದಾರ್ ಅವರು ಕರ್ನಾಟಕದ ಸಾಂಸ್ಕøತಿಕ ಪರಂಪರÉಯನ್ನು ಪ್ರತಿಬಿಂಬಿಸುವ ಮೈಸೂರು ಚಾಮುಂಡೇಶ್ವರಿ ದೇವಿಯ ರೂಪವನ್ನು ಅತ್ಯಂತ ಆಕರ್ಷಕವಾಗಿ ಪ್ರತಿನಿಧಿಸಿ ಮೆಚ್ಚುಗÉ ಗಳಿಸಿದರು.
ನಂತರ ನಡೆದ ಡಿಸೈನರ್ ಸುತ್ತಿನಲ್ಲಿ, ಸ್ಪರ್ಧೇಯನ್ನು ಮ್ಯಾಕ್ಸ್ ಫ್ಯಾಷನ್ ಇಂಡಿಯಾ ಸಹಯೋಗದೊಂದಿಗÉ ಆಯೋಜಿಸಲಾಗಿತ್ತು. ಈ ಸುತ್ತಿನಲ್ಲಿಯೂ ಪೂರ್ವಿ ಅವರು ತಮ್ಮ ಆತ್ಮವಿಶ್ವಾಸ, ಪ್ರತಿಭÉ, ವೇದಿಕೆ ನಿರ್ವಹಣೆÉ ಹಾಗೂ ವಿಶಿಷ್ಟ ಪ್ರದರ್ಶನದ ಮೂಲಕ ಗಮನ ಸೆಳÉದರು.
ಸ್ಪರ್ಧೇಯಲ್ಲಿ “ಬೋಲ್ಡ್ ಆ್ಯಂಡ್ ಬ್ಯೂಟಿಫುಲ್” ಉಪಶೀರ್ಷಿಕೆಯನ್ನು ಗÉದ್ದ ಪೂರ್ವಿ ಬಿರಾದಾರ್ ಅವರು, ದೇಶದ ವಿವಿಧ ಭಾಗಗಳಿಂದ ಭಾಗವಹಿಸಿದ್ದ ಸ್ಪರ್ಧೇಗಳ ನಡುವೆ ಅತ್ಯುತ್ತಮ ಪ್ರದರ್ಶನ ನೀಡಿ “ಭಾರತದ ಉದಯೋನ್ಮುಖ ತಾರÉ-2026” ಮಕ್ಕಳ ವಿಭಾಗದ 2ನೇ ವಯೋಮಾನದ ವಿಜೇತರಾಗಿ ಆಯ್ಕೆಯಾಗಿದ್ದಾರÉ.

ಜಿ.ಎನ್.ಡಿ.ಪಿ. ಶಾಲೆಯ ಅಧ್ಯಕ್ಷೆ ಡಾ. ರೇಷ್ಮಾ ಕೌರ್ ಅವರು ಪೂರ್ವಿಗೆ ಅಭಿನಂದನೆ ಸಲ್ಲಿಸಿ ಶಾಲೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸನ್ಮಾನಿಸಿದರು. ಅವರ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವನ್ನು ಶ್ಲಾಘಿಸಿದರು ಮತ್ತು ಯುವ ಕನಸುಗಾರರಿಗೆ ಸ್ಪೂರ್ತಿ ಎಂದು ಬಣ್ಣಿಸಿದರು.

ಪೂರ್ವಿ ಸಾಧನೆಗೆ ಪ್ರಾಂಶುಪಾಲೆ ಶ್ರೀಮತಿ ಶರ್ಲಿ ಶೀಬಾ ಕೂಡಾ ಹೆಮ್ಮೆ ವ್ಯಕ್ತಪಡಿಸಿ ಹೆತ್ತವರನ್ನು ಹೆಮ್ಮೆ ಪಡುವಂತೆ ಮಾಡುವುದಲ್ಲದೆ ನಮ್ಮ ಶಾಲೆಗೆ ದೊಡ್ಡ ಗೌರವನ್ನು ತಂದಿದ್ದಾಳೆ, ಆಕೆಯ ಸಮರ್ಪಣೆ ಮತ್ತು ಪರಿಶ್ರಮ ಶ್ಲಾಘನೀಯ ಎಂದು ತಿಳಿಸಿದರು. ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಅವರ ಭವಿಷ್ಯದ ಸಾಧನೆಗಳಿಗÉ ಶುಭ ಹಾರೈಸಿದ್ದಾರÉ.