Home ಜಿಲ್ಲೆ ಪುಲಿಗೆರೆ ಉತ್ಸವ: ಸಂಗೀತ ನೃತ್ಯ ಸಂಭ್ರಮ

ಪುಲಿಗೆರೆ ಉತ್ಸವ: ಸಂಗೀತ ನೃತ್ಯ ಸಂಭ್ರಮ

ಲಕ್ಷ್ಮೇಶ್ವರ,ಫೆ18: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲದ ಪುಲಿಗೆರೆ ಉತ್ಸವ ಸಂಗೀತ ನೃತ್ಯ ಸಂಭ್ರಮ ಕಾರ್ಯಕ್ರಮ ದೇವಸ್ಥಾನದ 9ನೇ ವಾರ್ಷಿಕೋತ್ಸವದ ಅಂಗವಾಗಿ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಜರುಗಲಿದೆ.


ಶುಕ್ರವಾರ ದಿನಾಂಕ 20ರಂದು ಬೆಳಿಗ್ಗೆ ಉದಯರಾಗ 1 ರಲ್ಲಿ 6.15ಕ್ಕೆ ಸಿತಾರವಾದನ ಲಕ್ಷ್ಮೇಶ್ವರದ ಕಲಾವಿದೆ ಮುಕ್ತ ಕುಲಕರ್ಣಿ ನುಡಿಸಲಿದ್ದು ತಬಲಾಸಾತ್ ಕೃಷ್ಣಕುಮಾರ್ ಕುಲಕರ್ಣಿ ನೀಡಲಿದ್ದಾರೆ. ಬೆಳಿಗ್ಗೆ 7:15ಕ್ಕೆ ಹುಬ್ಬಳ್ಳಿಯ ರಾಜೇಶ್ವರಿ ಪಾಟೀಲ್ ಹಿಂದುಸ್ತಾನಿ ಗಾಯನ ಪ್ರಸ್ತುತಪಡಿಸಲಿದ್ದು ಹಾರ್ಮೋನಿಯಂ ಚಿದಂಬರ್ ಜೋಶಿ ತಬಲಾ ಹರ್ಷಿತ್ ಸೋನಿ ನೀಡಲಿದ್ದಾರೆ. ಸಂಜೆ 5:30ಕ್ಕೆ ಸಿದ್ದಾಪುರದ ಕೊಳಗಿ ಕೇಶವ ಹೆಗಡೆ ಮತ್ತು ತಂಡದವರಿಂದ ಯಕ್ಷಗಾನ ಜರುಗಲಿದೆ ಸಂಜೆ 6: 30ಕ್ಕೆ ಶಿಗ್ಗಾವಿಯ ಶ್ರೀ ಬಸವೇಶ್ವರ ನೃತ್ಯ ಶಾಲೆಯ ಶರಣ ಶೇಕಪ್ಪ ಬಡ್ಡಿ ಮತ್ತು ತಂಡದವರಿಂದ ಭರತನಾಟ್ಯ ಜರಗಲಿದೆ. ಸಂಜೆ 7:30ಕ್ಕೆ ಲಕ್ಷ್ಮೇಶ್ವರದ ಡಾ. ಅರ್ಜುನ್ ವಠಾರ ಹಿಂದುಸ್ತಾನಿ ಗಾಯನವನ್ನು ಪ್ರಸ್ತುತಪಡಿಸಲಿದ್ದು ತಬಲಾ ಕೃಷ್ಣಕುಮಾರ್ ಕುಲಕರ್ಣಿ ಹಾರ್ಮೋನಿಯಂ ರಾಮು ಕೋಡೆಕಲ್ ಸಾತ್ ನೀಡಲಿದ್ದಾರೆ. ಫೆಬ್ರವರಿ 21 ಶನಿವಾರ ಉದಯರಾಗ 2 ರಲ್ಲಿ ಬೆಳಗ್ಗೆ 6:00ಗೆ ಲಕ್ಷ್ಮೇಶ್ವರದ ಕಲಾವಿದ ರಾಘವೇಂದ್ರ ಕೃಷ್ಣ ಜಿ ಕ್ಷತ್ರಿಯವರ ಬಾನಸೂರಿ ನುಡಿಸಲಿದ್ದು ತಬಲಾ ಶ್ರೀಹರಿ ಕ್ಷತ್ರಿಯ ನೀಡಲಿದ್ದಾರೆ ಬೆಳಿಗ್ಗೆ 7:00ಗೆ ಹಿಂದುಸ್ತಾನಿ ಸಂಗೀತ ಮತ್ತು ಭಕ್ತಿ ಸಂಗೀತ ಸೇವೆ ಬೆಂಗಳೂರಿನ ಚೈತ್ರ ಚ್‍ಜಿ ಅವರಿಂದ ಜರುಗಲಿದೆ.


ಸಂಜೆ 5:30ಕ್ಕೆ ಬೆಂಗಳೂರಿನ ರತ್ನಲಯದ ಅರುಣಾ ರಾಜಮಣಿ ಅವರಿಂದ ಭರತನಾಟ್ಯ ಸಂಜೆ 6:30 ಕೆ ಬೆಂಗಳೂರಿನ ಕುಚುಪುಡಿ ನೃತ್ಯ ಅಕಾಡೆಮಿಯ ಕಲಾವಿದೆ ದಿವ್ಯ ರಾಮಚಂದ್ರ ಕುಚುಪುಡಿ ನೃತ್ಯವನ್ನು ಪ್ರದರ್ಶಿಸಲಿದ್ದಾರೆ ರಾತ್ರಿ 7:30ಕ್ಕೆ ಕುಂದಗೋಳದ ಅಶೋಕ ನಾಡಿಗೆರ್ ಹಿಂದುಸ್ತಾನಿ ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ.


ಕೊನೆಯ ದಿನವಾದ ಫೆಬ್ರವರಿ 22ರಂದು ರವಿವಾರ ಉದಯರಾಗ_3 ರಲ್ಲಿ ಗದುಗಿನ ವೀರೇಶ್ವರ ಪುಣ್ಯಶ್ರಮದ ಸುರೇಶ್ ಮಂಗಳೂರು ಪಿಟೀಲು ವಾದನ ನುಡಿಸಲಿದ್ದಾರೆ ಬೆಳಿಗ್ಗೆ 7:00ಗೆ ಶಾಸ್ತ್ರೀಯ ಮತ್ತು ಲಘು ಸಂಗೀತ ಕಾರ್ಯಕ್ರಮ ವೆಂಕಟೇಶ ಆಲ್ಕೋಡ್ ನೀಡಲಿದ್ದಾರೆ.


ಸಂಜೆ 5:30ಕ್ಕೆ ಚೆನ್ನೈನ ವರಪ್ರಸಾದ್ ಎಸ್ ಕರ್ನಾಟಕ ಸಂಗೀತ ನೀಡಲಿದ್ದಾರೆ.6-30 ಕೆ ಗಾಯತ್ರಿ ಚಂದ್ರಶೇಖರ್ ಮತ್ತು ತಂಡದವರಿಂದ ಭರತನಾಟ್ಯ ಜರುಗಲಿದೆ ರಾತ್ರಿ 7:30ಕ್ಕೆ ಲತಾ ಲಕ್ಷ್ಮೀ ಮತ್ತು ತಂಡದವರಿಂದ ಭರತನಾಟ್ಯ ನೃತ್ಯ ವೈವಿಧ್ಯ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮಗಳು ಸಂಪನ್ನವಾಗಲಿವೆ.