
ಬೀದರ್: ಫೆ.27:ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕೈಗೆತ್ತಿಕೊಳ್ಳುತ್ತಿರುವ ಕಾಮಗಾರಿಗಳು ಜನಜೀವನದ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಭವಿಷ್ಯದ ಪ್ರಗತಿಗೆ ಬಲವಾದ ಅಡಿಪಾಯವಾಗಿವೆ. ಮೂಲಸೌಕರ್ಯಗಳ ಅಭಿವೃದ್ಧಿ, ಸಾರ್ವಜನಿಕ ಸೌಲಭ್ಯಗಳ ವೃದ್ಧಿ ಹಾಗೂ ಜನಸೇವೆಯತ್ತ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯೂ ನಮ್ಮ ಪ್ರದೇಶವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಹೀಗಾಗಿ ಹಗಲಿರುಳು ಶ್ರಮಿಸಲಾಗುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ನಿರ್ಣಾ ಗ್ರಾಮದಲ್ಲಿರುವ ಶ್ರೀ ಹೇಮರೆಡ್ಡಿ ಮಲ್ಲಮ್ಮ ರವರ ದೇವಸ್ಥಾನದ ಸಮೀಪ ?20 ಲಕ್ಷ ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಮೊದಲ ಆದ್ಯತೆ ಎಂದು ತಿಳಿಸಲಾಗಿದೆ. ಸಾರ್ವಜನಿಕರಿಂದ ಬರುತ್ತಿರುವ ಅಹವಾಲುಗಳನ್ನು ತಕ್ಷಣ ಸ್ವೀಕರಿಸಿ, ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಜನರ ಮೂಲಭೂತ ಸೌಲಭ್ಯಗಳು, ರಸ್ತೆ, ಕುಡಿಯುವ ನೀರು, ವಿದ್ಯುತ್, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಸಂಬಂಧಿತ ಸಮಸ್ಯೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದ್ದು, ಶಾಶ್ವತ ಪರಿಹಾರಕ್ಕಾಗಿ ಯೋಜಿತ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.
ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನಸೇವೆಯೇ ನನ್ನ ಮುಖ್ಯ ಗುರಿಯಾಗಿದ್ದು, ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ತಿಳಿಸಬಹುದು ಎಂದು ತಿಳಿಸಿದರು.
ಕಾಮಗಾರಿ ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ.
ಈ ಸಮುದಾಯ ಭವನವು ಗ್ರಾಮಸ್ಥರ ಸಭೆಗಳು, ಸಾಮಾಜಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದ್ದು, ಗ್ರಾಮದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಶಂಕರಾವ ಪಾಟೀಲ್, ರಾಜರೆಡ್ಡಿ, ಮಾಣಿಕಪ್ಪ ಖಾಶೆಂಪುರ, ಶ್ರೀನಿವಾಸ ಪೆÇದ್ದಾರ,
ವೆಂಕಟರೆಡ್ಡಿ, ನಾರಾಯಣ ರೆಡ್ಡಿ, ಚನ್ನಬಸವ ಸೊಪ್ಪಣ್ಣೊರ, ರವಿ ಸ್ವಾಮಿ, ನರ್ಸಾರೆಡ್ಡಿ, ಕೃಷ್ಣಾ ರೆಡ್ಡಿ, ಸಂತೋಷ ರೆಡ್ಡಿ, ಶಿವರಾಜ ಬಶೆಟ್ಟಿ, ವೀರಶೆಟ್ಟಿ ಭದ್ರಪ್ಪನೋರ. ಶಿವ ಶರಣಪ್ಪ ಪೆÇಲೀಸ್ ಪಾಟೀಲ್. ಶಂಕರ ಉದಗೀರೆ, ವೀರಶೆಟ್ಟಿ ನಾಗವಾರ,ವಿಠಲ ರೆಡ್ಡಿ ಚೂಡಾ, ವಿಠ್ಠಲ್ ರೆಡ್ಡಿ ಚೂಡ. ಸಂಜೀವ್ ರೆಡ್ಡಿ, ವಿಜಯರೆಡ್ಡಿ. ಅನಿಲ್ ರೆಡ್ಡಿ ಲಚ್ಚನ ಗಾರ್ ವಿಜಯರೆಡ್ಡಿ, ಅಶೋಕ್ ರೆಡ್ಡಿ, ವಿರಪ್ಪ ಮಂಗಲಗಿ, ಪ್ರಶಾಂತ ರೆಡ್ಡಿ, ಸುನೀತಾ ಮಂಗಲಗಿ, ಮತ್ತಿತರರು ಉಪಸ್ಥಿತರಿದ್ದರು






















