ಆಮೆ ಗತಿಯಲ್ಲಿ ಕಾಮಗಾರಿ ರೋಚಿಗೆದ್ದ ಪ್ರಜಾ ಕಾರ್ಮಿಕ ಶೇಖರ್: ಕಾಮಗಾರಿ ಪೂರ್ಣಕ್ಕೆ ಒತ್ತಾಯ

ಸೇಡಂ, ಆ,೧೪: ಪಟ್ಟಣದ ಬಸ್ಟಾಂಡ್ ಎದುರುಗಡೆ ಹಾಗೂ ಪಟ್ಟಣದ ಒಳಗಡೆ ಹೊಗುವ ಮುಖ್ಯ ರಸ್ತೆಯ ಮಧ್ಯದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದ್ದು ಈ ಕಾಮಗಾರಿ ಸುಮಾರು ದಿನಗಳಿಂದ ಆಮೆ ಗತಿಯಲ್ಲಿ ಕಾಮಗಾರಿ ಮಾಡುತ್ತಿರುವುದನ್ನು ಕಂಡು ರೋಚಿಗೆದ್ದ ಪ್ರಜಾ ಕಾರ್ಮಿಕ ಶೇಖರ್ ನಾಟಿಕರ್ ಅವರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಗ್ರಾಮಗಳಿಂದ ಬರುವ ರೈತರಿಗೆ ಸ್ಥಳೀಯ ವಾಹನ ಚಾಲಕರಿಗೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ, ಜೊತೆಗೆ ಗಣೇಶ ಚತುರ್ಥಿ ಆಗಮಿಸುತ್ತಿರುವ ಪ್ರಯುಕ್ತ ಪಕ್ಕದಲ್ಲಿಯೇ ಗಣೇಶ ಕುಂದರಿಸಲು ವೇದಿಕೆ ಸಿದ್ಧಗೊಳ್ಳುತ್ತಿದೆ, ಈ ಜಾಗದಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತಿದ್ದು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರು ಬಹುಬೇಗ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.