Home ಜಿಲ್ಲೆ ಕಲಬುರಗಿ ಎಚ್‍ಐವಿ ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರು ಕೈಜೋಡಿಸಿ:ಡಾ. ಶಂಕ್ರಪ್ಪಾ ಮೈಲಾರಿ

ಎಚ್‍ಐವಿ ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರು ಕೈಜೋಡಿಸಿ:ಡಾ. ಶಂಕ್ರಪ್ಪಾ ಮೈಲಾರಿ

ಕಲಬುರಗಿ,ಸೆ.29: ಸರಿಯಾದ ಜಾಗೃತಿ, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಸಮಯೋಚಿತ ಪರೀಕ್ಷೆಯ ಮೂಲಕ ಎಚ್‍ಐವಿ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿದೆ. ಸಮಾಜದಲ್ಲಿ ಎಚ್‍ಐವಿ ಕುರಿತು ಅನಗತ್ಯವಾಗಿ ಬೇರೂರಿರುವ ಭಯ ಮತ್ತು ಸಾಮಾಜಿಕ ಕಳಂಕವನ್ನು ಸಂಪೂರ್ಣವಾಗಿ ನಿವಾರಿಸಿ, ಆರೋಗ್ಯಕರ ಹಾಗೂ ಎಚ್‍ಐವಿ ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರೆಲ್ಲರೂ ಕೈಜೋಡಿಸಬೇಕು ಎಂದು ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿ ಸಹ ನಿರ್ದೇಶಕ ಡಾ. ಶಂಕ್ರಪ್ಪಾ ಮೈಲಾರಿ ಹೇಳಿದರು.

    ಸೋಮವಾರ ನಗರದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ ಪ್ರಿವೆನ್‍ಷನ್ ಸೊಸೈಟಿ, ಹಾಗೂ ಜಿಲ್ಲಾ ಏಡ್ಸ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಎನ್.ಎಸ್.ಎಸ್. ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಹೆಚ್.ಐ.ವಿ/ಏಡ್ಸ್ ಪ್ರಚಾರಾಂದೊಲನ ಮತ್ತು ಕ್ಷಯರೋಗ ಜಾಗೃತಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

  ಜಿಲ್ಲಾ ಕ್ಷಯರೋಗ ನಿರ್ಮೂಲನಾ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಅಧಿಕಾರಿ ಡಾ. ಮಹ್ಮದ್ ಗಫಾರ್ ಮಾತನಾಡಿದ ಅವರು, ಎಚ್‍ಐವಿ ಸೋಂಕು ತಡೆಗಟ್ಟುವಿಕೆ, ಸಮಯೋಚಿತ ರಕ್ತ ಪರೀಕ್ಷೆ, ಸೂಕ್ತ ಸಮಾಲೋಚನೆ ಪಡೆಯುವುದು ಹಾಗೂ ಅಗತ್ಯವಿದ್ದಲ್ಲಿ ನಿಯಮಿತವಾಗಿ ವೈದ್ಯಕೀಯ ಚಿಕಿತ್ಸೆಯನ್ನು ಪಾಲಿಸುವ ಕುರಿತು ಸಾರ್ವಜನಿಕರಿಗೆ ವಿವರವಾದ ಮಾಹಿತಿ ತಲುಪಿಸಲಾಯಿತು. ಎಚ್‍ಐವಿ ಸೋಂಕಿತರನ್ನು ಸಮಾಜದಿಂದ ದೂರವಿಡದೆ ಅಥವಾ ಕೀಳಾಗಿ ನೋಡದೆ, ಅತವ ರಿಗೆ ಸಮಾಜದಲ್ಲಿ ಅರ್ಹ ಗೌರವ, ಸಹಾನುಭೂತಿ ಮತ್ತು ಅಗತ್ಯ ಬೆಂಬಲ ನೀಡುವುದು ಪ್ರತಿಯೊಬ್ಬ ನಾಗರಿಕನ ಮುಖ್ಯ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು. 

 ಜಾಗೃತಿ ಬೈಕ್ ರ್ಯಾಲಿಯ ಮೂಲಕ ಜಿಲ್ಲೆಯಾದ್ಯಂತ ಎಚ್‍ಐವಿ ಬಗ್ಗೆ ಜ್ಞಾನ ಬೆಳೆಸಿಕೊಳ್ಳಿ, ತಡೆಗಟ್ಟುವಿಕೆಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ, ಸೋಂಕಿತರ ಮೇಲಿನ ತಾರತಮ್ಯವನ್ನು ಸಂಪೂರ್ಣವಾಗಿ ತೊಡೆದುಹಾಕಿ ಎಂಬ ಅತ್ಯಂತ ಪ್ರಮುಖ ಸಂದೇಶವನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯತ್ನಾಳ, ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿ ಉಪ ನಿರ್ದೇಶಕ ಎ.ಎಸ್.ರುದ್ರವಾಡಿ, ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿ ಉಪ ನಿರ್ದೇಶಕ ಡಾ. ಶರಣಬಸಪ್ಪಾ ಗಣಜಲಖೇಡ್, ಗುಲ್ಬರ್ಗ ವಿಶ್ವವಿಧ್ಯಾಲಯ ಎನ್.ಎಸ್.ಎಸ್ ಘಟಕ ಜಿಲ್ಲಾ ಸಂಯೋಜಕ ಡಾ.ಹೆಚ್.ಎಸ್. ಜಂಗೆ, ಡಾ. ರುಖಿಯಾ ಅಸ್ನ ರಬಾ, ಮಲ್ಲಿಕಾರ್ಜುನ ಜಿ. ಬಿರಾದಾರ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಂPಅU ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಸ್ವಯಂಸೇವಾ ಸಂಸ್ಥೆಗಳ (ಓಉಔ) ಪ್ರತಿನಿಧಿಗಳು ಹಾಗೂ ನೂರಾರು ಉತ್ಸಾಹಿ ವಿಧ್ಯಾರ್ಥಿಗಳು ಭಾಗವಹಿಸಿದ್ದರು.