
ಬೀದರ್,ನ, ೧೯:- ಮನುಷ್ಯ ಅನ್ನ, ನೀರು ಇಲ್ಲದೆ ಬದುಕಬಹುದು ಆದರೆ ಒಂದು ನಿಮಿಷ ಗಾಳಿ ಇಲ್ಲದೆ ಇದ್ದಲ್ಲಿ ಬದಕಲು ಸಾಧ್ಯವಿಲ್ಲವೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಜಿ.ಕೆ. ಬಿರಾದಾರ ಅವರು ನುಡಿದರು.
ಅವರು ಬೀದರ ನಗರದ ಪ್ರತಾಪ ನಗರದಲ್ಲಿರುವ ಸಾರಿಗೆ ಕಛೇರಿಯ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಬೀದರ ಮೋಟಾರುವಾಹನ ತರಬೇತಿ, ಶಾಲೆ ಸಂಘ, ಹಾಗೂ ಬೀದರ ಪಬ್ಲಿಕ್ ವರ್ಕರ್ ಸರ್ವಿಸೆಸ್ ಅಸೋಶಿಯೇಶನ್, ಬೀದರ ಸಂಯೋಗದಲ್ಲಿ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ ಕಾಂiÀiðಕ್ರಮವನ್ನು ದೀಪ ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಟಿಸಿದರು.
ಕಚೇರಿಗೆ ಬಂದಿರುವ ಸಾರ್ವಜನಿಕರು ಖಾಯಂ ಚಾಲನೆ ಪತ್ರಕ್ಕಾಗಿ ಕಛೇರಿಗೆ ಬಂದಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ವಾಹನ ಚಲಾಯಿಸುವ ಪ್ರತಿಯೊಬ್ಬ ಚಾಲಕರು ವರ್ಷಕ್ಕೆ ಗರಿಷ್ಠ ೧೦ ಸಸಿಗಳು ನಡೆಯುವ ಹವ್ಯಾಸ ಬೇಳೆಸಿಕೊಳ್ಳಬೇಕು. ವಾಹನದಿಂದ ಬರುವ ಮಾಲಿನ್ಯದಿಂದ ಕೆಮ್ಮು, ದಮ್ಮು, ಅಸ್ತಮಾ, ಕಿಡ್ನಿ, ಹೃದಯ ಇನ್ನಿತರ ಆರೋಗ್ಯ ಸಮಸ್ಯೆ ಉಂಟಾಗುತ್ತದೆ, ಸಾರ್ವಜನಿಕರು ವಾಹನಕ್ಕೆ ಪ್ರತಿ ೬ ತಿಂಗಳಿಗೊಮ್ಮೆ ಮಾಲಿನ್ಯ ತಪಾಶಣೆ ಮಾಡಿಕೊಳ್ಳಬೇಕು. ಮಾಡಿಕೊಳ್ಳದಿದ್ದರೆ ದ್ವಿಚಕ್ರಕ್ಕೆ ೧೫೦೦, ನಾಲ್ಕು ಚಕ್ರ ವಾಹನಕ್ಕೆ ೩೦೦೦ ದಂಡ ವಿಧಿಸಲಾಗುವುದು. ಆದುದ್ದರಿಂದ ಎಲ್ಲರು ಜವಾಬ್ದಾರಿಯಿಂದ ಪರಿಸರ ಕಾಪಾಡಲು ಎಲ್ಲರೂ ಕೈಜೋಡಿಸಬೇಕು. ಸಣ್ಣ ಸಣ್ಣ ಕೆಲಸಗಳಿಗೆ ವಾಹನ ಉಪಯೋಗಿಸಬಾರದು. ತಮ್ಮ ಮನೆಯಲ್ಲಿರುವ ಹಿರಿಯರು ಹಾಗೂ ಸ್ನೇಹಿತರು ಇನ್ನಿತರ ಹೆಸರಿನ ಮೇಲೆ ಒಂದೊAದು ಸಸಿ ಕಡ್ಡಾಯವಾಗಿ ನಡೆಸಿಬೇಕು ಎಂದು ನುಡಿದರು.
ಮೋಟಾರು ವಾಹನ ನಿರೀಕ್ಷರಾದ ಅನಂತುರಾಮ ಮಾತನಾಡುತ್ತ ಉತ್ತಮ ಪರಿಸರ ಸಂರಕ್ಷಣೆಗೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಿಂದ ಸಸಿಗಳನ್ನು ಪಾಲನೆ ಮತ್ತು ಪೋಷಣೆ ಮಾಡಬೇಕು ಒಂದು ಸಸಿ ಪಾಲನೆ ಮಾಡಿದರ ಹೂ, ಹಣ್ಣು ಮತ್ತು ಶುದ್ಧ ಗಾಳಿ ನೀಡುತ್ತದೆ. ಆದುದ್ದರಿಂದ ಎಲ್ಲರು ಖಾಲಿಇರುವ ಜಾಗದಲ್ಲಿ ಸಸಿ ನೆಡಬೇಕು ಎಂದು ನುಡಿದರು.
ಮೋಟಾರು ವಾಹನ ನಿರೀಕ್ಷಕರಾದ ಎಂ.ಎಸ್. ಸುಭಾಷ ಅವರು ಮಾತನಾಡುತ್ತ ವಾಹನವನ್ನು ರಸ್ತೆಯ ಮೇಲೆ ಬರುವಾಗ ಅದರ ಇಂಜಿನ್ ಕಾರ್ಬನ್ ಪಲಗ.ಮತ್ತು ಇಂಜಿನ್ ಆಯಿಲ್ ಕಾಲಕ್ಕೆ ತಕ್ಕಂತೆ ಸರ್ವಿಸಿಂಗ ಮಾಡಿಸಿಕೊಳ್ಳಬೇಕು. ವಾಹನ ಸಮಯಕ್ಕೆ ಸರಿಯಾಗಿ ಸರ್ವಿಸ ಮಾಡುವುದರಿಂದ ಮಾಲಿನ್ಯ ತಡೆಗಟ್ಟಲು ಸಾಧ್ಯ ಎಂದರು.
ರಾಜ್ಯ ಮೋಟಾರು ವಾಹನ ತರಬೇತಿ ಶಾಲೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶೀವರಾಜ ಜಮಾದಾರ ಮಾತನಾಡುತ್ತ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಹೆಚ್ಚಾಗಿ ಎಲೆಕ್ಟಿçÃಕಲ್ ಹಾಗೂ ಸಿಎನ್‌ಜಿ ವಾಹನವನ್ನು ಉಪಯೋಗಿಸಬೇಕು ಎಂದು ನುಡಿದರು.
ಖಾಯಂ ಚಾಲನೆ ಪತ್ರ (ಡ್ರೆöÊವಿಂಗ್ ಟೆಸ್ಟ್) ಮತ್ತು ವಾಹನ ನವೀಕರಣ (ಫಿಟನೇಸ್), ಡ್ರೆöÊವಿಂಗ್ ಲೈಸೆನ್ಸ್ ರಿನಿವಲ್ ಗೆ ಮತ್ತು ಇನ್ನಿತರ ಕೆಲಸಕ್ಕೆ ಬಂದಿರುವ ಸಾರ್ವಜನಿಕರಿಗೆ ಸಾರಿಗೆ ಇಲಾಖೆಯಿಂದ ಉಚಿತ ಸಸಿ ನೀಡಲಾಯಿತು.
ಈ ಕಾರ್ಯಕ್ರಮದ ವೇದಿಕೆಯ ಮೇಲೆ ಕಛೇರಿಯ ಅಧೀಕ್ಷಕರಾದ ಮಲ್ಲಿಕಾರ್ಜುನ ಎಮ್, ಬೀದರ ಮೋಟಾರು ಡ್ರೆöÊವಿಂಗ್ ಸ್ಕೂಲ ಅಧ್ಯಕ್ಷರಾದ ಪ್ರಕಾಶ ಗುಮ್ಮೆ, ಕಾರ್ಯದರ್ಶಿ, ರಾಜಕುಮಾರ ಬಿರಾದಾರ, ಬೀದರ ಜಿಲ್ಲೆ ಪಬ್ಲಿಕ್ ವರ್ಕ ಸರ್ವಿಸೆಸ್ ಅಶೋಶಿಯೇಶನ ಅಧ್ಯಕ್ಷರಾದ ಸೈಯದ ಮಕ್ಸೂದ ಅಲಿ, ಉಪಾಧ್ಯಕ್ಷರಾದ ಯೇಶಪ್ಪಾ ಚಿಟ್ಟಾ, ಖಾಯಂ ಚಾಲನೆ ಪತ್ರಕ್ಕೆ ಬಂದ ವಿದ್ಯಾರ್ಥಿ ಶ್ರೀಕಾಂತ ಇದ್ದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯ ಸಿಬ್ಬಂಧಿ ವರ್ಗದವರು, ವಾಹನ ತರಬೇತಿ ಶಾಲೆಯ ಪ್ರಾಂಶುಪಾಲರು, ಬೀದರ ಜಿಲ್ಲಾ ಪಬ್ಲಿಕ್ ವರ್ಕ್ ಸರ್ವಿಸೆಸ್ ಅಶೋಶಿಯೇಶನ್ ನ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಕಂಟೆಪ್ಪಾ ಗುಪ್ತಾ ಎಲ್ಲರನ್ನು ಸ್ವಾಗತಿಸಿದರು, ಉಮೇಶ ಉಂಡೆ ನಿರೂಪಿಸಿದರೆ, ಪಂಡಿತ ಕೆ. ವೀರಣ್ಣ ಅವರು ವಂದಿಸಿದರು.























