ಅಫಜಲಪುರ ;ಸೆ.13: ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಜೇವರ್ಗಿ
( ಬಿ) ಜೇವರ್ಗಿ(ಕೆ) ದಿಕ್ಕಂಗಾ, ನಂದರಗಾ ಗ್ರಾಮಗಳಿಗೆ ಬೋರಿಹಳ್ಳದ ನೀರು ಬಂದು ಪ್ರವಾಹ ಮೂಲಭೂತ ಪರಿಸ್ಥಿತಿ ಎದುರಾದ ಹಿನ್ನೆಲೆ ಸಂತ್ರಸ್ತರಿಗೆ ಎಲ್ಲಾ
ಸೌಲಭ್ಯಗಳು ಒದಗಿಸಲಾಗುತ್ತಿದೆ ಎಂದು ಜಿಪಂ ಸಿಇಓ ಭಂವರ್ ಸಿಂಗ್ ಮೀನಾ ಹೇಳಿದರು.
ತಾಲೂಕಿನ ಪ್ರವಾಹ ಸಂತ್ರಸ್ತ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರಯ, ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಬರುವ ಸಾದ್ಯತೆ ಇದೆ. ಸೋರುವಂತಹ ಹಾಗೂ ಬೀಳುವ ಹಂತದ ಮನೆಗಳಲ್ಲಿ ಯಾರು ವಾಸಿಸಬಾರದು. ಅಪಾಯದ ಮಟ್ಟ ಮೀರಿ ಹರಿಯುವ ಸೇತುವೆಗಳು ದಾಟುವುದು ಮತ್ತು ಯುವಕರು ರೀಲ್ಸ್‍ಗಾಗಿ ಬೈಕ್ ಮೇಲೆ ಹೋಗುವುದು
ಮಾಡಬಾರದು ಸಾರ್ವಜನಿಕರಿಗೆ ತಿಳಿಸಿದರು.
ಈಗಾಗಲೇ ನದಿ ಪ್ರವಾಹ ತಗ್ಗುತ್ತಿದ್ದು, ಒಂದು ವೇಳೆ ಮತ್ತೆ
ಪ್ರವಾಹ ಪರಿಸ್ಥಿತಿ ಎದುರಾದರೆ ಕಾಳಜಿ ಕೇಂದ್ರ ಪ್ರಾರಂಭಕ್ಕೆ ಎಲ್ಲ ಸಿದ್ಧತೆಗಳು ಮಾಡಲಾಗಿದೆ ಎಂದರು.
ಸಾರ್ವಜನಿಕರು ಎದೆಗುಂದುವ ಅವಶ್ಯಕತೆಯಿಲ್ಲ
ಜಿಲ್ಲಾಡಳಿತ ನಿಮ್ಮೊಂದಿಗಿದೆ. ನೆರೆಯಿಂದ ಹಾಳಾದ
ಬೆಳೆಗಳನ್ನು ಕಂದಾಯ ಆರ್ ಡಿಪಿಆರ್ ಇಲಾಖೆಯಿಂದ ಸರ್ವೇ ಮಾಡಿ ಪರಿಹಾರ ನೀಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಇಒ ವೀರಣ್ಣ
ಕೌಲಗಿ, ಸಹಾಯಕ ನಿರ್ದೇಶಕ ರಮೇಶ
ಪಾಟೀಲ್ ಇತರರಿದ್ದರು.

























