
ಬೀದರ್:ಫೆ.೭: ನಗರದ ಹೊರವಯದಲ್ಲಿರುವ ಲಿಂಗರಾಜ ಅಪ್ಪ್ ತಾಂತ್ರಿಕ ಮಾಹದ್ಯಾಲಯದಲ್ಲಿ ಐಇಇಇ ವಿದ್ಯಾರ್ಥಿ ಶಾಖೆ ಅಡಿಯಲಿ, ಗೇಟ್- ಜಾಮ್ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ ಕುರಿತು ಜನಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು, ಈ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನ ಸಾವಯವ ರಾಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಮ್ರಿಮೊನ್ ಡಿ ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿನಿತಾ ಪಾಟೀಲ್ ಅವರು ಉದ್ಘಾಟಿಸಿದರು, ಉದ್ಘಾಟಿಸಿ ಮಾತನಾಡಿದ, ಡಾ. ಮ್ರಿಮೊನ್ ಡಿ , ಗೇಟ್ (ಗ್ರಾಜುಯೇಟ್ ಅಟ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿAಗ)ಮತ್ತು ಜಾಮ್ (ಜಾಯಿಂಟ್ ಅಡ್ಮಿಶನ್ ಟೆಸ್ಟ್ ಫಾರ್ ಮಾಸ್ಟರ್ಸ್) ಪರೀಕ್ಷೆಗಳ ಬಗ್ಗೆ ಸಮಗ್ರ ಒಳನೋಟಗಳನ್ನು ಒದಗಿಸಿದರು, ಅವುಗಳೆಂದರೆ: ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ ತಯಾರಿ ತಂತ್ರಗಳು ಅರ್ಹತೆ ಪಡೆದ ನಂತರ ವೃತ್ತಿ ಅವಕಾಶಗಳು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ, ಸಂಶೋಧನಾ ಕಾರ್ಯಕ್ರಮಗಳು ವಿದ್ಯಾರ್ಥಿ ವೇತನಗಳು ಮತ್ತು ಕ್ಯಾಂಪಸ್ ಜೀವನಕ್ಕೆ ಸಂಬAಧಿಸಿದ ವಿದ್ಯಾರ್ಥಿ ಪ್ರಶ್ನೆಗಳನ್ನು ಪರಿಹರಿಸಿದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸೆಂಟರ್ ಫಾರ್ ಕಂಟಿನ್ಯೂಟಿ ಎಜುಕೇಶನ್ ಮತ್ತು ಪ್ರೊ ಪಿ ಏನ್ ಸಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ವಿನೀತಾ ಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ಉನ್ನತ ಅಧ್ಯಯನ ಸಂಶೋಧನಾ ವೃತ್ತಿಗಳನ್ನು ಮುಂದುವರೆಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು , ಎಲ್ಲಾ ವಿಭಾಗದ ಮುಖ್ಯಸ್ಥರು ಅಧ್ಯಾಪಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಐಇಇಇ ವಿದ್ಯಾರ್ಥಿ ಶಾಖೆಯ ಸಲಹೆಗಾರದ ಡಾ.ಬಸವಲಿಂಗ ಸ್ವಾಮಿ ಹಿರೇಮಠ ಅವರು ನಿರೂಪಿಸಿದರು.



























