
ಕಾಳಗಿ:ಡಿ.23:ಕಾಳಗಿ-ಕಮಲಾಪೂರ126 ರಾಜ್ಯ ಹೆದ್ದಾರಿ ಮಧ್ಯದಲ್ಲಿ ಬರುವ ಗೊಟೂರ-ಚಿಂಚೋಳಿ(ಎಚ್) ನಡುವಿನ ಮಾರ್ಗ ಸಂಪೂರ್ಣ ಬಂದ್ ಆಗಿರುವ ಕಾರಣ ಸಾರ್ವಜನಿಕರು ರೋಚ್ಚಿಗೆದ್ದು, ಭಿಕ್ಷೆ ಎತ್ತಿ ಹಣ ಸಂಗ್ರಹಿಸುವ ಮೂಲಕ ತಾವೇ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ಘಟನೆ ಸೋಮವಾರ ನಡೆದಿದೆ.
2005-06ರಲ್ಲಿಯೇ ನಿರ್ಮಾವಾದ ಉತ್ತಮ ರಸ್ತೆ ಕಾಳಗಿ, ಚಿಂಚೋಳಿ(ಎಚ್), ಹಳೆ ಮತ್ತು ಹೋಸ ಹೆಬ್ಬಾಳ ಮೂಲಕ ಕಲಬುರಗಿಗೆ ಕೇವಲ 35ಕಿ.ಮೀ.ನಲ್ಲಿಯೇ ಜಿಲ್ಲಾ ಕೇಂದ್ರಕ್ಕೆ ತಲುಪುವುದರಿಂದ ಈ ಭಾಗದ ಸಾರ್ವಜನಿಕರಿಗೆ ತುಂಬಾ ಅನುಕುಲವಾಗಿತ್ತು.
ಚಿಂಚೋಳಿ(ಎಚ್)ಸಿಮೆಯ ಸರ್ವೆ ನಂ.167/3ರ 7ಎಕರೆ 28ಗುಂಟೆ ಜಮೀನಿನ ಪಟ್ಟೆದಾರ ದಿ.ಶಾಮರಾವ ಗುಂಡಪ್ಪ ಚಿಟಗುಪ್ಪ ಅವರು 1996ರಲ್ಲಿ ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣವಾಗಿ ಹಾಳಾಗಿರುವುದರಿಂದ ಕೋರ್ಟ್ ಮೊರೆ ಹೊಗಿದ್ದ ಎನ್ನಲಾಗಿದೆ.
ಮುಂದೆ 2007ರಲ್ಲಿ ನ್ಯಾಯಾಲಯ ತಡೆ ನೀಡಿತ್ತು.
ಆದರೂ ಕೂಡ ನಂತರದ ದಿನಗಳಲ್ಲಿ ಅದೇ ರಸ್ತೆಯ ಮಧ್ಯದಲ್ಲಿ ಬೃಹದಾಕಾರದ ಬ್ರಿಡ್ಜ್ ನಿರ್ಮಾಣವಾಗಿ ಸುಗಮ ಸಂಚಾರಕ್ಕೆ ಅನುಕೂಲವೇ ಇತ್ತು.
ಕಳೆದ ನಾಲ್ಕು ವರ್ಷಗಳ ಹಿಂದೆ ಜಮಿನಿಗೆ ಸಂಬಂದಿಸಿರುವ ಮಾಲಿಕರು ರಸ್ತೆಯಲ್ಲಿ ಗುಂಡಿ ತೋಡಿ ರಸ್ತೆ ಸಂಪೂರ್ಣ ಬಂದ್ ಮಾಡಿರುವುದರಿಂದ ಸಾರ್ವಜನಿಕರು ಹರಸಾಹಸ ಪಡುವಂತಾಗಿದೆ.
ಹಲವಾರು ಬಾರಿ ರಸ್ತೆ ನಿರ್ಮಾಣ ಮಾಡುತ್ತಿದ್ದಂತೆ.
ಪರಿಹಾರ ನೀಡಬೆಕೆಂದು ಜಮಿನಿನ ಮಾಲಿಕರು ಮತ್ತೆ ರಸ್ತೆಯಲ್ಲಿ ಖೆಡ್ಡಾ ತೋಡುತ್ತಲೇ ಇರುತ್ತಿದ್ದರು. ಪ್ರಕ್ರೀಯೆ ಇದೆ ಪ್ರಕಾರ ನಡೆಯುತ್ತಲೇ ಇದ್ದರೂ ಸಹ ಸರಕಾರ, ಜನಪ್ರತಿನಿಧಿಗಳು, ಸಂಬಂಧಪಟ್ಟಿರುವ ಯಾವ ಇಲಾಖೆಯ ಅಧಿಕಾರಿಗಳು ಕ್ಯಾರೆ ಎನ್ನದ ಕಾರಣ ಬಹುಕಾಲ ತಾಳ್ಮೆಯಿಂದಲೇ ಇದ್ದಿರುವ ಸಾರ್ವಜನಿಕರು,
ಸೋಮವಾರ ರೋಚ್ಚಿಗೆದ್ದು, ಸ್ವತಃ ತಾವುಗಳೆ ರಸ್ತೆಗಿಳಿದು ಪ್ರತಿಭಟಿಸುವ ಮೂಲಕ ಚಂದಾ-ಪಟ್ಟಿ ಮಾಡಿ ರಸ್ತೆ ದುರಸ್ತಿ ಕಾರ್ಯ ಮಾಡಿದರು.
ರಸ್ತೆ ಬಂದಾಗಿರುವ ಕಾರಣ ಗೊಟೂರು, ಬಣಬಿ, ಹಿಪ್ಪರಗಿ, ಹೇರೂರ, ಶೆಳ್ಳಗಿ, ಕಂದಗೋಳ, ಹುಳಗೇರಾ, ಹೊಸ ಮತ್ತು ಹಳೆ ಹೆಬ್ಬಾಳ, ಚಿಂಚೋಳಿ(ಎಚ್), ತೊಂಚಿ-ಕಮನೂರಿನ ಸಾರ್ವಜನಿಕರು ಸುಗಮ ಚಾರವಿಲ್ಲದೆ ರಸ್ತೆಗಾಗಿ ಕಂಗಾಲಾಗಿದ್ದಾರೆ.
ಜಮಿನಿನ ಮಾಲಿಕ ಹಾಗೂ ಸಾರ್ವಜನಿಕರ ಮಧ್ಯೆ ನಡೆಯುತ್ತಿರುವ ವಾಗ್ವಾದ ತಿಳಿದರೂ ಕೂಡಾ ಯಾವ ಅಧಿಕಾರಿಗಳು ಸ್ಥಳಪರಿಶಿಲನೆಗೆ ಬಾರದೆ ಇದ್ದರು.
112ನವರು ಸ್ಥಳಕ್ಕೆ ಆಗಮಿಸಿ ಸಾಂತ್ವಾನ ಹೇಳಿದರೂ ಕೆಳದ ಸಾರ್ವಜನಿಕರು ಮತ್ತು ಜಮಿನಿನ ಮಾಲಿಕರು ಪಟ್ಟು ಹಿಡಿದರು.
ಸರಕಾರ ಅಥವಾ ಸಂಬಂಧ ಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ನಿರ್ಮಾಣಕ್ಕೆ ಮುಂದಾದರೆ ಸರಿ.ಇಲ್ಲವಾದರೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದರು.
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ರಸ್ತೆ ಸಮಸ್ಯೆಗೆ ಪರಿಹಾರ ಸಿಗುತ್ತದೆಯೋ.. ಇಲ್ಲವೋ.. ಕಾದುನೋಡಬೇಕಾಗಿದೆ.
ಗೋಟೂರ ಗ್ರಾಪಂ.ಅಧ್ಯಕ್ಷ ಶಿವಕುಮಾರ ಕಮಕನೂರ, ಮಶಾಕ ಪಟೇಲ್, ಲಕ್ಷ್ಮಣ ಮಾರನ್, ಅಣ್ಣರಾವ ಸಲಗಾರ, ನಾಗರಾಜ ಸಲಗಾರ, ಜಗನ್ನಾಥ ತೇಲಿ, ಅಣವೀರ ಮೇಳಗಿ, ಪ್ರಭುರೆಡ್ಡಿ ಭಾವಿ, ಮಲ್ಲಿಕಾರ್ಜುನ ಸಿಂಗೆ, ಅಶೋಕ ಹೂಗೊಂಡ, ಸಿದ್ದಣ್ಣ ಜಮಾದಾರ, ಸಂಜಕುಮಾರ ಕವನಳ್ಳಿ, ಸಿದ್ದಾರ್ಥ ಮಾರನ್, ಶಶಿಕಾಂತ ರಾಖಾ, ಬಾಬು ಮುಸ್ಲಿ, ಚಂದ್ರಶಾ ತೇಲಿ, ಹುಸೇನ್ ಕಂದಗೂಳ, ಅಂಬಣ್ಣ ಹೂಗಾರ, ಅಣ್ಣಪ್ಪಾ ಸಿಂಗೆ, ಮಲ್ಲಿನಾಥ ತೇಲಿ, ಶಿವಲಿಂಗಪ್ಪ ಮಡಿವಾಳ, ಬಾಬು ಬುಡನೂರ ಸೇರಿದಂತೆ ಅನೇಕರು ಇದ್ದರು























