Home ಜಿಲ್ಲೆ ಬೆಂಗಳೂರು ಭ್ರಷ್ಟಾಚಾರ ಮುಕ್ತ ಮಾಲೂರಿಗೆ ಜನರ ಸಹಕಾರ ಅಗತ್ಯ

ಭ್ರಷ್ಟಾಚಾರ ಮುಕ್ತ ಮಾಲೂರಿಗೆ ಜನರ ಸಹಕಾರ ಅಗತ್ಯ

ಮಾಲೂರು,ಅ.೮ : ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಜನರು ಸಹಕಾರ ನೀಡಬೇಕು.ಭ್ರಷ್ಟಾಚಾರ ತೊಲಗಿಸಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ಮನವಿ ಮಾಡಿದರು.


ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದಲ್ಲಿ ಆಯೋಜಿಸಿದ್ದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಲೂರು ಕ್ಷೇತ್ರದಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.


ಮಾಜಿ ಸಂಸದ ಎಸ್. ಮುನಿಸ್ವಾಮಿ ಮಾತನಾಡಿ,ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಬಿಜೆಪಿ ಮುಖಂಡರು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕು.ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ನರೇಂದ್ರ ಮೋದಿ ಆಡಳಿತ ನಮಗೆಲ್ಲರಿಗೂ ಪ್ರೇರಣೆಯಾಗಬೇಕು. ಮುಂಬರುವ ಚುನಾವಣೆಯಲ್ಲಿ ಮಂಜುನಾಥಗೌಡರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಆಗಬೇಕು ಎಂದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಮಹೇಶ್, ತಾಲ್ಲೂಕು ಅಧ್ಯಕ್ಷ ಬಿ. ಕೃಷ್ಣಪ್ಪ, ವಾಸು ದೇವ್, ಬೆಗ್ಲಿ ಸೂರ್ಯ ಪ್ರಕಾಶ್, ಜಿ. ಪಂ. ಮಾಜಿ ಸದಸ್ಯ ಚಿನ್ನಸ್ವಾಮಿಗೌಡ, ನಗರಸಭೆ ಮಾಜಿ ಸದಸ್ಯರಾದ ಎಂ. ವಿ. ವವನ, ಎಂ. ಎಸ್. ಪ್ರದೀಪ್ ರೆಡ್ಡಿ, ಸೊಸೈಟಿ ವೆಂಕಟೇಶ್ ಮುಖಂಡರಾದ ಅಗ್ರಿ ನಾರಾಯಣಪ್ಪ, ಸೋಮಣ್ಣ ಜಗನ್ನಾಥ್ ರೆಡ್ಡಿ, ಸಂಪತ್, ಸೈಯದ್ ಅಗ್ಜರ್, ಎ. ಪಿಂ. ಚಂದ್ರಶೇಖರ್, ಅಧಿಕಾರಹಟ್ಟಿ ಬಾಬು, ಪದ್ಮಾವತಿ, ಅನಿತಾ ನಾಗರಾಜು, ಅಮದಾ, ವೇಣು, ಕಿರಣ್, ನಂದೀಶ, ಶಂಕರ್ ಸಾಯಿ, ವೆಂಕಟೇಶ, ವಿಜಯ್ ಕುಮಾರ್, ದೊಡ್ಡಿ ರಾಜಪ್ಪ, ಕೂರಂಡಳ್ಳಿ ರಾಜು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.