
ಅಥಣಿ :ಜು.25: ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಥಣಿ ಪಟ್ಟಣದ 4 ವೃತ್ತಗಳಲ್ಲಿ ಎಐ ಆಧಾರಿತ ಸಂಚಾರ ಕ್ಯಾಮೆರಾಗಳು ಕಾರ್ಯಾರಂಭಿಸಿವೆ ಎಂದು ಅಥಣಿ ಪೆÇಲೀಸ್ ಇಲಾಖೆಯ ಮೂಲಗಳು ತಿಳಿಸಿದೆ.
ಈಗಾಗಲೇ ಪಟ್ಟಣದ ಎರಡು ವೃತ್ತಗಳಲ್ಲಿ ಎಐ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಸಂಗೊಳ್ಳಿ ರಾಯಣ್ಣ ವೃತ್ತ, ಶಿವಯೋಗಿ ಸರ್ಕಲ್ (ಹಳ್ಯಾಳ ಸರ್ಕಲ್), ಜತ್ತ ರಸ್ತೆ ಚಮಕೇರಿ ಮಡ್ಡಿ ಕ್ರಾಸ್ ಹಾಗೂ ಪಟ್ಟಣದ ಹೊರವಲಯದ ಮುರುಗುಂಡಿ ರಸ್ತೆಯಲ್ಲಿ ಹೊಸದಾಗಿ ನಾಲ್ಕು ಎಐ ಕ್ಯಾಮೆರಾಗಳನ್ನು ಅಳವಡಿಸಿ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ಈ ಮೂಲಕ ಅಥಣಿ ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಐ ಕ್ಯಾಮೆರಾಗಳ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.
ಸಂಚಾರ ನಿಯಮ ಉಲ್ಲಂಘನೆ, ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಸೀಟ್ ಬೆಲ್ಟ್ ಬಳಸದಿರುವುದು, ಮೊಬೈಲ್ ಫೆÇೀನ್ ಬಳಸಿ ವಾಹನ ಚಲಾಯಿಸುವುದು ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳನ್ನು ಎಐ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ಪತ್ತೆ ಹಚ್ಚಲಿದೆ ಎಂದು ಪೆÇಲೀಸ್ ಇಲಾಖೆ ತಿಳಿಸಿದೆ.
ರಸ್ತೆ ಸುರಕ್ಷತೆಗಾಗಿ ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ವಾಹನ ಸವಾರರು ಹೆಲ್ಮೇಟ್ ಧರಿಸುವುದು, ಸೀಟ್ ಬೆಲ್ಟ್ ಹಾಕುವುದು ಮತ್ತು ಮೊಬೈಲ್ ಬಳಸದಂತೆ ಕಡ್ಡಾಯವಾಗಿ ನಿಯಮ ಪಾಲಿಸಬೇಕು.ಎಐ ಕ್ಯಾಮೆರಾ ಕಾರ್ಯನಿರ್ವಹಣೆ ಸ್ವಯಂಚಾಲಿತವಾಗಿದ್ದು ಹೆಲ್ಮಟ್, ಸೀಟ್ ಬೆಲ್ಟ್ ಹಾಗೂ ಟ್ರಿಪಲ್ ರೈಡಿಂಗ್ ಉಲ್ಲಂಘನೆಗಳನ್ನು ಕ್ಯಾಮೆರಾ ಸೆರೆಹಿಡಿಯುತ್ತದೆ ನಿಯಮ ಉಲ್ಲಂಘಿಸಿದರೆ ವಾಹನ ಮಾಲೀಕರ ಮೊಬೈಲ್ ಅಥವಾ ಮನೆಗೆ ನೇರವಾಗಿ ದಂಡದ (ಇ-ಚಲನ್) ಸಂದೇಶ ತಲುಪುತ್ತದೆ.
ಜಿಲ್ಲಾ ಕಮಾಂಡ್ ಕೇಂದ್ರಗಳ ಮೂಲಕ ರಸ್ತೆಗಳ ಮೇಲೆ ತೀವ್ರ ಕಣ್ಗಾವಲಿಡಲಾಗಿದೆ ಎಂದು ಅವರು ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೊಳಿ ಮನವಿ ತಿಳಿಸಿದ್ದಾರೆ.































