ಅಂಚೆ ಇಲಾಖೆಯಿಂದ ಜನಜಾಗೃತಿ ಜಾಥಾ


ಬಾಗಲಕೋಟೆ,ಫೆ.೪: ೧೪೨ನೇ ಪಿಎಲ್‌ಐ (ಪೋಸ್ಟಲ್ ಲೈಫ್ ಇನ್ಶುರನ್ಸ್) ದಿನಾಚರಣೆ ಪ್ರಯುಕ್ತ ಬಾಗಲಕೋಟೆ ಪ್ರಧಾನ ಅಂಚೆ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯಿAದ ನಗರದಲ್ಲಿ ಜನಜಾಗೃತಿ ಜಾಥಾ ನಡೆಯಿತು. ಜಾಥಾಕ್ಕೆ ಪ್ರಧಾನ ಅಂಚೆ ಕಚೇರಿ ಅಧೀಕ್ಷಕ ಮೋಹನ್ ಮಾಳೋದೆ ಚಾಲನೆ ನೀಡಿದರು.


ನಂತರ ಅಂಚೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಧಾನ ಅಂಚೆ ಕಚೇರಿಯಿಂದ ರೈಲು ನಿಲ್ದಾಣ, ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಜಾಥಾ ನಡೆಸಿದರು, ವೃತ್ತದಲ್ಲಿ ಪಿಎಲ್‌ಐ ಯೋಜನೆಯ ಕುರಿತ ಜಾಗೃತಿಯ ಘೋಷಣೆ ಕೂಗಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಸಹಾಯಕ ಅಂಚೆ ಅಧೀಕ್ಷಕ ಸಿ.ಐ. ಕಾಂಬಳಿ, ಅಧಿಕಾರಿಗಳಾದ ರವೀಂದ್ರ ನಾಯಕ, ಪೋಸ್ಟಾ÷್ಮಸ್ಟರ್ ಎಸ್.ಬಿ. ಮೇಲಿನಮನಿ, ಡಿಒಪಿಎಲ್‌ಐ ಹನಮಂತ ಹೂಗಾರ ಸೇರಿದಂತೆ ನಗರದ ವಿವಿಧ ಅಂಚೆ ಕಚೇರಿ ಶಾಖೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.