ಪಿಯು ಇಲಾಖೆ ಮೇಲಾಧಿಕಾರಿಗಳಿಗೆ ಉಪನ್ಯಾಸಕರು ಕಾಲೇಜಿಗೆ ಗೈರು ಸತ್ಯಾಸತ್ಯತೆಯ ವರದಿ ಸಲ್ಲಿಕೆಗೆ ಡಿಡಿಪಿಯುರಿಗೆ ಮನವಿ

ಕೋಲಾರ,ಆ.28- ನಗರದ ಸರ್ಕಾರಿ ಬಾಲಕಿಯರ ಜೂನಿಯರ್ ಪಿಯು ಕಾಲೇಜಿನ ಉಪನ್ಯಾಸಕರಾದ ಅಶ್ವಥಗೌಡ ಹಾಗೂ ದಿನಕರ್ ಸೇರಿದಂತೆ, ಡಿಡಿಪಿಯು ಪ್ರಭಾರ ಬಾಲಕೃಷ್ಣ ಇವರ ಮೇಲಿನ ದೂರಿನ ತನಿಖೆಯ ಸಾಕ್ಷಾಧಾರಗಳನ್ನು ಸಮರ್ಪಕವಾಗಿ ಸಂಗ್ರಹಿಸಿ ನಿಷ್ಪಕ್ಷಪಾತ ವರದಿಯನ್ನು ಡಿಡಿಪಿಯು ಅವರು ಮೇಲಾಧಿಕಾರಿಗಳಿಗೆ ಶೀಘ್ರವಾಗಿ ಸಲ್ಲಿಸಬೇಕು ಎಂದು ಕೋಲಾರ ಜಿಲ್ಲಾ ನಿವೃತ್ತಿ ನೌಕರರ ವೇದಿಕೆ ಅಧ್ಯಕ್ಷ ಜಿ.ಎಂ ಗೋಪಿಕೃಷ್ಣನ್ ಹಾಗೂ ಗೌರವಾಧ್ಯಕ್ಷ ಪಿ ರವೀಂದ್ರನಾಥ್ ಡಿಡಿಪಿಯು ಮಂಜುಳ ಅವರಿಗೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ನಿವೃತ್ತ ನೌಕರರ ವೇದಿಕೆ ಅಧ್ಯಕ್ಷ ಜಿ.ಎಂ ಗೋಪಿಕೃಷ್ಣನ್ ಹಾಗೂ ಗೌರವಾಧ್ಯಕ್ಷ ಪಿ ರವೀಂದ್ರನಾಥ್ ಮನವಿ ನೀಡಿ ಮಾತನಾಡಿ, ಕೋಲಾರ ಜಿಲ್ಲಾ ಡಿಡಿಪಿಯು ಮಂಜುಳಾ ಅವರು, ಆಗಸ್ಟ್ ೮ ರಂದು ನೀಡಿರುವ ದೂರಿಗೆ ಸಂಬಂಧಿಸಿದಂತೆ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿ ಸಾಕ್ಷಿಯಾಗಿ ನೀಡಿರುವ ಪೆನ್‌ಡ್ರೈವ್ ಅನ್ನು ಪರಿಶೀಲಿಸಿ, ಕಾಲೇಜಿನ ತರಗತಿಗಳನ್ನು ಬಹಿಷ್ಕರಿಸಿ ಅಶ್ವಥಗೌಡ ಹಾಗೂ ದಿನಕರ್ ಅವರು ಭೇಟಿ ನೀಡಿರುವ ಕಾಲೇಜುಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಮಗ್ರವಾಗಿ ಸಂಗ್ರಹಿಸಿ, ಮೇಲಾಧಿಕಾರಿಗಳ ನೈಜವಾದ, ನಿಷ್ಪಕ್ಷಪಾತವಾಗಿ ವರದಿಯನ್ನು ನೀಡಬೇಕೆಂದು ಆಗ್ರಹಿಸಿದರು.


ಡಿಡಿಪಿಯು ಮಂಜುಳಾ ಅವರು ಸಹಕಾರ ನಮ್ಮ ಮೇಲೆ ಇದೆ, ಅವರು ನಮ್ಮ ಪರವಾಗಿ ವರದಿ ನೀಡಿದ್ದಾರೆಂದು ಎಂದು ಅಪಪ್ರಚಾರ ಮಾಡುತ್ತಿದ್ದು, ಆದ ಕಾರಣ ಉಪನಿರ್ದೇಶಕರು ನೈತಿಕ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಮಕ್ಕಳಿಗೆ ಪಾಠ ಮಾಡಿರುವ ತಾವುಗಳು ಸತ್ಯದ ವರದಿಯನ್ನು ನೀಡಬೇಕೆಂದರು.


ಅಪ್ರಾಪ್ತ ವಿದ್ಯಾರ್ಥಿನಿಯರನ್ನು ರಸ್ತೆಗಳಲ್ಲಿ ಪ್ರಭಾರ ಡಿಡಿಪಿಯು ಬಾಲಕೃಷ್ಣ ಅವರ ಬಿಳ್ಕೊಡುಗೆಯ ಮೆರವಣಿಗೆಯಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯಗಳನ್ನು ಮಾಡಿಸಿಕೊಂಡು, ಹಾಗೂ ಕಾಲೇಜಿನ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಮೂರು ದಿನಗಳ ಕಾಲ ಪಾಠ ಮಾಡದೆ ಹಾಗೂ ಕಾಲೇಜಿನಲ್ಲಿ ಇರದೆ ಜಿಲ್ಲೆಯ ಹಲವು ತಾಲೂಕುಗಳ ಕಾಲೇಜುಗಳಿಗೆ ಹೋಗಿ ಕರ್ತವ್ಯ ಲೋಪವೆಸಗಿದ್ದು ಮತ್ತು ಈಗಿನ ಪ್ರಭಾರ ಪ್ರಾಂಶುಪಾಲ ಉದಯಕುಮಾರ್ ಅವರು ಜುಲೈ ೨೪, ೨೫ ೨೬ ಮೂರು ದಿನಗಳ ಕಾಲ ಇವರ ಜೊತೆಯಲ್ಲಿ ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳಿಗೆ ಓಡಾಡಿದ್ದಾರೆ, ಉದಯಕುಮಾರ್ ಅವರಿಗೆ ಯಾರು ಅನುಮತಿ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.


ಈ ಬಗ್ಗೆ ಕಾಲೇಜಿನ ವಿದ್ಯಾರ್ಥಿನಿಯರನ್ನು ಈ ಇಬ್ಬರು ಉಪನ್ಯಾಸಕರು ತಾವು ಹೇಗೆ ಹೇಳಿದರೆ ಆ ರೀತಿ ಮಾಡಬೇಕೆಂದು ಇವರಿಬ್ಬರ ಪ್ರಭಾವ ವಿದ್ಯಾರ್ಥಿಗಳ ಮೇಲೆ ಹಾಗೂ ಉಪನ್ಯಾಸಕರ ಮೇಲೆ ಬಹಳಷ್ಟಿದೆ. ಹಾಗಾಗಿ ವಿದ್ಯಾರ್ಥಿನಿಯರು ಈ ಉಪನ್ಯಾಸಕರುಗಳು ಪಾಠ ಮಾಡದೆ, ಹೋದರು ಇವರ ಪರವಾಗಿ ಹೇಳಿಕೆಗಳನ್ನು ನೀಡುವಂತೆ ಮಾಡುತ್ತಾರೆ. ಅಪ್ರಾಪ್ತ ವಿದ್ಯಾರ್ಥಿನಿಯರ ಹೇಳಿಕೆಗಳನ್ನು ಸಾಕ್ಷಿಯಾಗಿ ಪರಿಗಣಿಸದೆ, ಕಾಲೇಜಿನಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಇವರನ್ನು ನೋಡಿದರೆ ಭಯಪಡುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.


ಇಬ್ಬರು ಉಪನ್ಯಾಸಕರು ಜಿಲ್ಲೆಯ ಕಾಲೇಜುಗಳಿಗೆ ಭೇಟಿ ನೀಡಿರುವ ಮಾಹಿತಿ : ಜುಲೈ ೨೪ರಂದು ಎನ್.ಜಿ.ಪಿಯು, ವೇಮಗಲ್ ಹಾಗೂ ನರಸಾಪುರ ಪಿಯು ಕಾಲೇಜು, ಸರ್ಕಾರಿ ಕಾಲೇಜು ಕೋಲಾರ, ಜುಲೈ ೨೫ರಂದು ಬೆಳಿಗ್ಗೆ ೧೧: ೩೦ಕ್ಕೆ ಮುಳಬಾಗಿಲು ಜೂನಿಯರ್ ಪಿಯು ಕಾಲೇಜು, ೨೬ರಂದು ಮಾಲೂರು ಕಾಲೇಜುಗಳಿಗೆ ಉಪನಿರ್ದೇಶಕರು ತಕ್ಷಣವೇ ಈ ಎಲ್ಲಾ ಕಾಲೇಜುಗಳಿಗೆ ಸಿಸಿ ಕ್ಯಾಮೆರಾ ತಂತ್ರಜ್ಞರನ್ನು ಕರೆದುಕೊಂಡು ಜೊತೆಯಲ್ಲಿ ದೂರುದಾರರನ್ನು ಸಹ ಕರೆದುಕೊಂಡು ಹೋಗಿ ಇವರು ಭೇಟಿ ನೀಡಿರುವ ಸರ್ಕಾರಿ ಕಾಲೇಜುಗಳಿಗೆ ಭೇಟಿ ನೀಡಿರುವ ದೃಶ್ಯಾವಳಿಗಳನ್ನು ಸಿಸಿ ಕ್ಯಾಮೆರಾದಿಂದ ಪಡೆದುಕೊಳ್ಳಬೇಕೆಂದು ಒತ್ತಾಯಿಸಿ, ಉಪ ನಿರ್ದೇಶಕರು ತಕ್ಷಣ ಸತ್ಯತೆಯ ಪರವಾದ ವರದಿಯನ್ನು ಸಲ್ಲಿಸುವಂತೆ ಮನವಿ ಮಾಡಿದರು.