ಬೆಳೆ ವಿಮೆ ಹಣ ಬಿಡುಗಡೆ ಮಾಡಲು ಪ್ರಾಂತ ರೈತ ಸಂಘ ಆಗ್ರಹ

ಕಲಬುರಗಿ,ಮೇ.21-ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ರೈತರಿಗೆ ಮುಂಗಾರು ಬಿತ್ತನೆಗೆ ಬೀಜ, ರಸಗೊಬ್ಬರ ಖರೀದಿಗೆ ಆಸರೆಯಾಗಲು ಬೆಳೆ ವಿಮೆ ಹಣ ಬಿಡುಗಡೆ ಮಾಡುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ ಆಗ್ರಹಿಸಿದೆ.
ಈ ಸಂಬಂಧ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಮುಖಾಂತರ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಇಸ್ಕೊ ಟೋಕಿಯೊ ಇನ್ಸೂರೆನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ತೊಗರಿ ಬೆಳೆ ನಷ್ಟ ಪರಿಹಾರ ಮಂಜೂರು ಮಾಡಲು ರೈತ ಸಂಘ ಹೋರಾಟ ನಡೆಸಿದಾಗ ವರದಿ ತರಿಸಿಕೊಂಡು ಪರಿಹಾರ ಘೋಷಿಸಲು ಮುಖ್ಯಮಂತ್ರಿಗಳು ಭರವಸೆ ನಿಡದ್ದರು. ಮುಖ್ಯಮಂತ್ರಿಗಳು ನೀಡಿದ್ದ ಭರವಸೆ ಭರವಸೆಯಾಗಿಯೇ ಉಳಿದಿದೆ. ಮುಖ್ಯಮಂತ್ರಿಗಳ ಬಳಿ ತೊಗರಿ ರೈತರ ನಿಯೋಗ ಹೋದಾಗ ಬೆಳೆ ವಿಮೆ ಹಣ 600 ಕೋಟಿ ರೂಪಾಯಿ ಕೊಡುವುದಾಗಿ ಹೇಳಿ ವಿಮೆ ಘೋಷಣೆ ಮಾಡಿದ್ದರು. ವಿಮೆ ಹಣ ಘೋಷಿಸಿ 2 ತಿಂಗಳ ಗತಿಸಿದರು ಇಲ್ಲಿಯವರೆಗೆ ನಯಾ ಪೈಸೆ ವಿಮೆ ಹಣ ಬಂದಿಲ್ಲ. ರೈತರು ಜೂನ್ ಮೊದಲನೆಯ ವಾರದಲ್ಲಿ ಒಂದು ವೇಳೆ ಮಳೆರಾಯ ಕರುಣೆ ತೊರಿದರೆ ಮಳೆ ಬರುವ ನಿರೀಕ್ಷೆ ಇದೆ ಎಂದು ರೈತರು ಮುಂಗಾರು ಬಿತ್ತನೆ ಮಾಡಲು ಬೀಜ, ರಸಗೊಬ್ಬರ ಖರೀದಿಗೆ ಮುಂದಾಗಲಿದ್ದಾರೆ. ವಿಮೆ ಹಣ ರೈತರ ಖಾತೆಗೆ ಜಮೆ ಮಾಡಿದರೆ ಮುಂಗಾರು ಬಿತ್ತನೆಗೆ ಆಸರೆ ಆಗಲಿದೆ. ಈಗಾಗಲೇ ರಾಜ್ಯ ಸರ್ಕಾರ 76 ಕೋಟಿ ರೂಪಾಯಿ ಮತ್ತು 112 ಕೋಟಿ ರೂಪಾಯಿ ಮಾತ್ರ ಬಿಡುಗಡೆ ವಿಮೆ ಹಣ ಬಿಡುಗಡೆ ಮಾಡಿದೆ ಆದರೆ ಇನ್ನೂ ಅನೆಕ ರೈತರಿಗೆ ವಿಮೆ ಹಣ ಬರಬೆಕಾಗಿದೆ. ಇದು ಒಂದು ರೈತರ ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಿದಂತಾಗುತ್ತದೆ. ಹೀಗಾಗಿ ರೈತರಲ್ಲಿ ಗೊಂದಲಕ್ಕೆ ಎಡೆಮಾಡಿಕೊಡದೆ ಒಟ್ಟಾರೆ ಘೋಷಣೆ ಮಾಡಿದ 600 ಕೋಟಿ ರೂಪಾಯಿ ಬೆಳೆ ವಿಮೆ ಹಣ ತಕ್ಷಣವೇ ಬಿಡುಗಡೆ ಮಾಡಿ ಎಲ್ಲಾ ರೈತರಿಗೆ ಬೆಳೆ ವಿಮೆ ಅವರ ಖಾತೆಗೆ ಹಾಕಿ ಮುಂಗಾರು ಬಿತ್ತನೆಗೆ ರೈತರ ನೆರವಾಗಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ದಿಲೀಪ ನಾಗೂರೆ, ಸಿದ್ದರಾಮ ದಣ್ಣೂರ, ದೇವು ಬಿರಾದಾರ, ಸುನಿಲ ಹೇರೂರ, ಚಂದಪ್ಪ ಪೂಜಾರಿ, ನಾಗೇಂದ್ರ ಡಿಗ್ಗಿ, ಮಹಾದೇವ ಡಿಗ್ಗಿ, ಸಿದ್ದಣ್ಣ ಪಾಟೀಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.